ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಅಸೋಸಿಯೇಷನ್ ಆಫ್ ಫಿಸಿಷೀಯನ್ ಆಫ್ ಇಂಡಿಯಾ ವತಿಯಿಂದ ನಗರದ ಮಿಮ್ಸ್ ಆವರಣದಲ್ಲಿ ಜುಲೈ 26, 27 ಹಾಗೂ 28 ರಂದು 41ನೇ ರಾಜ್ಯ ಮಟ್ಟದ ಪಿಸಿಷೀಯನ್ ವೈದ್ಯರ ಸಮ್ಮೇಳನ(ಕೆಎಜಿಐಸಿಒಎನ್)-2024 ವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಡಾ. ಕೆ.ಎಂ.ಶಿವಕುಮಾರ್ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದಿಚುಂಚನಗಿರಿ ವಿಶ್ವವಿದ್ಯಾಲಯ ಹಾಗೂ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜು.26ರಂದು ಇಂಡಿಯನ್ ಕಾಲೇಜಿನ ಡೀನ್ ಡಾ.ನರಸಿಂಹಲು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಕೆಎಜಿಐಸಿಒಎನ್ ಅಧ್ಯಕ್ಷ ಡಾ. ಬಿ.ವಿ. ಮುರಳಿ ಮೋಹನ್ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಸುರೇಶ್ ವಿ. ಸಗಾರ್ಡ್, ಡಾ. ವಿಶ್ವನಾಥ್ ಕೆ., ಡಾ. ಎಂ. ಮೋಹನ್‌ಕುಮಾರ್, ಡಾ. ಕೆ.ಎಂ.ಶಿವಕುಮಾರ್, ಡಾ. ರಮೇಶ್ ಎಂ.ಸಿ., ಡಾ. ಮಂಜುನಾಥ್ ಎಂ., ಡಾ. ಉತ್ತಮ್‌ಚಂದ್ ಭಾಗವಹಿಸುವರು ಎಂದರು.
ಅಂದು ಸಂಜೆ 6.15ಕ್ಕೆ ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ನಡೆಯುವ ಸಮಾರಂಭದಲ್ಲಿ ಎಪಿಐ ರಾಷ್ಟ್ರೀಯ ಅಧ್ಯಕ್ಷೆ ಜ್ಯೋತಿರ್ಮೈ ಪಾಲ್ ಮುಖ್ಯಅತಿಥಿಗಳಾಗಿ, ಆದಿಚುಂಚನಗಿರಿ ವಿವಿ ಕುಲಪತಿ ಡಾ. ಎಂ.ಎ. ಶೇಖರ್ ಗೌರವ ಅತಿಥಿಗಳಾಗಿ ಭಾಗವಹಿಸುವರು. ಕೆಎಜಿಐಸಿಒಎನ್ ಅಧ್ಯಕ್ಷ ಡಾ. ಬಿ.ವಿ. ಮುರಳಿ ಮೋಹನ್ ಅವರು ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.ಎಜಿಐ ಮಂಡ್ಯ ಅಧ್ಯಕ್ಷ ಡಾ. ಪ್ರಸನ್ನಕುಮಾರ್ ಎ.ಎಂ., ಮಾಜಿ ಅಧ್ಯಕ್ಷ ಡಾ. ಗೋವಿಂದಬಾಬು, ಮಿಮ್ಸ್ ನಿರ್ದೇಶಕ ಡಾ. ನರಸಿಂಹಸ್ವಾಮಿ ಪಿ., ಎಐಎಂಎಸ್ ಡೀನ್ ಡಾ.ಶಿವಕುಮಾರ್ ಎಂ.ಜಿ. ಅವರು ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಹೇಳಿದರು.
ಮೂರು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ಸುಮಾರು 600ಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದು, ಎರಡು ದಿನಗಳು ಉಪನ್ಯಾಸ ಕಾರ್‍ಯಕ್ರಮಗಳು ನಡೆಯಲಿವೆ. ಸ್ನಾತಕ ವಿದ್ಯಾರ್ಥಿಗಳು 900 ಪ್ರಬಂಧಗಳನ್ನು ಮಂಡಿಸಲಿದ್ದಾರೆ. ಇದು ಎಲ್ಲ ಫಿಸಿಷೀಯನ್‌ಗಳ ಜ್ಞಾನಾರ್ಜನೆಗೆ ಮುಖ್ಯ ವೇದಿಕೆಯಾಗಲಿದೆ ಎಂದು ವಿವರಿಸಿದರು.ಸಮ್ಮೇಳನಕ್ಕಾಗಿ ಸುಮಾರು 65 ರಿಂದ 70 ಲಕ್ಷ ವೆಚ್ಚವಾಗಲಿದ್ದು, ಸಮ್ಮೇಳನಕ್ಕೆ ಬರುವವರಿಂದ ಪ್ರವೇಶ ಧನ ಸೇರಿ ವಿವಿಧ ವಿಭಾಗಗಳಿಂದ ಸಂಪನ್ಮೂಲ ಕ್ರೋಢೀಕರಿಸಲಾಗುತ್ತಿದೆ. ಬರುವ ಎಲ್ಲ ವೈದ್ಯರಿಗೆ ಮಂಡ್ಯ, ಮೈಸೂರು, ಬೆಂಗಳೂರುಗಳಲ್ಲಿ ವಿಶೇಷವಾದ ಹೊಟೇಲ್‌ಗಳ ವಿವರಗಳನ್ನು ನೀಡಿದ್ದು, ವಾಸ್ತವ್ಯಕ್ಕೆ ಅವರೇ ಸಿದ್ಧತೆ ಮಾಡಿಕೊಳ್ಳಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸುದ್ಧಿಗೋಷ್ಠಿಯಲ್ಲಿ ಮಿಮ್ಸ್ ಮೆಡಿಸಿನ್ ವಿಭಾಗದ ಮುಖ್ಯಸ್ಥೆ ಡಾ. ರೇಖಾ, ಅಸೋಸಿಯೇಷನ್‌ನ ಡಾ. ಪ್ರಸನ್ನಕುಮಾರ್, ಡಾ. ಮೋಹನ್‌ಕುಮಾರ್, ಡಾ. ಉತ್ತಮ್‌ಚಂದ್, ಡಾ. ರಾಘವೇಂದ್ರ ಇದ್ದರು.