ತಾಳಿಕೋಟೆಯಲ್ಲಿ ರಾಜ್ಯಮಟ್ಟದ ವಾಲಬಾಲ್‌ ಕ್ರೀಡಾಕೂಟ

| Published : Nov 01 2024, 12:34 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ತಾಳಿಕೋಟೆ ಪಟ್ಟಣದ ಎಸ್.ಎಸ್.ವಿದ್ಯಾ ಸಂಸ್ಥೆಯಡಿಯಲ್ಲಿ ನಡೆಯುತ್ತಿರುವ ಎಚ್.ಎಸ್.ಪಾಟೀಲ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ನ.೩ರಿಂದ ೫ ರವರೆಗೆ ರಾಜ್ಯಮಟ್ಟದ ವಾಲಿಬಾಲ್ ಕ್ರೀಡಾಕೂಟ ಹಮ್ಮಿಕೊಂಡಿದ್ದು, ಮೈದಾನ ಸಿದ್ದವಿರುವುದಾಗಿ ವಿಜಯಪೂರ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ.ಸಿ.ಕೆ.ಹೊಸಮನಿ ಹೇಳಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಪಟ್ಟಣದ ಎಸ್.ಎಸ್.ವಿದ್ಯಾ ಸಂಸ್ಥೆಯಡಿಯಲ್ಲಿ ನಡೆಯುತ್ತಿರುವ ಎಚ್.ಎಸ್.ಪಾಟೀಲ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ನ.೩ರಿಂದ ೫ ರವರೆಗೆ ರಾಜ್ಯಮಟ್ಟದ ವಾಲಿಬಾಲ್ ಕ್ರೀಡಾಕೂಟ ಹಮ್ಮಿಕೊಂಡಿದ್ದು, ಮೈದಾನ ಸಿದ್ದವಿರುವುದಾಗಿ ವಿಜಯಪೂರ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ.ಸಿ.ಕೆ.ಹೊಸಮನಿ ಹೇಳಿದರು.

ಪಟ್ಟಣದ ಎಸ್.ಎಸ್.ವಿದ್ಯಾ ಸಂಸ್ಥೆಗೆ ಭೇಟಿ ನೀಡಿ ಕ್ರೀಡಾಕೂಟಕ್ಕೆ ಸಂಬಂಧಿಸಿದ ವ್ಯವಸ್ಥೆ ಪರಿಶೀಲಿಸಿದರು. ಈ ವೇಳೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯಮಟ್ಟದ ಬಾಲಕ ಬಾಲಕಿಯರ ೨೦೨೪ -೨೫ ನೇ ಸಾಲಿನ ವಾಲಿಬಾಲ್ ಕ್ರೀಡಾಕೂಟವು ಕೇವಲ ಹೆಚ್.ಎಸ್ ಪಾಟೀಲ್ ಕಾಲೇಜಿಗೆ ಸೀಮಿತವಲ್ಲ. ಎಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಸಿಬ್ಬಂದಿಗಳು ಎಚ್‌.ಎಸ್.ಪಾಟೀಲರೊಂದಿಗೆ ಕೈಜೋಡಿಸಬೇಕು. ರಾಜ್ಯದ ಸುಮಾರು ೩೨ ಜಿಲ್ಲೆಗಳಿಂದ ಕ್ರೀಡಾಪಟುಗಳು ಆಗಮಿಸುತ್ತಿರುವದರಿಂದ ಹಾಗೂ ಸಚಿವರು, ಶಾಸಕರು ಅಲ್ಲದೇ ಶಿಕ್ಷಣ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಆಗಮಿಸುತ್ತಿದ್ದಾರೆ. ಈ ಕ್ರೀಡಾಕೂಟವು ರಾಷ್ಟ್ರಮಟ್ಟದ ಕ್ರೀಡಾಕೂಟದ ರೀತಿಯಲ್ಲಿ ನಡೆಯಬೇಕು ಎಂದರು.

ಜಿಲ್ಲಾ ದೈಹಿಕ ಉಪನ್ಯಾಸಕರ ಸಂಘದ ಅಧ್ಯಕ್ಷೆ ಎಸ್.ಎಸ್.ದುರ್ಗಿ ಮಾತನಾಡಿ, ಜಿಲ್ಲಾ ದೈಹಿಕ ಉಪನ್ಯಾಸಕರ ಸಂಘ ಅಲ್ಲದೇ ಜಿಲ್ಲೆಯ ಎಲ್ಲಾ ಪ.ಪೂ ಕಾಲೇಜಿನ ಪ್ರಾಚಾರ್ಯರು ಹಾಗೂ ಉಪನ್ಯಾಸಕರು ಕ್ರೀಡಾಕೂಟಕ್ಕೆ ಸಹಕರಿಸುತ್ತೇವೆ. ರಾಜ್ಯಮಟ್ಟದ ವಾಲಿಬಾಲ್ ಕ್ರೀಡಾಕೂಟ ಮಾದರಿಯ ಕ್ರೀಡಾಕೂಟವಾಗಿ ಕಾಣಬೇಕು. ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದ್ದು, ದೈಹಿಕ ಶಿಕ್ಷಣದ ಎಲ್ಲ ಉಪನ್ಯಾಸಕರು ಯಶಸ್ವಿಗೆ ಸನ್ನದರಾಬೇಕು ಎಂದು ಹೇಳಿದರು.

