ಸಮೀಪದ ಯರಮರಸ್ ಕ್ಯಾಂಪ್‌ನ ಫೆಡರಲ್ ಶಿಕ್ಷಣ ಸಂಸ್ಥೆಯಿಂದ ಇದೇ ಆ.26 ರಿಂದ 30ವರೆಗೆ ಸ್ಥಳೀಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಮೈದಾನದಲ್ಲಿ ರಾಜ್ಯ ಮಟ್ಟದ ಸಿಬಿಎಸ್ಇ ಅಥ್ಲೆಟಿಕ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆ ಸಂಚಾಲಿತ ಸಿಬಿಎಸ್ಇ ಶಾಲೆ ಪ್ರಾಚಾರ್ಯ ಎಂ.ಡಿ.ನೌಶದ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ರಾಯಚೂರು
ಸಮೀಪದ ಯರಮರಸ್ ಕ್ಯಾಂಪ್‌ನ ಫೆಡರಲ್ ಶಿಕ್ಷಣ ಸಂಸ್ಥೆಯಿಂದ ಇದೇ ಆ.26 ರಿಂದ 30ವರೆಗೆ ಸ್ಥಳೀಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಮೈದಾನದಲ್ಲಿ ರಾಜ್ಯ ಮಟ್ಟದ ಸಿಬಿಎಸ್ಇ ಅಥ್ಲೆಟಿಕ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆ ಸಂಚಾಲಿತ ಸಿಬಿಎಸ್ಇ ಶಾಲೆ ಪ್ರಾಚಾರ್ಯ ಎಂ.ಡಿ.ನೌಶದ್ ತಿಳಿಸಿದರು.ಭಾನುವಾರ ಮಾತನಾಡಿದ ಅವರು, ಐದು ದಿನಗಳ ಕಾಲ ಜರುಗಲಿರುವ ಕ್ರೀಡಾಕೂಟದಲ್ಲಿ ವಿವಿಧ 15ಕ್ಕೂ ಹೆಚ್ಚು ಕ್ರೀಡೆಗಳನ್ನು ನಡೆಸುತ್ತಿದ್ದು, ಸುಮಾರು ಐದು ಸಾವಿರ ಕ್ರೀಡಾಪಟುಗಳು, ತರಬೇತಿದಾರರು ಸೇರಿ ಒಟ್ಟು 9,200 ಜನರು ಆಗಮಿಸುವ ನಿರೀಕ್ಷೆಯನ್ನು ಹೊಂದಲಾಗಿದೆ. ಬಾಲಕರು ಮತ್ತು ಬಾಲಕಿಯರಿಗೆ ಪ್ರತ್ಯೇಕವಾಗಿ ನಡೆಯಲಿರುವ ಕ್ರೀಡೆಗಳ ವ್ಯವಸ್ಥೆ ಮಾಡಲಾಗಿದೆ. ವಿಜೇತರು ರಾಷ್ಟ್ರಯ ತಂಡಕ್ಕೆ ಆಯ್ಕೆಯಾಗಲಿದ್ದಾರೆ ಎಂದರು.
ಪಂದ್ಯಾವಳಿಯ ಉದ್ಘಾಟನೆ ನೆರವೇರಿಸಲು ಉಪಮುಖ್ಯಮಂತ್ರಿ ಹಾಗೂ ಕ್ರೀಡಾ ಸಚಿವ ಡಾ.ಜಿ.ಪರಮೇಶ್ವರ ಅವರಿಗೆ ಆಹ್ವಾನ ನೀಡಿದ್ದು, 30ರ ಸಂಜೆ ಶಾಲೆ ಆವರಣದಲ್ಲಿ ನಡೆಯಲಿರುವ ಸಮಾರೋಪಕ್ಕೆ ಉಸ್ತುವಾರಿ ಸಚಿವ ಡಾ.ಅಜಯ ಧರ್ಮಸಿಂಗ್ ಅವರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.ಕ್ರೀಡಾಕುಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ, ತರಬೇತಿದಾರರಿಗೆ ಸಾರಿಗೆ, ವಸತಿ, ಊಟ, ನೀರು ಹಾಗೂ ಇನ್ನಿತರ ಅಗತ್ಯ ಸವಲತ್ತುಗಳನ್ನು ಕಲ್ಪಿಸಿಕೊಡಲಾಗುತ್ತಿದ್ದು, ಇದರ ಜೊತೆಗೆ ಐದು ದಿನಗಳ ಕಾಲ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ನಡೆಸಲಾಗುತ್ತಿದೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಮೊಹ್ಮದ ಅಬ್ದುಲ್ ಹೈ ಫೀರೋಜ್, ದೈಹಿಕ ಶಿಕ್ಷಕ ಕಿರಣ, ಸಹ ಶಿಕ್ಷಕರಾದ ಖಾಜಾ ಬಂದೇ ನವಾಜ್, ವಿಶಾಲ್ ಕುಮಾರ ಇದ್ದರು.---
23ಕೆಪಿಆರ್ಸಿಆರ್ 02: ಎಂ.ಡಿ.ನೌಶದ್