ಲಿಂಗಸುಗೂರಲ್ಲಿ ರಾಜ್ಯಮಟ್ಟದ ಕಾನೂನು ಕಾರ್ಯಾಗಾರ: ಭೂಪನಗೌಡ

| Published : Mar 27 2024, 01:06 AM IST

ಲಿಂಗಸುಗೂರಲ್ಲಿ ರಾಜ್ಯಮಟ್ಟದ ಕಾನೂನು ಕಾರ್ಯಾಗಾರ: ಭೂಪನಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ಬೆಂಗಳೂರು, ನ್ಯಾಯಾಂಗ ಇಲಾಖೆ ರಾಯಚೂರು, ಸ್ಥಳೀಯ ನ್ಯಾಯವಾದಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ಮಾ.29ರಿಂದ 31ರವರಗೆ 3 ದಿನಗಳ ವಕೀಲರಿಗಾಗಿ ರಾಜ್ಯ ಮಟ್ಟದ ಕಾನೂನು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

ಲಿಂಗಸುಗೂರು: ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ಬೆಂಗಳೂರು, ನ್ಯಾಯಾಂಗ ಇಲಾಖೆ ರಾಯಚೂರು, ಸ್ಥಳೀಯ ನ್ಯಾಯವಾದಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ಮಾ.29ರಿಂದ 31ರವರಗೆ 3 ದಿನಗಳ ವಕೀಲರಿಗಾಗಿ ರಾಜ್ಯ ಮಟ್ಟದ ಕಾನೂನು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ನ್ಯಾಯವಾದಿಗಳ ಸಂಘದ ತಾಲೂಕ ಅಧ್ಯಕ್ಷ ಭೂಪನಗೌಡ ಪಾಟೀಲ್ ಕರಡಕಲ್ ತಿಳಿಸಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲಿಂಗಸುಗೂರು ಪಟ್ಟಣದ ಕಲಬುರಗಿ ರಸ್ತೆಯ ಮದರ ಟ್ಯಾಂಕ್ ಬಳಿಯ ಆರ್‌ಎಂಎಸ್‌ ಫಂಕ್ಷನ್ ಹಾಲ್‌ನಲ್ಲಿ ಮೂರು ದಿನಗಳು ನಡೆಯುವ ಕಾನೂನು ಕಾರ್ಯಾಗಾರವನ್ನು ಹೈಕೋರ್ಟ ನ್ಯಾಯಾಧೀಶ ಹಾಗೂ ರಾಯಚೂರು ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ಇ.ಎಸ್.ಇಂದಿರೇಶ ಉದ್ಘಾಟಿಸಲಿದ್ದಾರೆ. ಬೆಳಗ್ಗೆ 11ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಮೊದಲ ಗೋಷ್ಠಿಯಲ್ಲಿ ಹೈಕೋರ್ಟ್‌ನ ನ್ಯಾ.ಇ.ಎಸ್.ಇಂದಿರೇಶ ಪ್ರಿನ್ಸಿಪಲ್ಸ್ ಆಫ್ ಪ್ಲಿಂಡಿಂಗ್ಸ್, 2ನೇ ಗೋಷ್ಠಿಯಲ್ಲಿ ಕಲಬುರಗಿ ಹೈಕೋರ್ಟ್‌ನ ನ್ಯಾಯವಾದಿ ಅಮಿತ್ ಕುಮಾರ ದೇಶಪಾಂಡೆ ಸಿವಿಲ್ ಅಪೀಲ್ಸ್ ಮತ್ತು ರಿವಿಜನ್ಸ್, ಕಾಲಪರಿಮಿತಿ ಅಧಿನಿಯಮ ಹಾಗೂ ಸ್ಪೆಸಿಪಿಕ್ ರಿಲೀಫ್ ಅಕ್ಟ್. 3ನೇ ಗೋಷ್ಠಿಯಲ್ಲಿ ಹೈಕೋರ್ಟ್‌ನ ಬೆಂಗಳೂರು ನ್ಯಾಯವಾದಿ ಎಸ್.ಶಂಕರಪ್ಪ ಸಂಪೂರ್ಣ ನ್ಯಾಯಶಾಸ್ತ್ರ ಕುರಿತು ವಿಷಯ ಮಂಡನೆ ಮಾಡಲಿದ್ದಾರೆ.

