ಸಾರಾಂಶ
ಕನ್ನಡಪ್ರಭ ವಾರ್ತೆ ಪಾವಗಡ
ಪಾವಗಡ ಪಟ್ಟಣ ಹಾಗೂ ತಾಲೂಕಿನ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದ್ದು ಯಾವುದೇ ಕುಟುಂಬ ಬಡ ಸಹ ಸರ್ಕಾರಿ ಯೋಜನೆಯಿಂದ ವಂಚಿತವಾಗದಂತೆ ಕಾಳಜಿ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕ ಹಾಗೂ ತುಮುಲ್ ಅಧ್ಯಕ್ಷ ಎಚ್.ವಿ.ವೆಂಕಟೇಶ್ ಹೇಳಿದರು.ಶುಕ್ರವಾರ ಪಟ್ಟಣದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತಾಲೂಕಿನ ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಕ ಪ್ರಗತಿ ಹಿನ್ನಲೆಯಲ್ಲಿ ಕೆಪಿಎಸ್ ಶಾಲೆ ಹಾಗೂ ಬಿಸಿಎಂ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಮಿಕ ಇಲಾಖೆಯ ವಸತಿ ಶಾಲೆ ನಿರ್ಮಿಸಲು ಮಂಜೂರಾತಿ ಕಲ್ಪಿಸಿಕೊಡಲಾಗಿದೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಪ್ರಗತಿ ಹಂತದಲ್ಲಿದ್ದು, ಸಂಬಂಧಪಟ್ಟ ಸಚಿವರನ್ನು ಕರೆಸಿ ಶೀಘ್ರದಲ್ಲಿ ಪಟ್ಟಣದ ಹೊರವಲಯದಲ್ಲಿನ ಬೈಪಾಸು ರಸ್ತೆ ಕಾಮಗಾರಿ ಪ್ರಗತಿಗೆ ಚಾಲನೆ ನೀಡಲಾಗುವುದು.ಮುಖ್ಯಮಂತ್ರಿ ನಿಧಿಯಲ್ಲಿ ವಿಶೇಷ ಅನುದಾನ ಬಿಡುಗಡೆಗೊಳಿಸಿದ್ದು ಈ ಸಂಬಂಧ ಈಗಾಗಲೇ ಪಟ್ಟಣದ 23ವಾರ್ಡ್‌ಗಳಿಗೆ ಭೇಟಿ ನೀಡಿ ಅಲ್ಲಿನ ಹೈಮಾಸ್ ಲೈಟ್, ಪಾರ್ಕ್ ಪ್ರಗತಿ ಸೇರಿದಂತೆ ವಾರ್ಡ್‌ಗಳಲ್ಲಿನ ಮೂಲ ಭೂತ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಲಾಗಿದೆ. ಈ ಸಂಬಂಧ ಕಾಮಗಾರಿ ಪ್ರಗತಿಗೆ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ ಎಂದರು.
ತಂದೆ ಮಾಜಿ ಸಚಿವ ವೆಂಕಟರಮಣಪ್ಪ ಪಟ್ಟಣದಲ್ಲಿ ಸುಸಜ್ಜಿತ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಿಸಿಲು ಶ್ರಮಿಸಿದ್ದರು. ಇಷ್ಟು ದಿನ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇತ್ತು. ಈಗ ವೈದ್ಯರ ಕೊರತೆ ನಿವಾರಿಸಲಾಗಿದೆ. ಚುನಾವಣೆ ಪೂರ್ವ ಕೊಟ್ಟ ಭರವಸೆ ಈಡೇರಿಸುವ ಮೂಲಕ ಗ್ರಾಮೀಣ ಪ್ರದೇಶಗಳ ಮೂಲಭೂತ ಸಮಸ್ಯೆ ನಿವಾರಣೆಗೆ ಹೆಚ್ಚು ಒತ್ತು ನೀಡಿ ಕೆಲಸ ಮಾಡುವುದಾಗಿ ಹೇಳಿದರು. ತಾಲೂಕಿನ ಪ್ರಗತಿ ಹಾಗೂ ಸಾಧನೆಗಳ ಕುರಿತು ವಿವರಿಸಿದ ಬಳಿಕ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.ತಹಸೀಲ್ದಾರ್ ವರದರಾಜು ಸ್ವಾತಂತ್ರ್ಯ ದಿನಾಚರಣೆ ಕುರಿತು ಶುಭಾಶಯ ಕೋರಿದ ಬಳಿಕ ರಾಷ್ಟ್ರ ನಾಯಕರ ತ್ಯಾಗ ಬಲಿದಾನ ಮತ್ತು ತಾಲೂಕಿನ ಪ್ರಗತಿ ಕುರಿತು ವಿವರಿಸಿದರು. ಬಿಇಒ ರೇಣುಕಮ್ಮ , ಪುರಸಭೆ ಅಧ್ಯಕ್ಷ ಸುದೇಶ್ ಬಾಬು, ಉಪಾಧ್ಯಕ್ಷ ಮಾಲಿನ್‌ತಾಜ್, ತಾಪಂ ಇಒ ಬಿ.ಕೆ.ಉತ್ತಮ್, ಮುಖಂಡ ಎ.ಶಂಕರರೆಡ್ಡಿ, ಪುರಸಭೆ ಸದಸ್ಯರಾದ ತೆಂಗಿನಕಾಯಿ ರವಿ,ಆರ್.ಎ. ಹನುಮಂತರಾಯಪ್ಪ, ರೈತ ಸಂಘದ ಜಿಲ್ಲಾಧ್ಯಕ್ಷ ಪೂಜಾರಪ್ಪ, ರೈತ ಸಂಘದ ತಾಲೂಕು ಅಧ್ಯಕ್ಷ ನರಸಿಂಹರೆಡ್ಡಿ, ಬಿಆರ್‌ಸಿ ಜಿ.ವಿ.ವೆಂಕಟೇಶ್, ಇಸಿಒ ವೇಣುಗೋಪಾಲರೆಡ್ಡಿ ಹಾಗೂ ಇತರೆ ಸರ್ಕಾರಿ ಅಧಿಕಾರಿ,ಪುರಸಭೆ ಸದಸ್ಯರು ಉಪಸ್ಥಿತರಿದ್ದರು.