ಇಂದು, ನಾಳೆ ಬಂಜಾರ ಸಮಾಜದಿಂದ ರಾಜ್ಯಮಟ್ಟದ ಕಾರ್ಯಾಗಾರ

| Published : Jul 27 2024, 12:46 AM IST

ಸಾರಾಂಶ

ಬಂಜಾರ ಸಮಾಜದಿಂದ ಮನವ ಬಂಧುತ್ವ ವೇದಿಕೆ ಸಹಯೋಗದಲ್ಲಿ ಬಂಜಾರ ಯುವಜನರಿಗಾಗಿ ರಾಜ್ಯಮಟ್ಟದ ಉದ್ಯಮಶೀಲತೆ ಮತ್ತು ನಾಯಕತ್ವ ತರಬೇತಿ ಕಾರ್ಯಾಗಾರವನ್ನು ಜು.27 ಮತ್ತು 28ರಂದು ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿಯ ಪ್ರೊ. ಬಿ.ಕೃಷ್ಣಪ್ಪ ಭವನದಲ್ಲಿ ಆಯೋಜಿಸಲಾಗಿದೆ.

ದಾವಣಗೆರೆ: ಬಂಜಾರ ಸಮಾಜದಿಂದ ಮನವ ಬಂಧುತ್ವ ವೇದಿಕೆ ಸಹಯೋಗದಲ್ಲಿ ಬಂಜಾರ ಯುವಜನರಿಗಾಗಿ ರಾಜ್ಯಮಟ್ಟದ ಉದ್ಯಮಶೀಲತೆ ಮತ್ತು ನಾಯಕತ್ವ ತರಬೇತಿ ಕಾರ್ಯಾಗಾರವನ್ನು ಜು.27 ಮತ್ತು 28ರಂದು ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿಯ ಪ್ರೊ. ಬಿ.ಕೃಷ್ಣಪ್ಪ ಭವನದಲ್ಲಿ ಆಯೋಜಿಸಲಾಗಿದೆ. ಜು.27ರಂದು ಬೆಳಗ್ಗೆ 10 ಗಂಟೆಯಿಂದ ನೋಂದಣಿ ಆರಂಭಗೊಳ್ಳಲಿದೆ. ಬೆಳಗ್ಗೆ 10.30 ಗಂಟೆಗೆ ಕಾರ್ಯಾಗಾರವನ್ನು ಐಜಿಪಿ ರಮೇಶ್ ಬಾಣವತ್ ಉದ್ಘಾಟಿಸುವರು. ಎಂಬಿವಿ ರಾಜ್ಯ ಸಂಚಾಲಕ ಪ್ರೊ. ಎ.ಬಿ. ರಾಮಚಂದ್ರಪ್ಪ ದಿಕ್ಕೂಚಿ ಭಾಷಣ ಮಾಡಲಿದ್ದು, ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ. ಅಧ್ಯಕ್ಷ ಜಯದೇವ ನಾಯ್ಕ, ಕೌಶಲ್ಯಾಭಿವೃದ್ಧಿ ನಿಗಮ ಅಧ್ಯಕ್ಷರಾದ ಕಾಂತನಾಯ್ಕ, ಕರ್ನಾಟಕ ಬಂಜಾರ ನೌಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಹರೀಶ್‌ನಾಯ್ಕ, ಸರ್ಕಾರಿ ಪ್ರದ ಕಾಲೇಜು ಪ್ರಾಧ್ಯಾಪಕ ಡಾ. ಆರ್. ಸೀನಾ ನಾಯಕ್, ಎಐಬಿಎಸ್‌ಎಸ್ ಮಹಿಳಾ ರಾಜ್ಯಾಧ್ಯಕ್ಷರಾದ ಶೈಲಜಾ ಬಾಯಿ ಉಪಸ್ಥಿತರಿರುವರು. ಅನಂತರ ಗೋಷ್ಠಿಗಳು ನಡೆಯಲಿದ್ದು, ಸಂಜೆ 6.30 ರಿಂದ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬಂಜಾರ ಅಕಾಡೆಮಿ ಅಧ್ಯಕ್ಷ ಡಾ.ಗೋವಿಂದಸ್ವಾಮಿ ಚಾಲನೆ ನೀಡಲಿದ್ದಾರೆ.

ಜು.28ರಂದು ಬೆಳಗ್ಗೆ 8 ಗಂಟೆಗೆ ವ್ಯಾಯಾಮ, ಪುನರ್ಮನನ ಇರಲಿದೆ. ಅನಂತರ ಬೆಳಗ್ಗೆ 10 ಗಂಟೆಯಿಂದ ಗೋಷ್ಠಿಗಳು ನಡೆಯಲಿವೆ. ಸಂಜೆ 6 ಗಂಟೆಗೆ ನಡೆಯುವ ಸಮಾರೋಪದಲ್ಲಿ ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ, ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ ಮಾಜಿ ನಿರ್ದೇಶಕ ಅನಿಲ್‌ಕುಮಾರ್ ಮಾತನಾಡಲಿದ್ದಾರೆ.