ಸಾರಾಂಶ
ಕ್ರೀಡಾಕೂಟದಲ್ಲಿ ರಾಜ್ಯದ ವಿವಿಧ ಪೊಲೀಸ್ ಘಟಕಗಳಿಂದ ಒಟ್ಟು 63 ಸ್ಪರ್ಧಿಗಳು ಭಾಗವಹಿಸಿದ್ದರು.
ಕನ್ನಡಪ್ರಭ ವಾರ್ತೆ ಮೈಸೂರು
ದಕ್ಷಿಣ ವಲಯ, ಮೈಸೂರು ನಗರ ಪೊಲೀಸ್ ಮತ್ತು 5ನೇ ಪಡೆ ಕೆ.ಎಸ್.ಆರ್.ಪಿ ಸಹಯೋಗದಲ್ಲಿ ರಾಜ್ಯ ಮಟ್ಟದ ಪೊಲೀಸ್ 10 ಕಿ.ಮೀ. ಕ್ರಾಸ್ ಕಂಟ್ರಿ (ಪುರುಷ ಮತ್ತು ಮಹಿಳಾ) ಕ್ರೀಡಾಕೂಟವನ್ನು ಶುಕ್ರವಾರ ಮೈಸೂರಿನಲ್ಲಿ ಆಯೋಜಿಸಲಾಗಿತ್ತು.ಮೈಸೂರು ವಿವಿ ಓವಲ್ ಮೈದಾನ ಬಳಿ ರಾಜ್ಯ ಮಟ್ಟದ ಪೊಲೀಸ್ ಕ್ರಾಸ್ ಕಂಟ್ರಿ ಕ್ರೀಡಾಕೂಟವನ್ನು ಡಿಸಿಪಿ ಎಂ. ಮುತ್ತುರಾಜು ಚಾಲನೆ ನೀಡಿದರು.ಈ ಕ್ರೀಡಾಕೂಟದಲ್ಲಿ ರಾಜ್ಯದ ವಿವಿಧ ಪೊಲೀಸ್ ಘಟಕಗಳಿಂದ ಒಟ್ಟು 63 ಸ್ಪರ್ಧಿಗಳು ಭಾಗವಹಿಸಿದ್ದರು. ಪುರುಷ ವಿಭಾಗದಲ್ಲಿ ಗುರುಪ್ರಸಾದ್ (ಪ್ರಥಮ), ಸಂದೀಪ್ (ದ್ವಿತೀಯ) ಮತ್ತು ಸುನಿಲ್ (ತೃತೀಯ) ಬಹುಮಾನ ಪಡೆದರು. ಹಾಗೆಯೇ, ಮಹಿಳಾ ವಿಭಾಗದಲ್ಲಿ ತೇಜಸ್ವಿನಿ (ಪ್ರಥಮ), ಪೂರ್ಣಿಮಾ (ದ್ವಿತೀಯ) ಮತ್ತು ಜ್ಯೋತಿ (ತೃತೀಯ) ಬಹುಮಾನ ಪಡೆದರು.ವಿಜೇತರಿಗೆ ದಕ್ಷಿಣ ವಲಯದ ಡಿಐಜಿ ಡಾ.ಎಂ.ಬಿ. ಬೋರಲಿಂಗಯ್ಯ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಬಹುಮಾನ ವಿತರಿಸಿದರು. ಸಿಎಆರ್ ಡಿಸಿಪಿ ಮಾರುತಿ, ಡಿವೈಎಸ್ಪಿ ನಿಖಿತಾ, 5ನೇ ಪಡೆ ಕೆ.ಎಸ್.ಆರ್.ಪಿ ಕಮಾಂಡೆಂಟ್ ಮೊದಲಾದವರು ಇದ್ದರು.