ಸಾರಾಂಶ
ಹಾವೇರಿ: ಸರ್ಕಾರಿ ಶಾಲೆಗಳಲ್ಲಿ ದಾಖಲಾತಿಯನ್ನು ಹೆಚ್ಚಿಸುವುದು ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ಪಾಟೀಲ ತಿಳಿಸಿದರು.ನಗರದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ನಂ. 2ರಲ್ಲಿ ಏರ್ಪಡಿಸಿದ್ದ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಆರ್‌ಟಿಇ ಕಾಯಿದೆ ಅಡಿಯಲ್ಲಿ ಉಚಿತ ಶಿಕ್ಷಣ, ಸರ್ಕಾರಿ ಶಾಲೆಗಳ 1ನೇ ತರಗತಿಯಿಂದ 10ನೇ ತರಗತಿಯವರೆಗಿನ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಏಕರೂಪ ಶಿಕ್ಷಣದ ಅವಕಾಶ ಕಲ್ಪಿಸಲು ಹಾಗೂ ಕುಟುಂಬಗಳ ಮೇಲೆ ಆರ್ಥಿಕಭಾರ ತಗ್ಗಿಸಲು ಉಚಿತ ಪಠ್ಯಪುಸ್ತಕಗಳನ್ನು ವಿತರಿಸಲಾಗುತ್ತಿದೆ. ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಿಸಲು, ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಾಯ ಮಾಡಲು ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 1ರಿಂದ 10ನೇ ತರಗತಿಯ ಮಕ್ಕಳಿಗೆ ಮಧ್ಯಾಹ್ನ ಉಚಿತ ಪೌಷ್ಟಿಕ ಆಹಾರ ಒದಗಿಸಲಾಗುತ್ತಿದೆ. ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಶಿಷ್ಯವೇತನ ನೀಡಲಾಗುತ್ತಿದೆ ಹಾಗೂ ಅಂಗವಿಕಲ ಮಕ್ಕಳಿಗೆ ಸಮನ್ವಯ ಶಿಕ್ಷಣ ಯೋಜನೆ ಮೂಲಕ ಮುಖ್ಯವಾಹಿನಿಗೆ ತರಲಾಗುತ್ತಿದೆ ಎಂದರು.ಮರು ಸಿಂಚನ ಕಾರ್ಯಕ್ರಮ ವಿದ್ಯಾರ್ಥಿಗಳ ಶಾಲಾ ಪಾಠಗಳನ್ನು ಅರ್ಥ ಮಾಡಿಕೊಳ್ಳದೆ ಹಿಂದುಳಿದಿದ್ದು, ನಿರೀಕ್ಷಿತ ಗುರಿ ತಲುಪಿಸಲು ರೂಪಿಸಿರುವ ಪೂರಕ ಶಿಕ್ಷಣ ಕಾರ್ಯಕ್ರಮವಾಗಿದೆ. ಆದರ್ಶ, ಶಾಲೆಗಳು, ಕಸ್ತೂರಿ ಬಾ ಶಾಲೆಗಳು ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳ ಮೂಲಕ ಉತ್ತಮ ಶಿಕ್ಷಣ ನೀಡಲಾಗುತ್ತಿದೆ ಎಂದರು.