ವಿಜಯಪುರ ಪದವಿಪೂರ್ವ ಶಿಕ್ಷಣ ಇಲಾಖೆಯ ಶಾಖಾಧಿಕಾರಿ ಪ್ರಕಾಶ ಗೊಂಗಡಿ ಮಾತನಾಡಿ, ಈ ರಾಜ್ಯಮಟ್ಟದ ವಾಲಿಬಾಲ್ ಕ್ರೀಡಾಕೂಟವು ಇದೇ ಶಿಕ್ಷಣ ಸಂಸ್ಥೆಗೆ ಒದಗಿ ಬಂದಿರುವದು ಸಂತಸ ತಂದಿದೆ. ರಾಷ್ಟ್ರಮಟ್ಟದ ವಾಲಿಬಾಲ್ ಕ್ರೀಡಾಕೂಟದ ಮಾದರಿಯಲ್ಲಿ ತಯಾರಿ ಮಾಡಿಕೊಂಡಿರುವದು ಉತ್ತಮವಾಗಿದೆ ಎಂದು ತಿಳಿಸಿದರು.ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಎಸ್.ಪಾಟೀಲ(ಯಾಳಗಿ) ಮಾತನಾಡಿ, ರಾಜ್ಯಮಟ್ಟದ ವಾಲಿಬಾಲ್ ಕ್ರೀಡಾಕೂಟ ಕೇವಲ ಎಚ್ ಎಸ್ ಪಾಟೀಲರಿಂದ ಯಶಸ್ವಿಗೊಳಿಸಲು ಆಗಲ್ಲ. ಇದಕ್ಕೆ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.

ಶಿಕ್ಷಕ ಶ್ರೀಕಾಂತ ಪತ್ತಾರ ಸಂಪೂರ್ಣ ತಯಾರಿ ಬಗ್ಗೆ ವಿವರಿಸಿದರು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಚ್.ಎಸ್.ಪಾಟೀಲ ಮಾತನಾಡಿ, ಕ್ರೀಡಾಕೂಟದ ಯಶಸ್ವಿಗೆ ತಾಳಿಕೋಟೆಯ ಎಲ್ಲ ಶಾಲಾ ಕಾಲೇಜಿನ ಅಧ್ಯಕ್ಷರು ತನು, ಮನ ಹಾಗೂ ಧನದಿಂದ ಸಹಾಯ ಒದಗಿಸಿದ್ದಾರೆ. ಕ್ರೀಡಾಕೂಟದ ಯಶಸ್ಸಿಗೆ ಸಹಕರಿಸಿದ್ದಾಗಿ ತಿಳಿಸಿದರು.ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ್(ಕೂಚಬಾಳ) ಬ್ರಿಲಿಯಂಟ್‌ ಶಾಲಾ ಅಧ್ಯಕ್ಷ ನಾನಾಗೌಡ ಪಾಟೀಲ್, ಘನಮಠೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಎಂ.ಸಜ್ಜನ್, ಬಿ.ಎನ್.ನಾಯ್ಕೋಡಿ, ಕೆ.ಜಿ.ಲಮಾಣಿ, ನೀಲಮ್ಮ.ಪಾಟೀಲ, ಕಾಶೀನಾಥ. ಮುರಾಳ, ಮುರಿಗೆಪ್ಪ ಸರಶಟ್ಟಿ ಉಪಸ್ಥಿತರಿದ್ದರು.

ಎಮ್.ಎಸ್.ಬಿರಾದಾರ, ದೈಹಿಕ ಉಪನ್ಯಾಸಕ ಎಸ್.ಬಿ.ಮಂಗ್ಯಾಳ್ ಪ್ರೌಢ ಶಾಲೆಯ ದೈಹಿಕ ಶಿಕ್ಷಕ ಎಂ.ಎಸ್.ರಾಯಗೊಂಡ, ಮುದ್ದೇಬಿಹಾಳ ಮತ್ತು ತಾಳಿಕೋಟೆ ತಾಲೂಕಿನ ಪಿಯು ಕಾಲೇಜ್ ಪ್ರಾಚಾರ್ಯರು, ಹಿರಿಯ ಉಪನ್ಯಾಸಕರು, ಶಿಕ್ಷಕರು ಉಪಸ್ಥಿತರಿದ್ದರು.

ಶಿಕ್ಷಕ ಬಿ.ಐ.ಹಿರೇಹೊಳಿ ನಿರೂಪಿಸಿ, ವಂದಿಸಿದರು.