ಸಾರಾಂಶ
ಜಪಾನ್‌ನ ಸುಮಿಟಾವೊ ಕಂಪನಿ ಜತೆಗೆ ಕೊಪ್ಪಳದಿಂದ 10 ಕಿಮೀ ದೂರದ ಗಿಣಿಗೇರಿ, ಕನಕಾಪುರ ಗ್ರಾಮದಲ್ಲಿ ₹ 2,345 ಕೋಟಿ ಹೂಡಿಕೆ ಮಾಡಿ 7 ಲಕ್ಷ ಎಂಟಿಪಿಎ ಉಕ್ಕು ತಯಾರಿಕಾ ಘಟಕ ಸ್ಥಾಪಿಸಲು ಸರ್ಕಾರ ಮುಂದಾಗಿದೆ.
ಕೊಪ್ಪಳ:
ತಾಲೂಕಿನ ಕನಕಾಪುರ ಬಳಿ ಮತ್ತೊಂದು ಸ್ಟೀಲ್ ಕಾರ್ಖಾನೆ ಸ್ಥಾಪಿಸುವುದಕ್ಕೆ ಅನುಮತಿ ನೀಡಲಾಗಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೇಳಿರುವುದನ್ನು ಖಂಡಿಸಿ ನಗರದ ಅಶೋಕ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ವೇದಿಕೆಯಿಂದ ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಿರಸ್ತೇದಾರ್ ಮಹಾವೀರ ಅಳ್ಳಳ್ಳಿ ಮೂಲಕ ಮನವಿ ಸಲ್ಲಿಸಲಾಯಿತು.
ಹಲವು ದಿನಗಳಿಂದ ಸಾರ್ವಜನಿಕರು ಕಾರ್ಖಾನೆಗಳ ಕೇಂದ್ರೀಕರಣ ಹಾಗೂ ಕಾರ್ಖಾನೆಗಳ ವಿಸ್ತೀರ್ಣ ವಿರೋಧಿಸಿ ನಿರಂತರ ಹೋರಾಟ ಮಾಡುತ್ತಿದ್ದಾರೆ. ಈ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಶಾಸಕ ರಾಘವೇಂದ್ರ ಹಿಟ್ನಾಳ ಅವರೊಂದಿಗೆ ಹೋರಾಟಗಾರರ ನಿಯೋಗ ಮುಖ್ಯಮಂತ್ರಿ ಭೇಟಿ ಮಾಡಿದಾಗ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ ಸಿಎಂ ಬಲ್ಡೋಟಾ ಬಿಎಸ್‌ಪಿಎಲ್ ವಿಸ್ತರಣೆ ತಡೆದಿದ್ದಾರೆ. ಈ ನಿರ್ಣಯವನ್ನು ಸ್ವಾಗತಿಸಿದ್ದರು. ಆದರೆ, ಇದೀಗ ಜಪಾನ್‌ನಲ್ಲಿ ಕುಳಿತು ಸುಮಿಟಾವೊ ಕಂಪನಿ ಜತೆಗೆ ಕೊಪ್ಪಳದಿಂದ 10 ಕಿಮೀ ದೂರದ ಗಿಣಿಗೇರಿ, ಕನಕಾಪುರ ಗ್ರಾಮದಲ್ಲಿ ₹ 2,345 ಕೋಟಿ ಹೂಡಿಕೆ ಮಾಡಿ 7 ಲಕ್ಷ ಎಂಟಿಪಿಎ ಉಕ್ಕು ತಯಾರಿಕಾ ಘಟಕ ಸ್ಥಾಪಿಸಲು ಸರ್ಕಾರ ಮುಂದಾಗಿದೆ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ. ಈ ಕೂಡಲೇ ಇದನ್ನು ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ.ಕೊಪ್ಪಳ ಬಳಿ ಈಗಾಗಲೇ ಇರುವ ಕಾರ್ಖಾನೆಗಳಿಂದ ಸಾಕಷ್ಟು ತೊಂದರೆಯಾಗಿವೆ. ಮತ್ತೆ ಹೊಸದಾಗಿ ಯಾವ ಕಾರ್ಖಾನೆಯೂ ಬೇಡ, ವಿಸ್ತರಣೆಯೂ ಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ವೇಳೆ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟದೂರು, ಬಸವರಾಜ ಶೀಲವಂತರ, ಕೆ.ಬಿ. ಗೋನಾಳ, ಮೂಕಪ್ಪ ಮೇಸ್ತ್ರಿ ಬಸಾಪುರ, ಎಸ್.ಎ. ಗಫಾರ್, ಡಿ.ಎಂ. ಬಡಿಗೇರ, ಚನ್ನಬಸಪ್ಪ ಅಪ್ಪಣ್ಣವರ, ಹಂಚಾಳಪ್ಪ ಇಟಗಿ, ಮುದುಕಪ್ಪ ಎಂ. ಹೊಸಮನಿ, ಬಂದೇನವಾಜ್ ಮನಿಯಾರ, ಮಖಬೂಲ್ ರಾಯಚೂರು, ಶಿವಪ್ಪ ಹಡಪದ, ವಿನಾಯಕ ಕರಡಿ, ಮಹಾಂತೇಶ ಕೊತಬಾಳ, ಗಾಳೆಪ್ಪ ಮುಂಗೋಲಿ, ಹನುಮಂತಪ್ಪ ಚಿಂಚಲಿ, ರಾಮಲಿಂಗಯ್ಯ ಶಾಸ್ತ್ರಿಮಠ, ಜಾಫರ್ ತಟ್ಟಿ, ಯಮನೂರಪ್ಪ ಹಾಲಳ್ಳಿ ಬಸಾಪುರ, ಗವಿಸಿದ್ದಪ್ಪ ಹಲಗಿ ಕುಣಿಕೇರಿ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))