ಕನ್ನಡಪ್ರಭ ವಾರ್ತೆ ಹಾಸನ
ಕ್ರೀಡಾ ಕ್ಷೇತ್ರದಲ್ಲಿ ಜಿಲ್ಲೆಯನ್ನು ರಾಜ್ಯ ಮಟ್ಟದಲ್ಲಿ ಮತ್ತಷ್ಟು ಗುರುತಿಸುವ ಉದ್ದೇಶ ಹಾಸನ ಜಿಲ್ಲಾ ಪವರ್ ಲಿಫ್ಟಿಂಗ್ ಸಂಸ್ಥೆ ವತಿಯಿಂದ, ಕರ್ನಾಟಕ ಪವರ್ ಲಿಫ್ಟಿಂಗ್ ಸಂಸ್ಥೆ, ಮಂಗಳೂರು ಇವರ ಅನುಮತಿಯೊಂದಿಗೆ ಹಾಗೂ ಟೈಮ್ಸ್ ಗುರುಕುಲ ಇಂಟರ್‌ನ್ಯಾಷನಲ್ ಸಹಯೋಗದಲ್ಲಿ ರಾಜ್ಯ ಮಟ್ಟದ ಮುಕ್ತ ಹಾಗೂ ಬಾಲಕ, ಬಾಲಕಿಯರ ಸಬ್ ಜೂನಿಯರ್ ಕ್ಲಾಸಿಕ್ ಮತ್ತು ಎಕ್ಯುಪ್ಡ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್-೨೦೨೬ ಅನ್ನು ಇದೇ ಮೊದಲ ಬಾರಿಗೆ ನಗರದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಪವರ್ ಲಿಫ್ಟಿಂಗ್ ಅಧ್ಯಕ್ಷ ವಿಜಯಕುಮಾರ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಏಪ್ರಿಲ್ ೨೫ ಮತ್ತು ೨೬ರಂದು ಹಾಸನ ನಗರದ ಅಂಬೇಡ್ಕರ್ ಭವನ, ಹರ್ಷಮಹಲ್ ರಸ್ತೆ ಇಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಈ ಚಾಂಪಿಯನ್‌ಶಿಪ್‌ನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ನೂರಾರು ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆಯಿದೆ. ದೇಹತೂಕದ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು, ಪ್ರತಿ ವಿಭಾಗದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳ ವಿಜೇತರಿಗೆ ಆಕರ್ಷಕ ಪದಕಗಳು ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಗುತ್ತದೆ. ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕ್ರೀಡಾಪಟುಗಳನ್ನು ರಾಷ್ಟ್ರಮಟ್ಟದ ಪವರ್‌ಲಿಫ್ಟಿಂಗ್ ಸ್ಪರ್ಧೆಗಳಿಗೆ ಆಯ್ಕೆ ಮಾಡಲಾಗುವುದು. ಕ್ಲಾಸಿಕ್ ಮತ್ತು ಎಕ್ಯುಪ್ಡ್ ವಿಭಾಗಗಳಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ಕರ್ನಾಟಕ ಬೆಸ್ಟ್ ಲಿಫ್ಟರ್ ಪ್ರಶಸ್ತಿಯನ್ನು ನೀಡಲಾಗುತ್ತದೆ. ಜೊತೆಗೆ ಎರಡೂ ವಿಭಾಗಗಳಲ್ಲಿ ತಂಡ ಚಾಂಪಿಯನ್‌ಶಿಪ್ ಕೂಡ ನೀಡಲಾಗುವುದು ಎಂದರು.ರಾಷ್ಟ್ರಮಟ್ಟದ ಅನುಭವ ಹೊಂದಿದ ತೀರ್ಪುಗಾರರು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದು, ನಿಯಮಾನುಸಾರ ಪಾರದರ್ಶಕವಾಗಿ ಸ್ಪರ್ಧೆಗಳು ನಡೆಯಲಿವೆ. ಕ್ರೀಡಾಪಟುಗಳು ಸಿಂಗ್‌ಲೆಟ್, ಉದ್ದನೆಯ ಸಾಕ್ಸ್, ಶೂ ಹಾಗೂ ಬೆಲ್ಟ್ ಧರಿಸುವುದು ಕಡ್ಡಾಯವಾಗಿದ್ದು, ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ. ಸಬ್-ಜೂನಿಯರ್ ಪುರುಷರ ತೂಕ ವಿಭಾಗಗಳು ೫೩, ೫೯, ೬೬, ೭೪, ೮೩, ೯೩, ೧೦೫, ೧೨೦ ಮತ್ತು ೧೨೦+ ಕೆಜಿ ಆಗಿದ್ದು, ಮಹಿಳೆಯರ ತೂಕ ವಿಭಾಗಗಳು ೪೩, ೪೭, ೫೨, ೫೭, ೬೩, ೬೯, ೭೬, ೮೪ ಮತ್ತು ೮೪+ ಕೆಜಿ ಆಗಿವೆ. ಜಿಲ್ಲೆಯ ಎಲ್ಲಾ ವ್ಯಾಯಾಮ ಶಾಲೆಗಳು ಹಾಗೂ ಕ್ರೀಡಾಪಟುಗಳು ಕಡ್ಡಾಯವಾಗಿ ಜಿಲ್ಲಾ ಪವರ್ ಲಿಫ್ಟಿಂಗ್ ಸಂಸ್ಥೆಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ೯೪೮೩೪೬೭೦೮೪, ೯೯೪೫೭೬೩೬೯೮, ೯೯೬೪೧೮೨೬೫೪ ಸಂಖ್ಯೆಗಳ ಸಂಪರ್ಕಿಸಬಹುದು. ಇದೇ ವೇಳೆ, ಏಪ್ರಿಲ್ ೫ರಂದು ಬೆಳಿಗ್ಗೆ ೧೦ ಗಂಟೆಗೆ ಹಾಸನದ ಸಾಲಗಾಮೆ ರಸ್ತೆಯ ಒಳಾಂಗಣ ಕ್ರೀಡಾಂಗಣದಲ್ಲಿ ಹಾಸನ ಜಿಲ್ಲಾ ಪವರ್‌ಲಿಫ್ಟಿಂಗ್ ಸಂಸ್ಥೆಯ ಸಾಮಾನ್ಯ ಸಭೆ ನಡೆಯಲಿದ್ದು, ಜಿಲ್ಲೆಯ ಎಲ್ಲಾ ಜಿಮ್ ಮಾಲೀಕರು ಮತ್ತು ಕ್ರೀಡಾಪಟುಗಳು ಭಾಗವಹಿಸಿ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಕೋರಲಾಗಿದೆ. ಈ ಚಾಂಪಿಯನ್‌ಶಿಪ್ ಮೂಲಕ ಹಾಸನ ಜಿಲ್ಲೆಯ ಯುವ ಕ್ರೀಡಾಪಟುಗಳಿಗೆ ತಮ್ಮ ಪ್ರತಿಭೆಯನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ತೋರಿಸಲು ಉತ್ತಮ ವೇದಿಕೆ ಸಿಗಲಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪವರ್ ಲಿಫ್ಟಿಂಗ್ ಪೋಷಕ ನಿರಂಜನ್ ರಾಜ್, ಸಂಸ್ಥೆ ಸಂಸ್ಥಾಪಕ ಹಾಗೂ ಕಾರ್ಯದರ್ಶಿ ಕೆ. ಹನುಮಂತೇಗೌಡ, ಸಹ ಕಾರ್ಯದರ್ಶಿ ಸಂತೋಷ್ ಶೆಟ್ಟಿ, ಶಿವಸ್ವಾಮಿ, ತ್ರಿಭುವನಗೌಡ, ಅಶೋಕ್ ಇತರರು ಉಪಸ್ಥಿತರಿದ್ದರು.ಹಾಸನದಲ್ಲಿ ರಾಜ್ಯ ಮಟ್ಟದ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್
ಕ್ರೀಡಾ ಕ್ಷೇತ್ರದಲ್ಲಿ ಜಿಲ್ಲೆಯನ್ನು ರಾಜ್ಯ ಮಟ್ಟದಲ್ಲಿ ಮತ್ತಷ್ಟು ಗುರುತಿಸುವ ಉದ್ದೇಶ ಹಾಸನ ಜಿಲ್ಲಾ ಪವರ್ ಲಿಫ್ಟಿಂಗ್ ಸಂಸ್ಥೆ ವತಿಯಿಂದ, ಕರ್ನಾಟಕ ಪವರ್ ಲಿಫ್ಟಿಂಗ್ ಸಂಸ್ಥೆ, ಮಂಗಳೂರು ಇವರ ಅನುಮತಿಯೊಂದಿಗೆ ಹಾಗೂ ಟೈಮ್ಸ್ ಗುರುಕುಲ ಇಂಟರ್‌ನ್ಯಾಷನಲ್ ಸಹಯೋಗದಲ್ಲಿ ರಾಜ್ಯ ಮಟ್ಟದ ಮುಕ್ತ ಹಾಗೂ ಬಾಲಕ, ಬಾಲಕಿಯರ ಸಬ್ ಜೂನಿಯರ್ ಕ್ಲಾಸಿಕ್ ಮತ್ತು ಎಕ್ಯುಪ್ಡ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್-೨೦೨೬ ಅನ್ನು ಇದೇ ಮೊದಲ ಬಾರಿಗೆ ನಗರದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಪವರ್ ಲಿಫ್ಟಿಂಗ್ ಅಧ್ಯಕ್ಷ ವಿಜಯಕುಮಾರ್ ತಿಳಿಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.