ರಾಜ್ಯಮಟ್ಟದ ಕಾದಂಬರಿ ಸ್ಪರ್ಧೆ: ಅರಳುಮಲ್ಲಿಗೆ ಕೃತಿಗೆ ಪ್ರಥಮ ಸ್ಥಾನ

| Published : Mar 07 2025, 12:47 AM IST

ಸಾರಾಂಶ

ತಾಲೂಕು ಸಾಹಿತ್ಯ ಮಿತ್ರಕೂಟ ಆಯೋಜಿಸಿದ್ದ ರಾಜ್ಯಮಟ್ಟದ ಕಾದಂಬರಿ ಸ್ಪರ್ಧೆಗೆ ಬಳ್ಳಾರಿ ಜಿಲ್ಲೆಯ ಬಂಗಿದೊಡ್ಡ ಮಂಜುನಾಥ್ ರಚಿಸಿರುವ ಅರಳು ಮಲ್ಲಿಗೆ ಕಾದಂಬರಿಗೆ ಪ್ರಥಮ ಸ್ಥಾನ ಸಂದಿದೆ ಎಂದು ಅಧ್ಯಕ್ಷ ಮದ್ದೂರು ದೊರೆಸ್ವಾಮಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ತಾಲೂಕು ಸಾಹಿತ್ಯ ಮಿತ್ರಕೂಟ ಆಯೋಜಿಸಿದ್ದ ರಾಜ್ಯಮಟ್ಟದ ಕಾದಂಬರಿ ಸ್ಪರ್ಧೆಗೆ ಬಳ್ಳಾರಿ ಜಿಲ್ಲೆಯ ಬಂಗಿದೊಡ್ಡ ಮಂಜುನಾಥ್ ರಚಿಸಿರುವ ಅರಳು ಮಲ್ಲಿಗೆ ಕಾದಂಬರಿಗೆ ಪ್ರಥಮ ಸ್ಥಾನ ಸಂದಿದೆ ಎಂದು ಅಧ್ಯಕ್ಷ ಮದ್ದೂರು ದೊರೆಸ್ವಾಮಿ ತಿಳಿಸಿದ್ದಾರೆ.

ಸಾಹಿತ್ಯ ಮಿತ್ರಕೂಟ ಕಾದಂಬರಿಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ರಾಜ್ಯಮಟ್ಟದ ಸ್ಪರ್ಧೆ ಆಯೋಜಿಸಿ ಕೃತಿಗಳನ್ನು ಆಹ್ವಾನಿಸಲಾಗಿತ್ತು, ಈ ಹಿಂದೆ ಸಣ್ಣ ಕಥೆಗಾರರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ರಾಜ್ಯಮಟ್ಟದ ಕಥಾ ಸ್ಪರ್ಧೆ ಆಯೋಜಿಸಿತ್ತು. ಈ ಬಾರಿ ರಾಜ್ಯಮಟ್ಟದ ಅತ್ಯತ್ತಮ ಕಾದಂಬರಿ ಸ್ಪರ್ಧೆ ಆಯೋಜಿಸಿದ್ದ ಹಿನ್ನೆಲೆ ರಾಜ್ಯದ ವಿವಿದ ಜಿಲ್ಲೆ, ತಾಲೂಕುಗಳಿಂದ 36ಕ್ಕೂ ಅಧಿಕ ಕೖತಿಗಳನ್ನು ಕಾದಂಬರಿಕಾರರು ಸ್ಪರ್ಧೆಗಾಗಿ ಕಳುಹಿಸಿದ್ದರು. ಬಹುಮಾನ ಆಯೋಜಿಸಿದ್ದ ಸಾಹಿತ್ಯ ಮಿತ್ರಕೂಟ ನುರಿತ ತೀರ್ಪುಗಾರರ ಮೂಲಕ ಪ್ರಶಸ್ತಿಯನ್ನು ಪ್ರಕಟಿಸಿದ್ದು ಮೊದಲ ಬಹುಮಾನ ಅರಳು ಮಲ್ಲಿಗೆ ವಿರಚಿತ ಬಂಗಿದೊಡ್ಡಿ ಮಂಜುನಾಥ್ ಅವರಿಗೆ ಸಂದಿದ್ದು 10ಸಾವಿರ ನಗದು, ಪ್ರಶಸ್ತಿ ಫಲಕ ಒಳಗೊಂಡಿದೆ. ದ್ವಿತೀಯ ಬಹುಮಾನ 7 ಸಾವಿರ ನಗದು, ಪ್ರಶಸ್ತಿ ಫಲಕ ಒಳಗೊಂಡಿದ್ದು ಚಿಕ್ಕಮಂಗಳೂರು ಜಿಲ್ಲೆಯ ಕಾರ್ತಿಕಾದಿತ್ಯ ಅವರ ರಚನೆಯ ಪ್ಯಾರಾಸೈಟ್ ಕಾದಂಬರಿಗೆ ಸಂದಿದೆ. ತೃತೀಯ ಬಹುಮಾನ 5 ಸಾವಿರ ನಗದು, ಪ್ರಶಸ್ತಿ ಫಲಕವು ಬೆಂಗಳೂರಿನ ಗಿರಿರಾಜ ಅವರ ಸಾವಿಲ್ಲ ಕಾದಂಬರಿಗೆ ಪ್ರಶಸ್ತಿ ಸಂದಿದ್ದು ಮಾ.9ರಂದು ಅರುಣಾಚಲೇಶ್ವರ ಸಭಾಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಸ್ಪರ್ಧಾ ಕಾರ್ಯಕ್ರಮದಲ್ಲಿ ವಿಜೇತರಿಗೆ ನಗದು ಬಹುಮಾನದ ಜೊತೆ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುವುದು ಎಂದು ತಿಳಿಸಿದ್ದಾರೆ.