ಮುರುಳಿಮೋಹನ್ ವಿರುದ್ಧದ ಹೇಳಿಕೆ ಸತ್ಯಕ್ಕೆ ದೂರ: ಕಲ್ಗಣೆ ಪ್ರಶಾಂತ್

| Published : Mar 10 2024, 01:30 AM IST

ಮುರುಳಿಮೋಹನ್ ವಿರುದ್ಧದ ಹೇಳಿಕೆ ಸತ್ಯಕ್ಕೆ ದೂರ: ಕಲ್ಗಣೆ ಪ್ರಶಾಂತ್
Share this Article
  • FB
  • TW
  • Linkdin
  • Email

ಸಾರಾಂಶ

ಸಕಲೇಶಪುರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಮುರುಳಿಮೋಹನ್ ವಿರುದ್ಧ ನೀಡಿರುವ ಹೇಳಿಕೆ ಸತ್ಯಕ್ಕೆ ದೂರವಾಗಿರುತ್ತದೆ. ಹೇಳಿಕೆ ರಾಜಕೀಯ ಪ್ರೇರಿತವಾಗಿರುತ್ತದೆ ಎಂದು ಸಕಲೇಶಪುರ ತಾಲೂಕಿನ ಎಸ್ಸಿ, ಎಸ್ಟಿ ಘಟಕದ ಅಧ್ಯಕ್ಷ ಕಲ್ಗಣೆ ಪ್ರಶಾಂತ್ ತಿಳಿಸಿದರು. ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಸುದ್ದಿಗೋಷ್ಠಿ । ಸಕಲೇಶಪುರದ ಎಸ್ಸಿ, ಎಸ್ಟಿ ಘಟಕದ ಅಧ್ಯಕ್ಷ । ಹೇಳಿಕೆ ರಾಜಕೀಯ ಪ್ರೇರಿತಕನ್ನಡಪ್ರಭ ವಾರ್ತೆ ಹಾಸನ

ದಲಿತ ಮುಖಂಡ ಎಂದು ಹೇಳಿಕೊಳ್ಳುವ ಸಕಲೇಶಪುರದ ದೊಡ್ಡಯ್ಯ, ಬಿಜೆಪಿ ಕಾರ್ಯಕರ್ತ ಸ್ಟೀವನ್ ಪ್ರಕಾಶ್, ಮಂಜುನಾಥ್, ಕುಮಾರ್, ಗೌರವ್, ವೀರೇಶ್, ಇತರರು ಸಕಲೇಶಪುರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಮುರುಳಿಮೋಹನ್ ವಿರುದ್ಧ ನೀಡಿರುವ ಹೇಳಿಕೆ ಸತ್ಯಕ್ಕೆ ದೂರವಾಗಿರುತ್ತದೆ. ಹೇಳಿಕೆ ರಾಜಕೀಯ ಪ್ರೇರಿತವಾಗಿರುತ್ತದೆ ಎಂದು ಸಕಲೇಶಪುರ ತಾಲೂಕಿನ ಎಸ್ಸಿ, ಎಸ್ಟಿ ಘಟಕದ ಅಧ್ಯಕ್ಷ ಕಲ್ಗಣೆ ಪ್ರಶಾಂತ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಮುರುಳಿ ಮೋಹನ್ ಅವರು ಸಕಲೇಶಪುರಕ್ಕೆ ಬಂದ ನಂತರ ಅನೇಕ ಅಭಿವೃದ್ದಿ ಕೆಲಸಗಳು ನಡೆಯುತ್ತಿವೆ, ಎಲ್ಲಾ ಜಾತಿ ಜನಾಂಗವನ್ನೂ ಸಮಾನವಾಗಿ ತೆಗೆದುಕೊಂಡು ಹೋಗುವ ಮೂಲಕ ವಿವಿಧ ಸಮಸ್ಯೆಗಳಿಗೆ ಧ್ವನಿಯಾಗಿದ್ದಾರೆ. ಆದರೆ ದೊಡ್ಡಯ್ಯ ಅವರು ದಲಿತರು ಎಂದು ಕೇಳಿಕೊಂಡು ಅಟ್ರಾಸಿಟಿ ಕಾನೂನು ದುರುಪಯೋಗ ಪಡಿಸಿಕೊಂಡು ಮುರುಳಿ ಮೋಹನ್ ಅವರ ಒಳ್ಳೆಯ ಕೆಲಸಗಳನ್ನು ದುರುಪಯೋಗಪಡಿಸಿಕೊಂಡು ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮುರುಳಿ ಮೋಹನ್ ಅವರು ನ್ಯಾಯಸಮ್ಮತ ವಿಚಾರಗಳಿಗೆ ದ್ವನಿ ಎತ್ತಿದ ಪರಿಣಾಮ ಅದನ್ನು ಸಹಿಸದೆ ಅವರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ, ಅಧಿಕಾರಿಯೊಬ್ಬರ ಜೊತೆ ಧಮ್ಕಿ ಹಾಕಿರುವ ಬಗ್ಗೆ ವೈರಲ್ ಆಗಿರುವ ಆಡಿಯೋದಲ್ಲಿ ಸಾಮಾನ್ಯವಾಗಿ ಮುರುಳಿ ಮೋಹನ್ ಮಾತನಾಡಿದ್ದಾರೆ, ಆದರೆ ಅದನ್ನೇ ತಿರುಚಿ ಸುಳ್ಳು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಲ್ಗಣೆ ಪ್ರಶಾಂತ್‌ ದೂರಿದರು.

