ಯೋಗದಲ್ಲಿ ನಿರತನಾದರೆ ರೋಗಗಳಿಂದ ದೂರ

| Published : Dec 27 2024, 12:45 AM IST

ಸಾರಾಂಶ

ಚಳ್ಳಕೆರೆ: ಪತಂಜಲಿ ಯೋಗಶಿಕ್ಷಣ ಸಮಿತಿ ಪತಂಜಲಿ ಯೋಗ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಸಹಯೋಗದೊಂದಿಗೆ ನಗರದ ಪತಂಜಲಿ ಯೋಗ ಶಿಕ್ಷಣ ಕೇಂದ್ರದಿಂದ ಜಿಲ್ಲಾ ಮಟ್ಟದ ಯೋಗ ಶಿಕ್ಷಕರ ಕಾರ್ಯಗಾರ ಹಾಗೂ ಅಗ್ನಿಹೋತ್ರ ಕಾರ್ಯಗಾರವನ್ನು ವಿಶ್ವಕರ್ಮ ಕಲ್ಯಾಣಮಂಟಪದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಚಳ್ಳಕೆರೆ: ಪತಂಜಲಿ ಯೋಗಶಿಕ್ಷಣ ಸಮಿತಿ ಪತಂಜಲಿ ಯೋಗ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಸಹಯೋಗದೊಂದಿಗೆ ನಗರದ ಪತಂಜಲಿ ಯೋಗ ಶಿಕ್ಷಣ ಕೇಂದ್ರದಿಂದ ಜಿಲ್ಲಾ ಮಟ್ಟದ ಯೋಗ ಶಿಕ್ಷಕರ ಕಾರ್ಯಗಾರ ಹಾಗೂ ಅಗ್ನಿಹೋತ್ರ ಕಾರ್ಯಗಾರವನ್ನು ವಿಶ್ವಕರ್ಮ ಕಲ್ಯಾಣಮಂಟಪದಲ್ಲಿ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಸಂಚಾಲಕ ಉಮೇಶ್ ಮಾತನಾಡಿ, ಯೋಗದ ಇತಿಹಾಸವನ್ನು ಅವಲೋಕಿಸಿದಾಗ ಇಂತಹ ಸುಧೀರ್ಘವಾದ ಆರೋಗ್ಯವನ್ನು ಸಂರಕ್ಷಣೆ ಮಾಡಿಕೊಳ್ಳುವ ಪದ್ದತಿ ಮತ್ತೊಂದಿಲ್ಲ. ಪ್ರತಿನಿತ್ಯ ಎರಡು ಹೊತ್ತು ಯೋಗದಲ್ಲಿ ನಿರತನಾದರೆ ಯಾವುದೇ ರೋಗಗಳಿಂದ ದೂರವಿರಬಹುದು. ಅನಾರೋಗ್ಯ ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ. ಸಾಮಾನ್ಯವಾಗಿ ಯೋಗದಲ್ಲಿ ನಿರತರಾದವರು ಮಿತವ್ಯಯ ಆಹಾರ ಸೇವನೆ ಮತ್ತು ಪರಿಶ್ರಮದ ಬದುಕು ರೂಪಿಸಿಕೊಂಡಿರುತ್ತಾರೆ. ನಿತ್ಯ ಯೋಗದಿಂದ ಶರೀರದಲ್ಲಿರುವ ಎಲ್ಲಾ ಆಲಸ್ಯ ದೂರವಾಗಿ ಕ್ರಿಯಾಶೀಲತೆ ಉಂಟಾಗುತ್ತದೆ. ಯೋಗ ಶಿಕ್ಷಕ ಬಂಧುಗಳು ಯೋಗವನ್ನು ಕಲಿಸುವ ಸಂದರ್ಭದಲ್ಲಿ ಎಲ್ಲಾ ರೀತಿಯ ಯೋಗಾಸನಗಳನ್ನು ತಪ್ಪದೆ ಅಭ್ಯಾಸ ಮಾಡಿಸಿಬೇಕು ಎಂದರು. ಕಾರ್ಯಕ್ರಮದಲ್ಲಿ ಹಿರಿಯೂರು ಸಂಚಾಲಕ ಚಂದ್ರಕಾಂತ್, ಹೊಸದುರ್ಗ ಸಂಚಾಲಕ ರವಿಚಂದ್ರನ್, ಚಿತ್ರದುರ್ಗ ಸಂಚಾಲಕ ರಾಮಲಿಂಗಪ್ಪ, ವಲಯ ಶಿಕ್ಷಣ ಪ್ರಮುಖ ಆರ್.ಮನೋಹರ, ಚಳ್ಳಕೆರೆ ಸಂಚಾಲಕ ಚಂದ್ರಶೇಖರ್‌ಚಾರ್, ಮಹೇಶ್, ಕೇಶವಚಾರ್, ಸಿ.ಈ.ಪ್ರಸನ್ನ, ಎಸ್.ಶ್ರೀಧರಚಾರ್ ಮುಂತಾದವರು ಶಿಬಿರದಲ್ಲಿ ಪಾಲ್ಗೊಂಡಿದ್ದರು.