ಸಾರಾಂಶ
ಮಹಾರಾಜ ಕಾಲೇಜಿನ ಫುಟ್ಬಾಲ್ ಮೈದಾನದಲ್ಲಿ ಮಧ್ಯಾಹ್ನ 3ರ ನಂತರ ಉದಯಗಿರಿ ಗಲಭೆ ವಿರೋಧಿ ಜನ ಜಾಗೃತಿ ಸಭೆ ಆರಂಭ
ಕನ್ನಡಪ್ರಭ ವಾರ್ತೆ ಮೈಸೂರು
ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣವನ್ನು ಖಂಡಿಸಿ ರಾಷ್ಟ್ರ ಸುರಕ್ಷಾ ಜನಾಂದೋಲನ ಸಮಿತಿಯವರು ಹೈಕೋರ್ಟ್ ಅನುಮತಿ ಮೇರೆಗೆ ಮೈಸೂರು ಚಲೋ ಪ್ರತಿಭಟನಾ ಮೆರವಣಿಗೆ ಕೈಬಿಟ್ಟು, ಪ್ರತಿಭಟನಾ ಸಭೆ ನಡೆಸಿದರು.ಮಹಾರಾಜ ಕಾಲೇಜಿನ ಫುಟ್ಬಾಲ್ ಮೈದಾನದಲ್ಲಿ ಮಧ್ಯಾಹ್ನ 3ರ ನಂತರ ಉದಯಗಿರಿ ಗಲಭೆ ವಿರೋಧಿ ಜನ ಜಾಗೃತಿ ಸಭೆ ಆರಂಭವಾಯಿತು. ಈ ಹೋರಾಟದಲ್ಲಿ ರಾಷ್ಟ್ರ ಸುರಕ್ಷಾ ಜನಾಂದೋಲನ ಸಮಿತಿಯವರು, ಬಿಜೆಪಿ ಮುಖಂಡರು, ಹಿಂದೂ ಕಾರ್ಯಕರ್ತರು ನೂರಾರು ಮಂದಿ ಪಾಲ್ಗೊಂಡಿದ್ದರು.ಈ ವೇಳೆ ರಾಷ್ಟ್ರ ಸುರಕ್ಷಾ ಜನಾಂದೋಲನ ಸಮಿತಿ ಸಂಚಾಲಕ ಕೆ.ಟಿ. ಉಲ್ಲಾಸ್ ಮಾತನಾಡಿ, ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟವನ್ನು ಸಾಮಾನ್ಯ ಮುಸ್ಲಿಂ ವ್ಯಕ್ತಿ ಮಾಡಿರುವ ಘಟನೆಯಲ್ಲ. ಈ ಘಟನೆಯ ಹಿಂದೆ ಯಾರದೋ ಕೈವಾಡ ಇದೆ. ಈ ಕಲ್ಲುಗಳು ಎಲ್ಲಿಂದ ಬಂತು ಹೇಗೆ ಬಂತು ಎಂದು ಪ್ರಶ್ನಿಸಿದರು.ಮಂಗಳೂರಿನಲ್ಲೂ ಇಂತಹದ್ದೇ ಘಟನೆ ನಡೆದಿತ್ತು. ಪೋಲೀಸರ ಮೇಲೆ ಹಲ್ಲೆ ಮಾಡಲಿಕ್ಕೆ ಮುಂದಾಗಿದ್ದರು. ಪಿಎಫ್ಐ ಸಂಘಟನೆಯ ಕಾರ್ಯಕರ್ತರೇ ಇದನ್ನು ಮಾಡಿರೋದು. ಮೈಸೂರಿನಲ್ಲೂ ಹಿಂದೂಗಳ ಮನೆ ಮೇಲೆ ಕಲ್ಲು ತೂರಾಟ ಮಾಡಿದರು. ಕ್ಯಾತಮಾರನಹಳ್ಳಿ ರಾಜು ಕೊಲೆಯಲ್ಲಿ ಭಾಗಿಯಾಗಿದ್ದ ಪಿಎಫ್ಐ ಆಕ್ಟಿವ್ ಆಗಿದೆ. ಪಿಎಫ್ಐ, ಎಸ್ ಡಿಪಿಐ ಕಾರ್ಯಕರ್ತರು ಅನೇಕ ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಿದ್ದಾರೆ. ಉದಯಗಿರಿ ಘಟನೆ ಭಯೋತ್ಪಾದಕ ಘಟನೆ.