ಕೃಷಿ ಅಧಿಕಾರಿಯ ಬಗ್ಗೆ ವಕಾಲತ್ತು ವಹಿಸಿರುವ ದೊಡ್ಡಯ್ಯ ಅವರಿಗೆ ನೈತಿಕತೆ ಇಲ್ಲ. ಸಕಲೇಶಪುರದಲ್ಲಿ ಇಲ್ಲಸಲ್ಲದ ವಿಚಾರಗಳ ಮೂಲಕ ಸಮಾಜವನ್ನು ಒಡೆಯುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ಸಕಲೇಶಪುರದಲ್ಲಿ ಜನರು ಪ್ರೀತಿ, ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಆದರೆ ಈ ದೊಡ್ಡಯ್ಯ ಕೀಟಲೆ ಮಾಡಿ ಜಗಳವಾಡಿಸುವುದು ಇವರ ಚಾಳಿಯಾಗಿದೆ. ಒಂದು ಹಂತದಲ್ಲಿ ಅಟ್ರಾಸಿಟಿ ಕಾಯ್ದೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಗ್ರಾಮ ಪಂಚಾಯತಿ ಸದಸ್ಯ ದೇವರಾಜ್ ಮಾತನಾಡಿ, ಸ್ಟೀವನ್ ಪ್ರಕಾಶ್ ಗೆ ಮುರುಳಿ ಮೋಹನ್ ವಿರುದ್ದ ಮಾತನಾಡುವ ನೈತಿಕತೆ ಇಲ್ಲ, ದಲಿತರ ಪರ ಹೋರಾಟಗಾರ ಎಂದು ಹೇಳಿಕೊಂಡು ಕ್ರಿಶ್ಚಿಯನ್ ಸೇರಿಕೊಂಡು ಎರಡು ಕಡೆ ತೂಗಿಸಿಕೊಂಡು ಸಮುದಾಯಕ್ಕೆ ವಂಚನೆ ಮಾಡುತ್ತಿದ್ದಾರೆ. ಅಧಿಕಾರ ಇದ್ದಕಡೆ ಪಕ್ಷ ಬದಲಾಯಿಸುವ ಸ್ಟೀವನ್ ಪ್ರಕಾಶ್ ಈ ಹಿಂದೆ ಬಿಎಸ್ಪಿ ಪಕ್ಷದ ಪರವಾಗಿ ಹೋರಾಟ ಮಾಡಿ ಇದೀಗ ಬಿಜೆಪಿ ಸೇರಿಸಿಕೊಂಡು ಸಮುದಾಯದ ವಿರುದ್ಧದ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ದಲಿತರಿಗೆ ಅನ್ಯಾಯ ಅದಾಗ ಹೋರಾಟಕ್ಕೆ ಬಾರದ ಸ್ಟೀವನ್ ಪ್ರಕಾಶ್ ಕೇವಲ ಸಮುದಾಯದ ಹೆಸರು ಹೇಳಿಕೊಂಡು ಸಮುದಾಯಕ್ಕೆ ವಂಚನೆ ಮಾಡುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಣ್ಣಪ್ಪ, ಕುಮಾರಯ್ಯ, ಚಂದ್ರು, ಅನಿಲ್ ಇತರರು ಉಪಸ್ಥಿತರಿದ್ದರು.ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಸಕಲೇಶಪುರ ತಾಲೂಕಿನ ಎಸ್ಸಿ, ಎಸ್ಟಿ ಘಟಕದ ಅಧ್ಯಕ್ಷ ಕಲ್ಗಣೆ ಪ್ರಶಾಂತ್ ಮಾತನಾಡಿದರು. ಅಣ್ಣಪ್ಪ, ಕುಮಾರಯ್ಯ, ಚಂದ್ರು, ಅನಿಲ್ ಇತರರಿದ್ದರು.