ಕರ್ನಾಟಕ ರಾಜ್ಯ ಅಮೆಚೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಶನ್, ಉ.ಕ. ಜಿಲ್ಲಾ ಮತ್ತು ತಾಲೂಕು ಫೆಡರೇಶನ್ ವತಿಯಿಂದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆ ಜೂ. ೬, ೭ರಂದು ಪಟ್ಟಣದ ಈಶ್ವರೀ ವಿಶ್ವವಿದ್ಯಾಲಯದ ತಪೋವನದಲ್ಲಿ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಯಲ್ಲಾಪುರ
ಕರ್ನಾಟಕ ರಾಜ್ಯ ಅಮೆಚೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಶನ್, ಉ.ಕ. ಜಿಲ್ಲಾ ಮತ್ತು ತಾಲೂಕು ಫೆಡರೇಶನ್ ವತಿಯಿಂದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆ ಜೂ. ೬, ೭ರಂದು ಪಟ್ಟಣದ ಈಶ್ವರೀ ವಿಶ್ವವಿದ್ಯಾಲಯದ ತಪೋವನದಲ್ಲಿ ನಡೆಯಲಿದೆ ಎಂದು ಪ್ರಮುಖರಾದ ಅನಿಲ ಕರಿ ಹೇಳಿದರು.ಗುರುವಾರ ಪಟ್ಟಣದ ಸಂಸ್ಕೃತಿ ನಿವಾಸದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಜೂ. ೫ರಂದು ಸಂಜೆಯಿಂದಲೇ ಸ್ಪರ್ಧಾಳುಗಳಿಗೆ ವಸತಿಗೆ ಬರುವ ಅಭ್ಯರ್ಥಿಗಳು ೬ ಗಂಟೆಯೊಳಗಾಗಿ ಈಶ್ವರಿ ವಿಶ್ವವಿದ್ಯಾಲಯಕ್ಕೆ ಬಂದು ತಲುಪಬೇಕು. ಅಲ್ಲದೇ ೬ರಂದು ಬರುವವರು ಬೆಳಗ್ಗೆ ೮ ಗಂಟೆಯೊಳಗೆ ಬರಬೇಕು. ಆಸಕ್ತರು ಅನಿಲ ಕರಿ (೯೮೪೫೩೨೯೩೦೬), ಸುಬ್ರಾಯ ಭಟ್ಟ (೯೪೮೨೧೮೫೪೮೦), ದಿವಾಕರ ಮರಾಠಿ (೯೪೮೦೦೮೫೫೩೨) ಸಂಪರ್ಕಿಸಿ, ೩೧ರೊಳಗೆ ಹೆಸರನ್ನು ನೋಂದಾಯಿಸಿಕೊಳ್ಳಿ ಎಂದ ಅವರು, ೬ರಂದು ಬೆಳಗ್ಗೆ ೧೦ ಗಂಟೆಗೆ ಶಾಸಕ ಶಿವರಾಮ ಹೆಬ್ಬಾರ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸುವರು. ರಾಜ್ಯಾಧ್ಯಕ್ಷ ಡಾ. ಪಿ.ಎನ್. ಗಣೇಶಕುಮಾರ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಅಸೋಸಿಯೇಶನ್ ಚೇರ್ಮನ್ ಜಿ.ಎನ್. ಕೃಷ್ಣಮೂರ್ತಿ, ಸ್ಥಳೀಯ ಪ್ರಮುಖರಾದ ಪ್ರಮೋದ ಹೆಗಡೆ, ಗೋಪಾಲಕೃಷ್ಣ ಭಟ್ಟ ಹಂಡ್ರಮನೆ, ರೇಖಾ ನಾಯ್ಕ ಭಾಗವಹಿಸುವರು ಎಂದು ತಿಳಿಸಿದರು.
ಸಂಜೆ ೭.೩೦ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ನೃತ್ಯ, ಗಾಯನ ಮತ್ತು ಗಮಕ ಕಾರ್ಯಕ್ರಮ ನಡೆಯಲಿದ್ದು, ಮುಕ್ತಾ ಶಂಕರ ಗಮಕ ವಾಚನಕಾರರಾಗಿ ಮತ್ತು ಡಾ. ಡಿ.ಕೆ. ಗಾಂವ್ಕರ ವ್ಯಾಖ್ಯಾನಕಾರರಾಗಿ ಭಾಗವಹಿಸುವರು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಹರಿಪ್ರಕಾಶ ಕೋಣೆಮನೆ, ಶ್ರೀನಿವಾಸ ಹೆಬ್ಬಾರ, ಆರ್.ಎಸ್. ಹೆಗಡೆ ಗೋರ್ಸಗದ್ದೆ, ಜಿ.ಎನ್. ಹೆಗಡೆ ಹಿರೇಸರ ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು ವಿವರಿಸಿದರು.ಈ ಸಂದರ್ಭ ರಾಜ್ಯಮಟ್ಟದ ಯೋಗಾಸನ ಸ್ಪರ್ಧಾ ಸ್ವಾಗತ ಸಮಿತಿಯ ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ಕಾರ್ಯಾಧ್ಯಕ್ಷ ಶಂಕರ ಭಟ್ಟ ತಾರೀಮಕ್ಕಿ, ಪ್ರಧಾನ ಕಾರ್ಯದರ್ಶಿ ಸುಬ್ರಾಯ ಭಟ್ಟ ಆನೇಜಡ್ಡಿ, ಸ್ವಾಗತ ಸಮಿತಿಯ ಪ್ರಮುಖರಾದ ಡಿ.ಎನ್. ಗಾಂವ್ಕರ, ಸಣ್ಣಪ್ಪ ಭಾಗ್ವತ, ಕನಕಪ್ಪ, ಕೆ.ಟಿ. ಹೆಗಡೆ ಉಪಸ್ಥಿತರಿದ್ದರು.