ಸಾರಾಂಶ
ಕನಕಪುರ: ಬೆಂಗಳೂರಿನ ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ನಡೆದ 17ನೇ ಮಟ್ಟದ ರಾಜ್ಯಮಟ್ಟದ ಶಾಲಾ ಒಲಂಪಿಕ್ ಕ್ರೀಡಾಕೂಟದಲ್ಲಿ ತಾಲೂಕಿನ ಜೈನ್ ಶಾಲೆಯ ವಿದ್ಯಾರ್ಥಿ ಗಳು 4 ಚಿನ್ನ, 4 ಬೆಳ್ಳಿ, 1 ಕಂಚು ಸೇರಿದಂತೆ 9 ಪದಕ ಗೆದ್ದು ಶಾಲೆಗೆ ಕೀರ್ತಿ ತಂದಿದ್ದಾರೆ.

ಹದಿನಾರು ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ವೈಷ್ಣವಿ ಎಸ್.ಗೌಡ ಡಿಸ್ಕಸ್ ಥ್ರೋನಲ್ಲಿ ಬೆಳ್ಳಿ ಹಾಗೂ ಶಾಟ್‌ಪುಟ್ ಕಂಚಿನ ಪದಕ, 12 ವರ್ಷಗಳದೊಳಗಿನ ವಿಭಾಗದ 80 ಮೀಟರ್ ಓಟದಲ್ಲಿ ಬೆಳ್ಳಿ ಹಾಗೂ 400 ಮೀಟರ್ ಓಟದಲ್ಲಿ ಚಿನ್ನ, ಪ್ರಿಯಾಂಕಾ ಟಿ.ಎಂ.ಲಾಂಗ್ ಜಂಪ್ ಮತ್ತು ಐ ಜಂಪ್‌ನಲ್ಲಿ ಚಿನ್ನದ ಪದಕ, 14 ವರ್ಷದೊಳಗಿನ ಷಾಟ್ ಪುಟ್‌ನಲ್ಲಿ ಬಿ.ಎಂ.ನಾಗವೇಣಿ ಚಿನ್ನದ ಪದಕ ಪಡೆದಿದ್ದಾರೆ. ಬಾಲಕರ ವಿಭಾಗದಲ್ಲಿ ಕುಶಾಲ್ ಗೌಡ ಬಾಲ್ ಥ್ರೋ ಮತ್ತು ಲಾಂಗ್ ಜಂಪ್‌ನಲ್ಲಿ ಬೆಳ್ಳಿ ಪದಕಗಳನ್ನು ಜಯಗಳಿಸಿದ್ದು ಮಕ್ಕಳ ಈ ಸಾಧನೆಗೆ ಶಾಲೆಯ ಆಡಳಿತ ಮಂಡಳಿ ನಿರ್ದೇಶಕಿ ಡಾ.ವತ್ಸಲಾ, ಪ್ರಾಂಶುಪಾಲೆ ರತ್ನಮ್ಮ ಮಕ್ಕಳು ಹಾಗೂ ದೈಹಿಕ ಶಿಕ್ಷಕ ಆಂಜನೇಯ ಅಭಿನಂದನೆ ಸಲ್ಲಿಸಿದ್ದಾರೆ.