ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಉಡುಪಿ ಜಿಲ್ಲಾ ಅಥ್ಲೆಟಿಕ್ ಸಂಸ್ಥೆ ಹಾಗೂ ರಾಜ್ಯ ಅಥ್ಲೆಟಿಕ್ ಸಂಸ್ಥೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಜೂ.೬ ಮತ್ತು ೭ರಂದು ಮಹಾತ್ ಗಾಂಧಿ ಜಿಲ್ಲಾ ಕ್ರೀಡಾಂಗಣ ಉಡುಪಿಯಲ್ಲಿ ನಡೆದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್ ಒಟ್ಟು ೧೩ ಚಿನ್ನ, ೭ ಬೆಳ್ಳಿ ಮತ್ತು ೦೫ ಕಂಚಿನ ಪದಕಗಳೊಂದಿಗೆ ೨೫ ಪದಕಗಳನ್ನು ಪಡೆದುಕೊಂಡಿದೆ.೧೮ರ ಕಿರಿಯ ಬಾಲಕರ ವಿಭಾಗದಲ್ಲಿ ವಿನಾಯಕ್- ೫ ಕಿ.ಮೀ. ನಡಿಗೆ(ಪ್ರಥಮ), ನೋಯಲ್- ಉದ್ದಜಿಗಿತ (ಪ್ರಥಮ), ತೇಜಲ್- ೧೧೦ಮೀಟರ್ ಹರ್ಡಲ್ಸ್ (ಪ್ರಥಮ), ದಯಾನಂದ- ೪೦೦ಮೀ. (ಪ್ರಥಮ), ಶೋಭಿತ್ ದೇವಾಡಿಗ-ಚಕ್ರಎಸೆತ (ದ್ವಿತೀಯ), ಗುಂಡು ಎಸೆತ(ತೃತೀಯ) ಬಹುಮಾನ ಗಳಿಸಿದ್ದಾರೆ. ೧೮ರ ಕಿರಿಯ ಬಾಲಕಿಯರ ವಿಭಾಗದಲ್ಲಿ ರೀತುಶ್ರೀ- ೨೦೦ಮೀ., ೪೦೦ಮೀ. (ಪ್ರಥಮ), ಅಂಬಿಕಾ- ೩ ಕಿ.ಮೀ. ನಡಿಗೆ (ಪ್ರಥಮ), ವೃತಾ ಹೆಗ್ಡೆ- ಗುಂಡುಎಸೆತ (ದ್ವಿತೀಯ), ವಿಸ್ಮಿತಾ- ಗುಂಡು ಎಸೆತ (ತೃತೀಯ) ಹಾಗೂ ಪುರುಷರ ವಿಭಾಗದಲ್ಲಿ ನಾಗೇಂದ್ರ ಅಣ್ಣಪ್ಪ- ಚಕ್ರಎಸೆತ (ಪ್ರಥಮ), ಮಹಂತೇಶ್- ೪೦೦ ಮೀ. (ದ್ವಿತೀಯ), ಸುಶಾನ-ಉದ್ದಜಿಗಿತ (ದ್ವಿತೀಯ), ಅಕ್ಷಯ್- ೪೦೦ಮೀ. ಹರ್ಡಲ್ಸ್ (ದ್ವಿತೀಯ), ತೀರ್ಥೆಶ್- ೪೦೦ಮೀ. (ತೃತೀಯ) ಬಹುಮಾನ ಗಳಿಸಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಲಕ್ಷ್ಮೀ ೫,೦೦೦ಮೀ,೧೦,೦೦೦ಮೀ(ಪ್ರಥಮ), ಶ್ರೀದೇವಿಕಾ- ಉದ್ದ ಜಿಗಿತ (ಪ್ರಥಮ), ಸುಷ್ಮಾ- ಚಕ್ರ ಎಸೆತ(ಪ್ರಥಮ), ಅಂಜಲಿ-೧೦೦ಮೀ. ಹರ್ಡಲ್ಸ್(ಪ್ರಥಮ), ದೀಕ್ಷಿತಾ- ೪೦೦ ಮೀ ಹರ್ಡಲ್ಸ್(ದ್ವಿತೀಯ), ರೂಪಾಶ್ರೀ- ೩೦೦೦ತ್ರಿಪಲ್ ಚೇಸ್(ದ್ವೀತೀಯ), ಐಶ್ವರ್ಯ- ಉದ್ದಜಿಗಿತ(ತೃತೀಯ) ಐಶ್ವರ್ಯ- ಚಕ್ರ ಎಸೆತ(ತೃತೀಯ) ಸ್ಥಾನ ಗಳಿಸಿದ್ದಾರೆ. ಕ್ರೀಡಾಪಟುಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.