30ರಂದು 2ನೇ ದಿನದ ಕಾರ್ಯಾಗಾರದ 4ನೇ ಗೋಷ್ಠಿಯಲ್ಲಿ ಸಮಗ್ರ ಕಾನೂನುಗಳ ಸಂಕ್ಷಿಪ್ತ ಮಾಹಿತಿ 3ನೇ ಹೆಚ್ಚುವರಿ ನ್ಯಾ.ಬಿ.ಬಿ.ಜಕಾತಿ. 5ನೇ ಗೋಷ್ಠಿಯಲ್ಲಿ ಐಪಿಸಿ ಮತ್ತು ಸಿಆರ್‌ಪಿಸಿ ಕುರಿತು ಆರ್‌ಲ್ ಕಾನೂನು ಕಾಲೇಜು ನಿವೃತ್ತ ಉಪನ್ಯಾಸಕ ಡಿ.ಪಿ ಬಸವರಾಜ, 6ನೇ ಗೋಷ್ಠಿಯಲ್ಲಿ ಸಿವಿಲ್ ಪ್ರಕ್ರಿಯಾ ಸಂಹಿತೆ ಕುರಿತು ಕಾನೂನು ಪುಸ್ತಕಗಳ ಲೇಖಕ ದಾದಾಪೀರ ವಿಷಯ ಮಂಡನೆ ಮಾಡಲಿದ್ದಾರೆ.

31ರಂದು 7ನೇ ಗೋಷ್ಠಿಯಲ್ಲಿ ಹಿಂದು ವಿವಾಹ ಕಾಯ್ದೆ, ಉತ್ತರಾಧಿಕಾರ ಅಧಿನಿಯಮ ಮತ್ತು ಫವರ್ ಆಫ್ ಅಟಾರ್ನಿ ವಿಷಯ ಕಲಬುರಗಿ ಹೈಕೋರ್ಟ ಪೀಠದ ಅಡಿಷನಲ್ ರಿಜಿಸ್ಟರ್ ಕುರಿತು ಎಚ್‌ಜೆಎಂ ಆರಾಧ್ಯ, 8ನೇ ಗೋಷ್ಠಿಯಲ್ಲಿ ಮೃತ್ಯು ಪತ್ರದ ಕಾನೂನುಗಳ ಕುರಿತು ಲಾ ಅಕಾಡೆಮಿ ಅಧ್ಯಕ್ಷ, ನ್ಯಾಯವಾದಿ ಎಸ್.ಎಫ್.ಗೌತಮ್‌ಚಂದ್, 9ನೇ ಗೋಷ್ಠಿಯಲ್ಲಿ ಹಿಂದು ಲಾ ಪಾಸ್ಟ್ ಮತ್ತು ಪ್ರಸೆಂಟ್ ಕಲಬುರಗಿ ಹೈಕೋರ್ಟ್‌ನ ನ್ಯಾಯವಾದಿ ಸುಭಾಷಚಂದ್ರ ರಾಠೋಡ ವಿಷಯ ಮಂಡನೆ ಮಾಡಲಿದ್ದಾರೆ.

ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಕಲಬುರಗಿ ಹೈಕೋರ್ಟನ ಅಡಿಷನಲ್ ರಿಜಿಸ್ಟಾರ್ ಎಚ್.ಜೆ.ಎಂ ಆರಾಧ್ಯ, ಬೆಂಗಳೂರು ಲಾ ಅಕಾಡೆಮಿ ಅಧ್ಯಕ್ಷ ಎಸ್.ಎಫ್.ಗೌತಮಚಂದ್, ಪ್ರಧಾನ ಜಿಲ್ಲಾ ನ್ಯಾ.ಮಾರುತಿ ಎಸ್.ಬಾಗಡೆ, ವಕೀಲರ ಪರಿಷತ್ ರಾಜ್ಯ ಉಪಾಧ್ಯಕ್ಷ ವಿನಯ.ಬಿ.ಎಂ, ಲಿಂಗಸುಗೂರು ಹಿರಿಯ ಸಿವಿಲ್ ನ್ಯಾ.ಚಂದ್ರಶೇಖರ ಪ್ರಭಪ್ಪ ದಿಡ್ಡಿ, ಪ್ರಧಾನ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾ.ದೇಶಮುಖ ಶಿವಕುಮಾರ ಭಾಗವಹಿಸಲಿದ್ದಾರೆ.

ಮೂರು ದಿನಗಳ ಕಾಲ ನಡೆಯುವ ರಾಜ್ಯಮಟ್ಟದ ಕಾನೂನು ಕಾರ್ಯಾಗಾರದಲ್ಲಿ ರಾಜ್ಯದಿಂದ 2 ಸಾವಿರಕ್ಕೂ ಅಧಿಕ ವಕೀಲರು ಭಾಗವಹಿಲಿದ್ದಾರೆ ಎಂದರು. ಈ ವೇಳೆ ಸಂಘದ ಪದಾಧಿಕಾರಿಗಳು, ಸದಸ್ಯರು ಇದ್ದರು.