ಸಾರಾಂಶ
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಶ್ರೀ ಕ್ಷೇತ್ರ ಮುದುಗಾನಕುಂಟೆಯ ಭಕ್ತಾಧಿಗಳಿಗೆ ಮೂಲಸೌಕರ್ಯ ಕಲ್ಪಿಸಲು ಹಾಗೂ ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಎಲ್ಲ ರೀತಿಯಲ್ಲೂ ಪ್ರಯತ್ನಿಸುತ್ತಿರುವುದಾಗಿ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ತಿಳಿಸಿದರು.ತಾಲೂಕಿನ ಪುರಾಣ ಪ್ರಸಿದ್ದಿ ಹೊಂದಿರುವ ಶ್ರೀ ಕ್ಷೇತ್ರ ಗಂಗಾಭಾಗೀರಥ ಮುದುಗಾನಕುಂಟೆ ಸನ್ನಿಧಾನಕ್ಕೆ ಆಗಮಿಸುವ ಮಹಿಳಾ ಭಕ್ತಾಧಿಗಳು ಸ್ನಾನದ ನಂತರ ವಸ್ತ್ರಬದಲಾವಣೆಗೆ ಅನುಕೂಲವಾಗಲೆಂದು 50 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗುವ ಸ್ನಾನಗೃಹಗಳ ಕಾಮಗಾರಿಗೆ ಶಂಕುಸ್ಥಾಪನೆ ನೆರೆವೇರಿಸಿ ಮಾತನಾಡಿದರು.ರಸ್ತೆ ಅಭಿವೃದ್ಧಿಗೆ ಅನುದಾನಶ್ರೀ ಕ್ಷೇತ್ರಕ್ಕೆ ಪ್ರತಿ ಸೋಮವಾರ ನಮ್ಮ ರಾಜ್ಯ ಮತ್ತು ಹೊರ ರಾಜ್ಯದ ವಿವಿಧ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಬಂದು ಶ್ರೀಗಂಗಮ್ಮ ತಾಯಿಯ ದರ್ಶನ ಪಡೆಯುತ್ತಾರೆ, ಸ್ಥಳೀಯ ಗ್ರಾಮಸ್ಥರು ಹಾಗೂ ನಮ್ಮ ಕಾರ್ಯಕರ್ತರ ಕೋರಿಕೆ ಮೇರೆಗೆ ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಇದೀಗ 50ಲಕ್ಷ ರೂಪಾಯಿಗಳ ಕಾಮಗಾರಿಗೆ ಚಾಲನೆಯನ್ನು ನೀಡಲಾಗಿದೆ. ಇದರ ಜೊತೆಗೆ ಕ್ಷೇತ್ರದ ಗಂಗಮ್ಮ ಕಲ್ಯಾಣಿಗೆ ಹೋಗುವ ರಸ್ತೆಗೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿಯಲ್ಲಿ ಸುಮಾರು 50ಲಕ್ಷ ರೂಪಾಯಿಗಳ ವೆಚ್ಚದಲ್ಲಿ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು.
ಕಾಂಪೌಂಡ್ ನಿರ್ಮಿಸಲು ಮನವಿಇದೇ ಸಂಧರ್ಭದಲ್ಲಿ ಮುದುಗಾನಕುಂಟೆ ಅಭಿವೃದ್ಧಿ ಮಂಡಲಿಯ ಅಧ್ಯಕ್ಷ ನರಸಿಂಹರೆಡ್ಡಿ ಶಾಸಕರಿಗೆ ಮನವಿ ಪತ್ರವನ್ನು ಸಲ್ಲಿಸಿ ಶ್ರೀ ಕ್ಷೇತ್ರದ ಪರದಿಗೆ ಕಾಂಪೌಂಡ್ ನಿರ್ಮಿಸಿಕೊಡಬೇಕೆಂದು ಮನವಿ ಸಲ್ಲಿಸಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಶಾಸಕರು ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ಅಭಿವೃದ್ದಿ ಕೆಲಸ ಕಾರ್ಯಗಳಿಗೆ ಎಲ್ಲರೂ ಕೈ ಜೋಡಿಸುವುದರ ಜೊತೆಯಲ್ಲಿ ಗುಣಮಟ್ಟದ ಕಾಮಗಾರಿಗಳು ನಡೆಯುವಂತೆ ನೋಡಿಕೊಳ್ಳಬೇಕು ಎಂದರು.ಕಾರ್ಯಕ್ರಮದಲ್ಲಿ ಮುಖಂಡರಾದ ಲಕ್ಷ್ಮೀನಾರಾಯಣ್ ಪಟೇಲ್, ಸದಾಶಿವಪ್ಪ, ಸಿದ್ದಪ್ಪ ,ಸಾಗಾನಹಳ್ಳಿ ಶಿವಕುಮಾರ್,ವೆಂಕಟೇಶ್, ಜಿಸಿ ಅಶೋಕ್, ಮಹೇಶ್, ಹನುಮಂತರಾಯಪ್ಪ,ನಾಗಭೂಷಣ್ ರೆಡ್ಡಿ,,ರಘು,ನಾಗೇಶ್,ಮೈಲಾರಪ್ಪ,ಲಂಕಪ್ಪ,ರಾಮಲಿಂಗಯ್ಯ, ಹನುಮಂತ,ಮೂರ್ತಿ,ಜಭಿ,ಎಇಇ ನಾರಾಯಣಸ್ವಾಮಿ,ಕಂದಾಯ ನಿರೀಕ್ಷಕ ಖಾದರ್,ಜೆಇ ವೆಂಕಟರಮಣಪ್ಪ,ಪಿಡಿಓ ರೂಪಾ ಶ್ರೀ ಕ್ಷೇತ್ರದ ಪಾರಪತ್ತೇದಾರ ಕಿರಣ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.