ಸಾರಾಂಶ
ಚಿಕ್ಕಮಗಳೂರುಬದುಕನ್ನು ದುರಸ್ತಗೊಳಿಸುವ ನಶಯುಕ್ತ ಪದಾರ್ಥಗಳಿಂದ ಯುವ ಜನತೆ ಅಂತರ ಕಾಯ್ದುಕೊಳ್ಳಬೇಕು. ಭವಿಷ್ಯದಲ್ಲಿ ನಿಗದಿತ ಗುರಿ ತಲುಪಲು ಆರೋಗ್ಯದಿಂದ ಜೀವಿಸುವುದು ಅತ್ಯಗತ್ಯ ಎಂದು ಶ್ರೀ ಶಕ್ತಿ ಅಸೋಸಿಯೇಷನ್ ಯೋಜನಾ ನಿರ್ದೇಶಕ ಡಾ. ಅನೀತ್‌ಕುಮಾರ್ ಹೇಳಿದರು.
ಮಾದಕ ವ್ಯಸನದ ಬಗ್ಗೆ ಅರಿವು ಮೂಡಿಸುವ ಬೈಕ್ ಜಾಥಾ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಬದುಕನ್ನು ದುರಸ್ತಗೊಳಿಸುವ ನಶಯುಕ್ತ ಪದಾರ್ಥಗಳಿಂದ ಯುವ ಜನತೆ ಅಂತರ ಕಾಯ್ದುಕೊಳ್ಳಬೇಕು. ಭವಿಷ್ಯದಲ್ಲಿ ನಿಗದಿತ ಗುರಿ ತಲುಪಲು ಆರೋಗ್ಯದಿಂದ ಜೀವಿಸುವುದು ಅತ್ಯಗತ್ಯ ಎಂದು ಶ್ರೀ ಶಕ್ತಿ ಅಸೋಸಿಯೇಷನ್ ಯೋಜನಾ ನಿರ್ದೇಶಕ ಡಾ. ಅನೀತ್‌ಕುಮಾರ್ ಹೇಳಿದರು.ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಬುಧವಾರ ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಶ್ರೀ ಶಕ್ತಿ ಅಸೋಸಿಯೇಷನ್, ಶ್ರೀ ಶಕ್ತಿ ಮದ್ಯಪಾನ ಸೇವನಿಗಳ ಸಮಗ್ರ ಪುನರ್ವ ಸತಿ ಕೇಂದ್ರ ಹಾಗೂ ಪ್ರಜಾಪಿತ ಬ್ರಹ್ಮಕುಮಾರೀಸ್ ಸಹಯೋಗದಲ್ಲಿ ನಡೆದ ಮಾದಕ ವ್ಯಸನದ ಬಗ್ಗೆ ಅರಿವು ಮೂಡಿಸುವ ಬೈಕ್ ಜಾಥಾದಲ್ಲಿ ಪಾಲ್ಗೊಂಡು ಮಾತನಾಡಿದರು.ಕೇಂದ್ರ ಸರ್ಕಾರ ನಶಮುಕ್ತ ಭಾರತ ಅಭಿಯಾನದ ಯೋಜನೆಯು 5 ವರ್ಷವನ್ನು ಪೂರೈಸಿದ್ದು, ಪ್ರಧಾನ ಮಂತ್ರಿಗಳ ನೇತೃತ್ವದಲ್ಲಿ ಹಲವು ಕಾರ್ಯಕ್ರಮಗಳನ್ನು ಜಿಲ್ಲೆಯ ಶಾಲಾ ಕಾಲೇಜು, ಸರ್ಕಾರಿ ಕಚೇ ರಿ, ಸಾರ್ವಜನಿಕ ಸ್ಥಳ ಹಾಗೂ ರಂಗೋಲಿ, ಚಿತ್ರಕಲೆ ಸ್ಪರ್ಧೆ, ಜಾಥಾವನ್ನು ಹಮ್ಮಿಕೊಳ್ಳುವ ಮೂಲಕ ಜಾ ಗೃತಿ ಮೂಡಿಸಲಾಗುತ್ತಿದೆ ಎಂದರು.ಮಾದಕ ವಸ್ತು, ನಶೆ ಪದಾರ್ಥಗಳು ಮನುಷ್ಯನನ್ನು ಅತ್ಯಾಚಾರ, ಕಳ್ಳಸಾಗಾಣೆ ಹಾಗೂ ಕಾನೂನು ಬಾಹಿರ ಪ್ರಕರಣಗಳಲ್ಲಿ ಸಿಲುಕುವಂತೆ ಮಾಡುತ್ತದೆ. ಇದನ್ನು ಬೇರುಸಮೇತ ಕಿತ್ತೆಸೆಯಲು ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಜನರಲ್ಲಿ ಅರಿವು ಮೂಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.ಕುಡಿತ, ಧೂಮಪಾನ, ತಂಬಾಕು ಸೇವನೆಯಿಂದ ಮನುಷ್ಯ ಹಣ ಕಳೆದುಕೊಂಡಂತೆ, ಆರೋಗ್ಯಪೂರ್ಣ ಶರೀರವನ್ನು ಕಳೆದುಕೊಳ್ಳುವ ಸಂಭವವಿದೆ. ಆ ನಿಟ್ಟಿನಲ್ಲಿ ವ್ಯಸನಿಗಳ ಸಹವಾಸ ಬಿಟ್ಟು, ಸಜ್ಜನರ ಸ್ನೇಹತ್ವ ಬಯಸಬೇಕು. ಅಲ್ಲದೇ ಸಮಾಜವನ್ನು ದುಶ್ಚಟಗಳಿಂದ ದೂರವಾಗಿಸಲು ಸ್ವಯಂ ಪ್ರೇರಿತರಾಗಿ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.ತಾಲ್ಲೂಕು ವಿವಿದೋದ್ದೇಶ ಕಾರ್ಯಕರ್ತ ಮೋಹನ್ ಮಾತನಾಡಿ, ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸೇವನೆ ತಡೆಗಟ್ಟುವ ಕುರಿತು ವಿಕಲಚೇತನರಿಂದ ಬೈಕ್ ಜಾಥಾವನ್ನು ಜಿಲ್ಲಾ ಅಂಗವಿಕಲ ಪುನರ್ವಸತಿ ಕೇಂದ್ರ ದಿಂದ ಆಜಾದ್ ಪಾರ್ಕ್‌ದವರೆಗೆ ಆಯೋಜಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಪ್ರಯತ್ನಿಸಲಾಗಿದ್ದು, ಈ ಅಭಿಯಾನದಲ್ಲಿ ಯಶಸ್ಸನ್ನು ಕಾಣುತ್ತೇವೆ ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಶ್ರೀ ಶಕ್ತಿ ಅಸೋಸಿಯೇಷನ್ ವ್ಯವಸ್ಥಾಪಕ ಮಂಜುನಾಥ್, ಪ್ರಜಾಪಿತ ಬ್ರಹ್ಮ ಕುಮಾರೀಸ್ ಸಂಸ್ಥೆ ಸದಸ್ಯೆ ಮಹಾಲಕ್ಷ್ಮೀ ಹಾಗೂ ವಿಕಲಚೇತನರು ಪಾಲ್ಗೊಂಡಿದ್ದರು. 29 ಕೆಸಿಕೆಎಂ 2ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ ಬುಧವಾರ ಮಾದಕ ವ್ಯಸನದ ಬಗ್ಗೆ ಅರಿವು ಮೂಡಿಸುವ ಬೈಕ್ ಜಾಥಾ ನಡೆಯಿತು.;Resize=(128,128))
;Resize=(128,128))