ರಾಜ್ಯ ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮಂಜುನಾಥ್‌ಗೆ ಸನ್ಮಾನ

| Published : May 21 2025, 12:12 AM IST

ರಾಜ್ಯ ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮಂಜುನಾಥ್‌ಗೆ ಸನ್ಮಾನ
Share this Article
  • FB
  • TW
  • Linkdin
  • Email

ಸಾರಾಂಶ

ಗುಂಡ್ಲುಪೇಟೆಯಲ್ಲಿ ರಾಜ್ಯ ಔಷಧಿ ವ್ಯಾಪಾರಿಗಳ ಸಂಘದ ನೂತನ ಅಧ್ಯಕ್ಷ ಮಂಜುನಾಥ್‌ ಪಂಜನಹಳ್ಳಿ ಅವರನ್ನು ತಾಲೂಕು ಔಷಧಿ ವ್ಯಾಪಾರಿಗಳ ಸಂಘ ಸನ್ಮಾನಿಸಿತು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಔಷಧಿ ವ್ಯಾಪಾರಿಗಳ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ರಾಜ್ಯ ಔಷಧಿ ವ್ಯಾಪಾರಿಗಳ ಸಂಘದ ನೂತನ ಅಧ್ಯಕ್ಷ ಮಂಜುನಾಥ್‌ ಪಂಜನಹಳ್ಳಿ ಔಷಧಿ ವ್ಯಾಪಾರಿಗಳಿಗೆ ಭರವಸೆ ನೀಡಿದರು.ಪಟ್ಟಣದ ಪುರಸಭೆ ಮಾಜಿ ಅಧ್ಯಕ್ಷ ರಮೇಶ್‌ ಫಾರಂ ಹೌಸ್‌ನಲ್ಲಿ ನಡೆದ ತಾಲೂಕು ಔಷಧಿ ವ್ಯಾಪಾರಿಗಳ ಸಂಘ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಔಷಧಿ ವ್ಯಾಪಾರಿಗಳಿಗೆ ನಾನಾ ಸಮಸ್ಯೆಗಳಿವೆ. ದೊಡ್ಡ ದೊಡ್ಡ ಔಷಧಿ ಅಂಗಡಿಗಳಲ್ಲಿ ರಿಯಾಯಿತಿ ದರದಲ್ಲಿ ಔಷಧಿ ವ್ಯಾಪಾರ ಮಾಡುವ ಕಾರಣ ಔಷಧಿ ವ್ಯಾಪಾರಿಗಳಿಗೆ ಹೊಡೆತ ಬಿದ್ದಿದೆ ಎಂದರು. ಔಷಧಿ ವ್ಯಾಪಾರ ಮಾಡಲು ಕಾನೂನಿಗಳಿವೆ. ಕಾನೂನಿನಡಿಯಲ್ಲಿಯೇ ವ್ಯಾಪಾರ ನಡೆಸಬೇಕು. ಔಷಧಿ ಅಂಗಡಿಗಳ ಕಾಲ ಕಾಲಕ್ಕೆ ರಿನ್ನಿವೇಷನ್‌ ಮಾಡಿಸಿ ಗ್ರಾಹಕರ ಆಕರ್ಷಿಸಿ ಎಂದರು. ಔಷಧಿ ಅಂಗಡಿಯಲ್ಲಿ ಗ್ರಾಹಕರು ವೈದ್ಯರು ಬರೆದು ಕೊಟ್ಟ ಚೀಟಿ ಒಂದಲ್ಲ, ಎರಡು ಸಾರಿ ನೋಡಿ ಔಷಧಿ ಕೊಟ್ಟು ಯಾವ ರೀತಿಯಲ್ಲಿ ಔಷಧಿ ಉಪಯೋಗಿಸಬೇಕು ಎಂದು ಗ್ರಾಹಕರಿಗೆ ಮಾಹಿತಿ ನೀಡಿ ಎಂದರು.

ಗುಂಡ್ಲುಪೇಟೆ ತಾಲೂಕು ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ವಿ.ಆರ್.ಶಾಂತರಾಂ ಮಾತನಾಡಿ, ಔಷಧಿ ವ್ಯಾಪಾರಿಗಳ ಸಮಸ್ಯೆಗಳಿಗೆ ರಾಜ್ಯ ಸಂಘದ ಸ್ಪಂದಿಸಬೇಕು ಮತ್ತು ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಬೇಕು ಎಂದು ಮನವಿ ಮಾಡಿದರು. ಸಮಾರಂಭದಲ್ಲಿ ರಾಜ್ಯ ಔಷಧಿ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ವೆಂಕಟೇಶ್‌ ಬಾಬು, ಚಾಮರಾಜನಗರ ಅಧ್ಯಕ್ಷ ಶಿವಶಂಕರ್‌, ಮೈಸೂರು ನಗರ ಅಧ್ಯಕ್ಷ ಪ್ರಕಾಶ್‌, ಗುಂಡ್ಲುಪೇಟೆ ತಾಲೂಕು ಉಪಾಧ್ಯಕ್ಷ ಅರ್ಜುನ್‌, ಕಾರ್ಯದರ್ಶಿ ನವಕರ್‌ ಸಂಜಯ್‌, ಚಾಮರಾಜನಗರ ಔಷಧಿ ಸಹಾಯಕ ನಿಯಂತ್ರಕ ಹರೀಶ್‌ ಸೇರಿದಂತೆ ಪಟ್ಟಣದ ಔಷಧಿ ವ್ಯಾಪಾರಿಗಳಿದ್ದರು.