ಡಯಟ್ ಉಪ ಪ್ರಾಚಾರ್ಯ ಝಡ್.ಎಂ. ಖಾಜಿ ಮಾತನಾಡಿ, ಇನ್ಸ್ಪೈರ್ ಅವಾರ್ಡ್ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ನಡೆಸಲಾಗುವ ವಿಜ್ಞಾನ ಪ್ರತಿಭೆಗಳ ಅಭಿವೃದ್ಧಿಗಾಗಿ ರೂಪಿಸಲಾದ ರಾಷ್ಟ್ರೀಯ ಮಟ್ಟದ ಯೋಜನೆಯಾಗಿದ್ದು, ಶಾಲಾ ಮಕ್ಕಳಲ್ಲಿ ವೈಜ್ಞಾನಿಕ ಯೋಚನೆ, ನಾವೀನ್ಯತೆ ಮತ್ತು ಸಂಶೋಧನಾ ಚಟುವಟಿಕೆ ಉತ್ತೇಜನ ಮಾಡುವ ಉದ್ದೇಶ ಹೊಂದಿದೆ. ಪ್ರತಿ ಮಗುವಿಗೂ ತಾಯಿ ಮುಖ್ಯ ಪಾತ್ರವನ್ನು ವಹಿಸುತ್ತಾಳೆ. ತನ್ನ ಮಗುವಿಗೆ ಯಾವ ರೀತಿಯಾಗಿ ಪ್ರೋತ್ಸಾಹಿಸಬಹುದು ಎಂದು ಉದಾಹರಣೆಗಳೊಂದಿಗೆ ವಿವರಿಸಿದರು.ಜ್ಞಾನದೀಪ್ತಿ ಅಂದರೆ ಎಲ್ಲ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸುವುದಾಗಿದೆ. ಜ್ಞಾನಸುಧಾ ಕಾರ್ಯಕ್ರಮದಲ್ಲಿ ಆಯ್ದ 100 ಶಾಲೆಗಳಿಗೆ ತಲಾ 10 ಕಂಪ್ಯೂಟರ್ ನೀಡಲಾಗುತ್ತಿದೆ ಎಂದರು.ಶಿಕ್ಷಣಪ್ರೇಮಿ ನಿಜಲಿಂಗಣ್ಣ ಬಸಗಣ್ಣಿ ಮಾತನಾಡಿ, ಮಕ್ಕಳ ಸರ್ವಾಂಗೀಣ ಬೆಳವಣಿಗೆ ಆಗಬೇಕಾದರೆ ಪೋಷಕರು ಶಾಲೆಗೆ ಬಂದು ತಮ್ಮ ಮಕ್ಕಳ ಕಲಿಕೆ ಹೇಗಿದೆ ಎಂದು ಖುದ್ದಾಗಿ ತಿಳಿದಾಗ ಮಾತ್ರ ಕಲಿಕೆ ಸಾಧ್ಯ. ಜತೆಗೆ ಶಿಕ್ಷಕರು ಕಾಳಜಿಯಿಂದ ಮಕ್ಕಳ ಶಿಕ್ಷಣ ನೀಡಬೇಕು ಎಂದರು.ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷೆ ಕವಿತಾ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣಾಧಿಕಾರಿಗಳ ಸಂಘದ ಜಿಲ್ಲಾ ಕಾರ್ಯದರ್ಶಿ ಬಿ.ಎಂ. ಬೇವಿನಮರದ, ಝಡ್.ಎಂ. ಖಾಜಿ, ರಮೇಶ ಪೂಜಾರ, ರೇಖಾ ತೋಟಗೇರ, ವಿವಿಧ ಇಲಾಖೆ ಅಧಿಕಾರಿಗಳು, ಹಳೆ ವಿದ್ಯಾರ್ಥಿಗಳ ಸಂಘದವರು, ಶಿಕ್ಷಕರು, ಸಿಆರ್‌ಪಿ, ಪೋಷಕರು ಇತರರು ಇದ್ದರು. ಶಿಲ್ಪ ಉಜ್ಜಮ್ಮನವರ ನಿರೂಪಿಸಿದರು. ಎಂ.ಡಿ. ಮಾದರ ಸ್ವಾಗತಿಸಿದರು. Steps to increase enrolment of children in government schools: BEO M.H. Patilಹಾವೇರಿ ಸುದ್ದಿ, ಬಿಇಒ ಎಂ.ಎಚ್. ಪಾಟೀಲ, ಸರ್ಕಾರಿ ಶಾಲೆಮರು ಸಿಂಚನ ಕಾರ್ಯಕ್ರಮ ವಿದ್ಯಾರ್ಥಿಗಳ ಶಾಲಾ ಪಾಠಗಳನ್ನು ಅರ್ಥ ಮಾಡಿಕೊಳ್ಳದೆ ಹಿಂದುಳಿದಿದ್ದು, ನಿರೀಕ್ಷಿತ ಗುರಿ ತಲುಪಿಸಲು ರೂಪಿಸಿರುವ ಪೂರಕ ಶಿಕ್ಷಣ ಕಾರ್ಯಕ್ರಮವಾಗಿದೆ.