ಸಾರಾಂಶ
ಕನ್ನಡಪ್ರಭ ವಾರ್ತೆ, ಶಿವಮೊಗ್ಗ
ಪತಂಜಲಿ ಸಂಸ್ಥೆಯ ಬೆಳ್ಳಿಹಬ್ಬ, ೫೩೬ನೇ ಶ್ರೀ ಕನಕ ಜಯಂತಿಯ ಅಂಗವಾಗಿ ಡಿ.24ರಂದು ರಾಜ್ಯಮಟ್ಟದ ಕನಕ ಕಥಾಕೀರ್ತನ ಮಹೋತ್ಸವ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಯೋಗಾಚಾರ್ಯ ಪತಂಜಲಿ ಜೆ.ನಾಗರಾಜ್ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ, ಪತಂಜಲಿ ಶ್ರೀ ಕನಕದಾಸರ ಅಧ್ಯಯನ ಕೇಂದ್ರ, ಪತಂಜಲಿ ಕರ್ನಾಟಕ ಜಾನಪದ ಕಲಾ ಕೇಂದ್ರ, ಪತಂಜಲಿ ಕರ್ನಾಟಕ ಹಾಲುಮತ ಜಾನಪದ ಕಲಾ ಕೇಂದ್ರ, ಪತಂಜಲಿ ಕನಕ ಮಹಿಳಾ ಸಂಘ ಆಶ್ರಯದಲ್ಲಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಸಮ್ಮೇಳನದಲ್ಲಿ ತರಬೇತಿ ಕಾರ್ಯಾಗಾರ, ಹಾಲುಮತ ಸಂಸ್ಕೃತಿ, ಕನಕ ಕಲಾ ವೈಭವ, ಶ್ರೀ ಕನಕದಾಸರ ಗೀತಗಾಯನ ನೃತ್ಯರೂಪಕ ಅಭಿಯಾನ ಕೂಡ ಆಯೋಜಿಸಲಾಗಿದೆ. ಡಿ.24ರಂದು ಬೆಳಗ್ಗೆ 9 ರಿಂದ 12 ರವರೆಗೆ ಕುವೆಂಪು ರಂಗಮಂದಿರದಲ್ಲಿ 26 ಕಲಾ ತಂಡಗಳ ಕಲಾವಿದರ ಮೂಲಕ ವೈವಿಧ್ಯಮಯ ಶ್ರೀ ಕನಕದಾಸರ ಕೀರ್ತನೋತ್ಸವ ಏರ್ಪಡಿಸಲಾಗಿದೆ. ವಿಶೇಷ ಆಕರ್ಷಣೆ ಶ್ರೀ ಕನಕದಾಸರ ಪಾತ್ರದಲ್ಲಿ ಸಾವಿರ ಹಾಡುಗಳ ಸರದಾರ ಕಲಾವಿದ ಎಂ.ಪೂವಯ್ಯ ಅವರಿಂದ ಶ್ರೀ ಕನಕದಾಸರ ಗೀತಾಗಾಯನ ನೃತ್ಯರೂಪಕ, ಪ್ರತಿಭಾವಂತ ಬಾಲ ಕಲಾವಿದೆ ಎನ್.ಯೋಗೀತಾ ಅವರಿಂದ ಜಾನಪದ ನೃತ್ಯರೂಪಕ, ಕೆ.ವೈ. ಸೃಷ್ಠಿ ಹರಿಹರ ಅವರಿಂದ ಯೋಗ ನೃತ್ಯರೂಪಕ ಏರ್ಪಡಿಸಲಾಗಿದೆ ಎಂದು ವಿವರಿಸಿದರು.ಮಧ್ಯಾಹ್ನ 12 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮವನ್ನು ಕನಕ ಗುರುಪೀಠ ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಪತಂಜಲಿ ಸಂಸ್ಥೆ ಗೌರವಾಧ್ಯಕ್ಷ ಎಂ.ಈಶ್ವರಪ್ಪ ನವುಲೆ ವಹಿಸುವರು. ಮುಖ್ಯ ಅತಿಥಿಯಾಗಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಶಾರದಾ ಪೂರ್ಯ ನಾಯ್ಕ, ಡಿ.ಎಸ್. ಅರುಣ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್, ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್, ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಧರ್ಮದರ್ಶಿ ಕಾಲಜ್ಞಾನಿ ಗೋಪಾಲಸ್ವಾಮಿ, ನಿವೃತ್ತ ಜಿಲ್ಲಾ ನ್ಯಾಯಾಧೀಶರು, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ.ಶಿವಣ್ಣ, ಕರ್ನಾಟಕ ಪ್ರದೇಶ ಕುರುಬರ ಸಂಘದ ನಿಕಟಪೂರ್ವ ಅಧ್ಯಕ್ಷ ಸುಬ್ರಹ್ಮಣ್ಯ, ಪತಂಜಲಿ ಗುರು ಕೇಶವಚತುರ ಹೆದ್ದೂರು ಭಾಗವಹಿಸುವರು ಎಂದರು.
ಪತಂಜಲಿ ಸಾಹಿತ್ಯ ವೇದಿಕೆ ಅಧ್ಯಕ್ಷ ಎಂ.ಎನ್. ಸುಂದರ್‌ರಾಜ್ ಮಾತನಾಡಿ, ಪತಂಜಲಿ ಸಂಸ್ಥೆ ಕಳೆದ 26 ವರ್ಷಗಳಿಂದ ಕಲೆ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಶ್ರೀ ಕನಕದಾಸರ ಜಯಂತಿಯನ್ನು ಕೇವಲ ಒಂದು ದಿನಕ್ಕೆ ಸೀಮಿತ ಮಾಡದೇ ನಿರಂತರ, ಯಶಸ್ವಿಯಾಗಿ ನಡೆಸಿಕೊಂಡು ಮಾದರಿ ಸಂಸ್ಥೆಯಾಗಿ ಬೆಳೆದಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಡಾ. ಪಿ.ಬಾಲಪ್ಪ, ಎಂ.ಪೂವಯ್ಯ, ಎ.ಎಚ್. ಶ್ಯಾಮಲಾ, ಪರಿಸರ ಸಿ.ರಮೇಶ್, ಸುಶೀಲ ಭವಾನಿ ಶಂಕರ್ ರಾವ್, ಭವಾನಿ ಶಂಕರ್ ರಾವ್, ಎ.ಪಿ. ಕೋಟೇಶ್ ಇನ್ನಿತರರು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))