ಗಮನ ಸೆಳೆದ ಕಲ್ಲು ಎತ್ತುವ ಸ್ಪರ್ಧೆ

| Published : Apr 14 2024, 01:52 AM IST

ಸಾರಾಂಶ

ಕಲಾದಗಿ: ಶಾರದಾಳ ಗ್ರಾಮದಲ್ಲಿ ಲಿಂ.ಶ್ರೀ ಯಲ್ಲಾಲಿಂಗೇಶ್ವರ ಪ್ರಭು ಮಹಾರಾಜರ ೨೭ನೇ ಜಾತ್ರಾಮಹೋತ್ಸ ನಿಮಿತ್ತ ಸಂಗ್ರಾಮ ಕಲ್ಲು ಎತ್ತುವ ಸ್ಪರ್ಧೆ ಯಶಸ್ವಿಯಾಗಿ ಜರುಗಿತು. ಸ್ಫರ್ಧೆಯಲ್ಲಿ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆ ಹಾಗು ಮಹಾರಾಷ್ಟ್ರ, ಆಂಧ್ರಪ್ರದೇಶ, ಉತ್ತರ ಪ್ರದೇಶದ ಪೈಲ್ವಾನರು ಭಾಗವಹಿಸಿದ್ದರು.

ಕಲಾದಗಿ: ಶಾರದಾಳ ಗ್ರಾಮದಲ್ಲಿ ಲಿಂ.ಶ್ರೀ ಯಲ್ಲಾಲಿಂಗೇಶ್ವರ ಪ್ರಭು ಮಹಾರಾಜರ ೨೭ನೇ ಜಾತ್ರಾಮಹೋತ್ಸ ನಿಮಿತ್ತ ಸಂಗ್ರಾಮ ಕಲ್ಲು ಎತ್ತುವ ಸ್ಪರ್ಧೆ ಯಶಸ್ವಿಯಾಗಿ ಜರುಗಿತು. ಸ್ಫರ್ಧೆಯಲ್ಲಿ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆ ಹಾಗು ಮಹಾರಾಷ್ಟ್ರ, ಆಂಧ್ರಪ್ರದೇಶ, ಉತ್ತರ ಪ್ರದೇಶದ ಪೈಲ್ವಾನರು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಮಹಾಷ್ಟ್ರದ ಜತ್ತ ತಾಲೂಕಿನ ತುರ್ಕ ಆಸಂಗಿಯ ಗ್ರಾಮದ ಅಬ್ಜಲಖಾನ್ ಪಡೆದರು. ದ್ವಿತೀಯ ಬಹುಮಾನ ಬನಹಟ್ಟಿಯ ಮುತ್ತು ಬನಹಟ್ಟಿ, ತೃತೀಯ ಬಹುಮಾನ ಬಿಸನಾಳದ ರಿಯಾಜ್ ಜಮಾದಾರ ಪಡೆದರು. ಚತುರ್ಥ ಬಹುಮಾನ ಬೀಳಗಿಯ ಸಂಗಪ್ಪ ಬೀಳಗಿ ತಮ್ಮದಾಗಿಸಿಕೊಂಡರು.

ಉತ್ತರ ಪ್ರದೇಶದ ಬೆರಾಯಿಚಿರಾ ಪೈಲ್ವಾನನ ದೇಹದಾಡ್ಯ ಶಕ್ತಿ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ೧೨೩ ಕೆಜಿ ತೂಕದ ಕಲ್ಲನ್ನು ಎತ್ತುವುದರ ಮೂಲಕ ಶಕ್ತಿಪ್ರದರ್ಶನ ತೋರಿದ ಈ ಪೈಲವಾನ ಸೇರಿದ್ದ ಜನಸಮೂಹ ತನ್ನತ್ತ ಗಮನ ಸೆಳೆವಂತೆ ಮಾಡಿದನು.