ಸಾರಾಂಶ
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್ ಆರ್ಗನೈಜೇಷನ್ (ಕೆ.ಟಿ.ಡಿ.ಓ) ತಾಲೂಕು ಸಮಿತಿ ವತಿಯಿಂದ ಗಣರಾಜ್ಯೋತ್ಸವ ಮತ್ತು ಚಾಲಕ ಚೈತನ್ಯೋಭವ ಸಮಾವೇಶದ ಅಂಗವಾಗಿ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಅಯೋಜಿಸಿದ್ದ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯ ಸೀನಿಯರ್ಸ್ ವಿಭಾಗದ ಮೊದಲ ಬಹುಮಾನವನ್ನು ಸೋಮವಾರಪೇಟೆ ಎಡಿಸಿ ಗ್ರೂಪ್ ಪಡೆದುಕೊಂಡಿತು.ದ್ವಿತೀಯ ಬಹುಮಾನವನ್ನು ಮಡಿಕೇರಿ ಟೀಮ್ ಗಾಡ್ಸ್, ತೃತೀಯ ಮಡಿಕೇರಿ ಅಭಿಷೇಕ್ ತಂಡ, ಸಮಧಾನಕರ ಬಹುಮಾನವನ್ನು ಕೋಲಾರದ ಸ್ಟೆಪ್ ರಾಕರ್ಸ್ ತಂಡ ಪಡೆಯಿತು.ಜಿಲ್ಲಾ ಮಟ್ಟದ ಸ್ಪರ್ಧೆಯ ಜೂನಿಯರ್ ವಿಭಾಗದಲ್ಲಿ ಮಡಿಕೇರಿ ನಾಟ್ಯಕಲಾ ಪ್ರಥಮ, ಪಿರಿಯಾಪಟ್ಟಣದ ನಕ್ಷತ್ರ ತಂಡ ದ್ವಿತೀಯ, ಮಡಿಕೇರಿಯ ವೀರಯೋಧ ತಂಡ ತೃತೀಯ, ಸೋಮವಾರಪೇಟೆ ಕೂರ್ಗ್ ವಿನ್ನರ್ ತಂಡ ಸಮಾಧಾನಕರ ಬಹುಮಾನ ಪಡೆದುಕೊಂಡಿತು.
ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ನಿರ್ಮಿಸಿದ್ದ ವರ್ಣರಂಜಿತ ವೇದಿಕೆಯಲ್ಲಿ ನಡೆದ ಸಮಾರೋಪ ಸಮಾರಂಭವನ್ನು ರಾಮನಗರ ಜಿಲ್ಲೆಯ ಮುರಾರಿ ಸ್ವಾಮಿಗಳ ಪುಣ್ಯಕ್ಷೇತ್ರದ ಪೀಠಾಧಿಪತಿ ಡಾ.ಕುಮಾರಸ್ವಾಮಿ ಉದ್ಘಾಟಿಸಿದರು.ಸೋಮವಾರಪೇಟೆ ಜಯವೀರಮಾತೆ ದೇವಾಲಯದ ಸಹಾಯಕ ಧರ್ಮಗುರು ಜಾನ್ ಫರ್ನಾಂಡಿಸ್, ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿ ವೈಸ್ ಚೇರ್ಮನ್ ತಣ್ಣೀರು ಹಳ್ಳದ ಶಾಫಿ ಸಹ ಶುಭಕೋರಿದರು.
ಕೆ.ಟಿ.ಡಿ.ಒ. ರಾಜ್ಯ ಗೌರವಾಧ್ಯಕ್ಷ ಇಕ್ಬಲ್ ಬಿ.ಸಿ.ರೋಡ್, ಮಾಜಿ ಸೈನಿಕ ಎನ್.ಯು.ಚಂದ್ರಕಾಂತ್, ಉದ್ಯಮಿ ರಾಮಚಂದ್ರ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕ ಎಚ್.ಎಂ.ರಾಮದಾಸ್, ಹಾಕಿ ಪ್ರತಿಭೆ ಎಸ್.ಆರ್.ಪುಣ್ಯ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.ಕೆಟಿಡಿಓ ರಾಜ್ಯ ಅಧ್ಯಕ್ಷ ರಮೇಶ್ ಕುಂದಾಪುರ, ತಾಲೂಕು ಅಧ್ಯಕ್ಷ ಬಿ.ವಿ.ರವಿ, ಮಾಜಿ ಸಚಿವ ಅಪ್ಪಚ್ಚು ರಂಜನ್, ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ, ಸೋಮವಾರಪೇಟೆ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಕಾಳಪ್ಪ, ಸಂಘದ ಕಾನೂನು ಸಲಹೆಗಾರ ಬಿ.ಇ.ಜಯೇಂದ್ರ, ಝಿರೋ ಟ್ರಾಫಿಕ್ ಅಂಬ್ಯುಲೆನ್ಸ್ ಚಾಲಕ ರಫೀಕ್, ಪ್ರಮುಖರಾದ ಶೀಲಾ ಡಿಸೊಜ, ಎಂ.ಎ.ರುಬಿನಾ, ಎಸ್.ಮಹೇಶ್, ಮಿಥುನ್ ಹಾನಗಲ್, ಎಚ್.ಎಸ್.ಗಂಗಾಧರ್, ಸಿ.ಸಿ.ನಂದ, ಎಚ್.ಕೆ.ಚಂದ್ರಶೇಖರ್, ಕೆ.ಎನ್.ದೀಪಕ್ ಮತ್ತಿತರರು ಇದ್ದರು.
ಬೆಂಗಳೂರು ಕಾವೇರಿ ಅಂಬ್ಯುಲೆನ್ಸ್ ಮಾಲೀಕ ವೆಂಕಟೇಶ್‍ಗೌಡ ಹೈಟೆಕ್ ಅಂಬ್ಯುಲೆನ್ಸನ್ನು ಸೋಮವಾರಪೇಟೆ ಕೆಟಿಡಿಓ ಉಚಿತವಾಗಿ ನೀಡಿದರು.