ರಾಜ್ಯ ಮಟ್ಟದ ಪುರುಷರ ಮುಕ್ತ ಖೋ ಖೋ ಪಂದ್ಯಾವಳಿ

| Published : Oct 24 2025, 01:00 AM IST

ರಾಜ್ಯ ಮಟ್ಟದ ಪುರುಷರ ಮುಕ್ತ ಖೋ ಖೋ ಪಂದ್ಯಾವಳಿ
Share this Article
  • FB
  • TW
  • Linkdin
  • Email

ಸಾರಾಂಶ

2ನೇ ವರ್ಷದ ಹೊಯ್ಸಳ ಕಪ್- ೨೦೨೫ ರಾಜ್ಯಮಟ್ಟದ ಪುರುಷರ ಮುಕ್ತ ಖೋ-ಖೋ ಪಂದ್ಯಾವಳಿಯನ್ನು ಇದೇ ಅ.26ರಂದು ಇಲ್ಲಿನ ಕೆ.ಪಿ.ಎಸ್ ಶಾಲಾ ಆವರಣದಲ್ಲಿರುವ ದಿ. ಅನಂತರಾಮು ಕ್ರೀಡಾಂಗಣದಲ್ಲಿ ನಡೆಸಲಾಗುತ್ತಿದೆ ಎಂದು ಕ್ಲಬ್‌ನ ಅಧ್ಯಕ್ಷರಾದ ಈಶ್ವರ್ ತಿಳಿಸಿದ್ದಾರೆ. ಪತ್ರಕರ್ತ ಎಚ್.ಜಿ. ಅನಂತರಾಮು ನೂತನ ಕ್ರೀಡಾಂಗಣದಲ್ಲಿ ಖೋ-ಖೋ ಪಂದ್ಯಾವಳಿಯನ್ನು ರಾಜ್ಯಮಟ್ಟದಲ್ಲಿ ೨ನೇ ಬಾರಿ ಆಯೋಜನೆ ಮಾಡಲಾಗಿದೆ. ಈ ಬಾರಿ ಸುಮಾರು ೨೦ರಿಂದ ೨೫ ತಂಡಗಳು ಭಾಗವಹಿಸಲಿವೆ.

ಕನ್ನಡಪ್ರಭ ವಾರ್ತೆ ಹಳೇಬೀಡುಇಲ್ಲಿನ ಹೊಯ್ಸಳ ಸ್ಪೋರ್ಟ್ಸ್ ಕ್ಲಬ್ ವತಿಯಿಂದ 2ನೇ ವರ್ಷದ ಹೊಯ್ಸಳ ಕಪ್- ೨೦೨೫ ರಾಜ್ಯಮಟ್ಟದ ಪುರುಷರ ಮುಕ್ತ ಖೋ-ಖೋ ಪಂದ್ಯಾವಳಿಯನ್ನು ಇದೇ ಅ.26ರಂದು ಇಲ್ಲಿನ ಕೆ.ಪಿ.ಎಸ್ ಶಾಲಾ ಆವರಣದಲ್ಲಿರುವ ದಿ. ಅನಂತರಾಮು ಕ್ರೀಡಾಂಗಣದಲ್ಲಿ ನಡೆಸಲಾಗುತ್ತಿದೆ ಎಂದು ಕ್ಲಬ್‌ನ ಅಧ್ಯಕ್ಷರಾದ ಈಶ್ವರ್ ತಿಳಿಸಿದ್ದಾರೆ.

ಕ್ಲಬ್ ಕಾರ್ಯದರ್ಶಿ ಪುನೀತ್ ಎ.ವಿ ಮಾಧ್ಯಮದೊಂದಿಗೆ ಮಾತನಾಡುತ್ತಾ, ಈ ಬಾರಿ ಕೆ.ಪಿಎಸ್ ಆವರಣದಲ್ಲಿ ಪತ್ರಕರ್ತ ಎಚ್.ಜಿ. ಅನಂತರಾಮು ನೂತನ ಕ್ರೀಡಾಂಗಣದಲ್ಲಿ ಖೋ-ಖೋ ಪಂದ್ಯಾವಳಿಯನ್ನು ರಾಜ್ಯಮಟ್ಟದಲ್ಲಿ ೨ನೇ ಬಾರಿ ಆಯೋಜನೆ ಮಾಡಲಾಗಿದೆ. ಈ ಬಾರಿ ಸುಮಾರು ೨೦ರಿಂದ ೨೫ ತಂಡಗಳು ಭಾಗವಹಿಸಲಿವೆ. ಈ ಕಾರ್ಯಕ್ರಮದಲ್ಲಿ ಪ್ರಥಮ ಬಹುಮಾನ ೨೦,೦೦೦ ನಗದು. ಇದರ ಪ್ರಾಯೋಜಕರು ಚಂದ್ರಶೇಖರ್(ಜೀಪ್), ಬೈರೇಶ್(ಗುತ್ತಿಗೆದಾರು), ಎಚ್.ಪರಮೇಶ್(ಬಿಜೆಪಿ ಮುಖಂಡ). ದ್ವಿತೀಯ ಬಹುಮಾನ ನಗದು ೧೨,೦೦೦ ಮರ್ಚೆಂಟ್ಸ್ ಅಸೋಸಿಯೇಷನ್ ರಿಕ್ರಿಯೇಷನ್ ಕ್ಲಬ್ ಹಳೇಬೀಡು. ತೃತೀಯ ಬಹುಮಾನ ಡಾ. ಎಂ.ಸಿ. ಕುಮಾರ್ (ಪ್ರಾಂಶುಪಾಲ). ಟ್ರೋಫಿ ಪ್ರಾಯೋಜಕರು ಶಿವನಾಗ್, ಶಂಕರ್‌ನಾಗ್(ಕಾಫಿಕಟ್ಟೆ). ಕ್ರೀಡಾಪಟುಗಳಿಗೆ ಸಮಸ್ತ್ರವನ್ನು ನಿಂಗಪ್ಪ, ಮೋಹನ್ (ಗ್ರಾಮ ಪಂಚಾಯಿತಿ ಸದಸ್ಯರು). ದಾನಿಗಳು ಕವಿತಾ ರಮೇಶ್ (ಗ್ರಾಪಂ ಸದಸ್ಯೆ). ಈ ಪಂದ್ಯಾವಳಿಗೆ ಹೆಚ್ಚಿನ ಸಹಕಾರ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿ ಮತ್ತು ಎಲ್ಲಾ ಸದಸ್ಯರದ್ದು ಎಂದು ತಿಳಿಸಿದರು.

