ರಾಜ್ಯ ಸಾರಿಗೆ ಬಸ್‌ ಮೆಲೆ ಕಲ್ಲು ತೂರಾಟ, ಓರ್ವನಿಗೆ ಗಾಯ

| Published : Dec 22 2023, 01:30 AM IST

ಸಾರಾಂಶ

ಹುಕ್ಕೇರಿ-ಬೆಳಗಾವಿ ಮಾರ್ಗ ಮಧ್ಯೆ ಸಂಚರಿಸುವ ಬಸ್ ಮೇಲೆ ಅಪರಿಚಿತರಿಂದ ಕಲ್ಲು ತೂರಾಟದಿಂದ ಓರ್ವ ಪ್ರಯಾಣಿಕನಿಗೆ ಗಾಯವಾದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೇನಕುಳಿ ಗ್ರಾಮದ ಬಳಿ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರ ಮೇಲೆ ಗುರುವಾರ ನಡೆದಿದೆ.

ಬೆಳಗಾವಿ: ಹುಕ್ಕೇರಿ-ಬೆಳಗಾವಿ ಮಾರ್ಗ ಮಧ್ಯೆ ಸಂಚರಿಸುವ NWKRT ಬಸ್ ಮೇಲೆ ಅಪರಿಚಿತರಿಂದ ಕಲ್ಲು ತೂರಾಟದಿಂದ ಓರ್ವ ಪ್ರಯಾಣಿಕನಿಗೆ ಗಾಯವಾದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೇನಕುಳಿ ಗ್ರಾಮದ ಬಳಿ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರ ಮೇಲೆ ಗುರುವಾರ ನಡೆದಿದೆ. ಕಲ್ಲು ತೂರಾಟದಿಂದ ಕರ್ನಾಟಕ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಓರ್ವ ಪ್ರಯಾಣಿಕನಿಗೆ ಗಾಯವಾಗಿದ್ದು, ಯಮಕನಮರಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.