ರಾಜ್ಯಮಟ್ಟದ ಹಸೆ, ಬೂಮಣ್ಣಿ ಬುಟ್ಟಿ ಚಿತ್ತಾರ ಸ್ಪರ್ಧೆ: ಸೂಚನೆ

| Published : Oct 26 2023, 01:01 AM IST

ರಾಜ್ಯಮಟ್ಟದ ಹಸೆ, ಬೂಮಣ್ಣಿ ಬುಟ್ಟಿ ಚಿತ್ತಾರ ಸ್ಪರ್ಧೆ: ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ದೀವರ ಸಮುದಾಯದ ಸಾಂಪ್ರದಾಯಿಕ ಕಲೆಯಾದ ಹಸೆ ಚಿತ್ತಾರವನ್ನು ಉಳಿಸಿ ಬೆಳೆಸುವ ಉದ್ದೇಶ
ಶಿವಮೊಗ್ಗ: ಧೀರ ದೀವರ ಬಳಗ ಮತ್ತು ಹಳೇಪೈಕ ದೀವರ ಸಾಂಸ್ಕೃತಿಕ ವೇದಿಕೆ ವತಿಯಿಂದ ದೀವರ ಸಾಂಸ್ಕೃತಿಕ ವೈಭವ- 2023ರ ಅಂಗವಾಗಿ ರಾಜ್ಯಮಟ್ಟದ ಹಸೆ ಚಿತ್ತಾರ ಮತ್ತು ಬೂಮಣ್ಣಿ ಬುಟ್ಟಿ ಚಿತ್ತಾರ ಸ್ಪರ್ಧೆ ಆಯೋಜಿಸಲಾಗಿದೆ. ದೀವರ ಸಮುದಾಯದ ಸಾಂಪ್ರದಾಯಿಕ ಕಲೆಯಾದ ಹಸೆ ಚಿತ್ತಾರವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ದೀವರ ಹೆಣ್ಣು ಮಕ್ಕಳಿಗಾಗಿ ಈ ಸ್ಪರ್ಧೆ ಆಯೋಜಿಸಲಾಗಿದೆ. ರಾಜ್ಯಮಟ್ಟದ ಚಿತ್ತಾರಗಿತ್ತಿ ಪ್ರಶಸ್ತಿ ಸೇರಿದಂತೆ ಪ್ರಥಮ, ದ್ವಿತೀಯ ,ತೃತೀಯ ಹಾಗೂ ಸಮಾಧಾನಕಾರ ನಗದು ಬಹುಮಾನ ಮತ್ತು ಸ್ಮರಣಿಕೆಯನ್ನು ವಿಜೇತರಿಗೆ ನೀಡಲಾಗುವುದು. ಸ್ಪರ್ಧಿಗಳು ಸಾಂಪ್ರದಾಯಿಕ ಶೈಲಿಯಲ್ಲಿ ಕುಂಚವನ್ನು ಮಾತ್ರ ಬಳಸಿ ಚಿತ್ರ ಬರೆಯಬೇಕು. ಆಯಿಲ್ ಪೇಂಟ್‌ಗೆ ಅವಕಾಶವಿಲ್ಲ. ದೀವರ ಸಾಂಪ್ರದಾಯಿಕ ಚಿತ್ರಗಳಿಗೆ ಮಾತ್ರ ಪ್ರವೇಶವಿದ್ದು, ಚಿತ್ತಾರದಲ್ಲಿ ನಾವೀನ್ಯತೆಗೆ ಅವಕಾಶ ಇದೆಯಾದರೂ ಮೂಲಕಲೆಗೆ ಧಕ್ಕೆ ಆಗದಂತೆ ಎಚ್ಚರವಹಿಸಬೇಕು. ಹಸೆ ಚಿತ್ತಾರಕ್ಕೆ ಕ್ಯಾನ್ವಾಸ್ ಮತ್ತು ಡ್ರಾಯಿಂಗ್ ಶೀಟ್ ಬಳಸಲು ಅವಕಾಶವಿದೆ. ಭಾಗವಹಿಸಿದ ಎಲ್ಲರಿಗೂ ಅಭಿನಂದನಾ ಪತ್ರ ನೀಡಲಾಗುವುದು. ಸ್ಪರ್ಧೆ ದಿನಾಂಕ ಮತ್ತು ಸ್ಥಳವನ್ನು ಮುಂದೆ ತಿಳಿಸಲಾಗುವುದು. ಕಲಾವಿದರ ನೈಜತೆಯ ಪರೀಕ್ಷೆಯನ್ನು ಸ್ಥಳದಲ್ಲಿಯೇ ಮಾಡಲಾಗುವುದು. ಸ್ಪರ್ಧೆ ನಿಯಮಾವಳಿ ಹೆಸರು ನೋಂದಾಯಿಸುವ ಬಗೆಗಿನ ಹೆಚ್ಚಿನ ಮಾಹಿತಿಗೆ ಹೊಸನಗರ: 74114- 51189, ತೀರ್ಥಹಳ್ಳಿ: 94490- 97981, ಶಿವಮೊಗ್ಗ: 86183- 04923, ಸಾಗರ: 99809- 52630, ಸೊರಬ, ಶಿರಸಿ ಹಾಗೂ ಸಿದ್ದಾಪುರ: 94481- 23434 ಈ ಮೊಬೈಲ್ ನಂಬರುಗಳಿಗೆ ಸಂಪರ್ಕಿಸಬಹುದು ಎಂದು ಆಯೋಜಕರು ತಿಳಿಸಿದ್ದಾರೆ.