ಕ್ಲಬ್ ಕಾರ್ಯದರ್ಶಿ ಮಹೇಶ್ ಮಾತನಾಡುತ್ತ, ಈ ಕಾರ್ಯಕ್ರಮದ ಸಾನ್ನಿಧ್ಯವನ್ನು ಶ್ರೀ ಸೋಮಶೇಖರ ಶಿವಾಚಾರ್ಯರು ಮಹಾ ಸಂಸ್ಥಾನ ಪುಷ್ಪಗಿರಿ, ಉದ್ಘಾಟನೆಯನ್ನು ಜನಪ್ರಿಯ ಶಾಸಕ ಎಚ್.ಕೆ.ಸುರೇಶ್, ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಧು ವಹಿಸಲಿದ್ದು, ಈ ಕ್ರೀಡಾ ಕೂಟಕ್ಕೆ ಹೆಚ್ಚಿನ ಗ್ರಾಮಸ್ಥರು, ಕ್ರೀಡಾ ಅಭಿಮಾನಿಗಳು ಬಂದು ಪಂದ್ಯಾವಳಿ ನಡೆಬೇಕೆಂದು ಕೇಳಿಕೊಂಡಿದ್ದಾರೆ.* ಹೇಳಿಕೆ1

ಹಳೇಬೀಡಿನಲ್ಲಿ ರಾಜ್ಯಮಟ್ಟದ ಖೋ-ಖೋ ಪಂದ್ಯಾವಳಿ ನಡೆಸುತ್ತಿರುವುದು ಸಂತೋಷದ ವಿಚಾರ. ಜೊತೆಗೆ ಹಿರಿಯ ಪತ್ರಕರ್ತ ದಿ. ಎಚ್.ಜಿ.ಅನಂತರಾಮ ಹೆಸರಲ್ಲಿ ಖೋ-ಖೋ ಪಂದ್ಯಾವಳಿಯ ಕ್ರೀಡಾಂಗಣ ಹೆಸರು ಇಟ್ಟಿರುವುದು ತುಂಬಾ ಸಂತೋಷ. ಅವರು ನಿಧನರಾಗಿ ಆರು ವರ್ಷಗಳಾದರೂ ಈ ಜನತೆ ಅವರ ಹೆಸರನ್ನು ಜ್ಞಾಪಕ ಇಟ್ಟುಕೊಂಡಿರುವುದು ಹೆಮ್ಮೆಯ ವಿಚಾರವಾಗಿದೆ. ಅವರ ಹೆಸರಿನಲ್ಲಿ ಕ್ರೀಡಾಂಗಣವನ್ನು ಉನ್ನತ ದರ್ಜೆಗೇರಿಸಲು ಕಾರ್ಯ ನೆರೆವೇರಿಸಿ. - ಸೋಮಶೇಖರ ಶಿವಾಚಾರ್ಯರು, ಪುಷ್ಪಗಿರಿ ಮಹಾಸಂಸ್ಥಾನ* ಹೇಳಿಕೆ2ಹಳೇಬೀಡಿನ ಹೊಯ್ಸಳ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದ್ವಿತೀಯ ವರ್ಷದ ಹೊಯ್ಸಳ ಕಪ್ ೨೦೨೫ ರಾಜ್ಯಮಟ್ಟದ ಪುರುಷರ ಮುಕ್ತ ಖೋ-ಖೋ ಪಂದ್ಯಾವಳಿ ನನ್ನ ಕ್ಷೇತ್ರದಲ್ಲಿ ನೆಡೆತ್ತಿರುವುದು ತುಂಬಾ ಸಂತೋಷ. ಪ್ರಥಮ ಹಂತದಲ್ಲಿ ನನಗೆ ಕ್ಷೇತ್ರದ ಹಲವಾರ ಯೋಜನೆಗಳ ವಿಚಾರ ಹಳೇಬೀಡಿನ ಅಭಿವೃದ್ದಿ ಬಗ್ಗೆ ಮಾಹಿತಿ ನೀಡುವ ಹಿರಿಯ ಪತ್ರಕರ್ತ. ಮುಂದಿನ ದಿನಗಳಲ್ಲಿ ನನ್ನ ಅನುದಾನದಲ್ಲಿ ಶಾಶ್ವತವಾಗಿ ಈ ಕ್ರೀಡಾಂಗಣಕ್ಕೆ ಸಹಕಾರ ನೀಡುತ್ತೇನೆ. - ಎಚ್.ಕೆ.ಸುರೇಶ್‌, ಬೇಲೂರು ಕ್ಷೇತ್ರ ಶಾಸಕ