ಈ ಪ್ರಕರಣವನ್ನು ಎನ್ಐಎ ತನಿಖೆ ಮಾಡಿಸಬೇಕು. ಒಂದು ಸಮುದಾಯದ ಓಲೈಕೆಗಾಗಿ ಗೃಹ ಇಲಾಖೆಯನ್ನು ಬಿಟ್ಟು ಕೊಡುವ ಕೆಲಸ ಆಗಿದೆಎಂದು ಅವರು ವಾಗ್ದಾಳಿ ನಡೆಸಿದರು. ಆರೋಪಿಗಳನ್ನ ಬಂಧಿಸದಂತೆ ತಾಕೀತುಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಮಾಜಿ ಸಚಿವ ಎನ್. ಮಹೇಶ್ ಮಾತನಾಡಿ, ಉದಯಗಿರಿ ಪೊಲೀಸ್ ಠಾಣೆ ಘಟನೆಯಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದಾರೆ. ಘಟನೆ ಸಂಬಂಧ ಆರೋಪಿ ಸುರೇಶ್ ರನ್ನು ನಮ್ಮ ಕೈಗೆ ಕೊಡಿ ಎನ್ನುತ್ತಾರೆ.ನಾವೇನು ಭಾರತದ್ಲಲಿದ್ದೇವೋ? ಪಾಕಿಸ್ತಾನದಲ್ಲಿದ್ದೇವೋ? ಪೊಲೀಸ್ ಇಲಾಖೆಗೆ ಸಿದ್ದರಾಮಯ್ಯ, ಗೃಹ ಸಚಿವರು ಆರೋಪಿಗಳನ್ನು ಬಂಧಿಸಬಾರದು ಎಂಬ ತಾಕೀತು ಮಾಡಿದ್ದಾರಾ ಎಂದು ಪ್ರಶ್ನಿಸಿದರು.ಎಫ್ಐಆರ್ ಮಾಡಿರುವ ಒಂದು ಸಾವಿರ ಆರೋಪಿಗಳ ಪೈಕಿ 23 ಜನರನ್ನು ಮಾತ್ರ ಬಂಧಿಸಲಾಗಿದೆ. ಉಳಿದ ಆರೋಪಿಗಳನ್ನು ಯಾವಾಗ ಬಂಧಿಸ್ತೀರಾ? ಈ ದೇಶದ ಸಂವಿಧಾನಕ್ಕೆ ನಾವು ಗೌರವ ಕೊಡ್ತೇವೆ. ಈ ಕಾರಣಕ್ಕಾಗಿಯೇ ನಾವು ನ್ಯಾಯಾಲಯದಲ್ಲಿ ಅನುಮತಿ ಪಡೆದು ಪ್ರತಿಭಟನೆ ಮಾಡುತ್ತಿದ್ದೇವೆ. ಓಲೈಕೆ ರಾಜಕಾರಣಕ್ಕೆ ಮುಂದಾಗಿರುವ ಸಿದ್ದರಾಮಯ್ಯನವರೇ ಇದು ರೀ ಬೌನ್ಸ್ ಆಗುತ್ತದೆ ಎಂದು ಅವರು ಎಚ್ಚರಿಸಿದರು.ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕ ಟಿ.ಎಸ್. ಶ್ರೀವತ್ಸ, ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ, ರಾಷ್ಟ್ರ ಸುರಕ್ಷಾ ಜನಾಂದೋಲನ ಸಮಿತಿ ಸಂಚಾಲಕ ಮಹೇಶ್ ಕಡಗದಾಳು, ಸಹ ಸಂಚಾಲಕರಾದ ಬಸವರಾಜು, ಮಹೇಶ್, ಚೇತನ್, ಮುಖಂಡರಾದ ಎಚ್.ಜಿ. ಗಿರಿಧರ್, ಜೋಗಿ ಮಂಜು ಮೊದಲಾದವರು ಪಾಲ್ಗೊಂಡಿದ್ದರು. ಪುಟ್ಬಾಲ್ ಮೈದಾನ ಸುತ್ತಮುತ್ತ 300 ಹೆಚ್ಚಿನ ಪೊಲೀಸರು ಭದ್ರತೆ ಕೈಗೊಂಡಿದ್ದರು.----ಬಾಕ್ಸ್... ಹೋರಾಟಕ್ಕೆ ಷರತ್ತುಬದ್ಧ ಅನುಮತಿ ರಾಷ್ಟ್ರ ಸುರಕ್ಷಾ ಜನಾಂದೋಲನ ಸಮಿತಿಯು ಉದಯಗಿರಿಯಲ್ಲಿ ನಡೆದ ಗಲಭೆಯನ್ನು ಖಂಡಿಸಿ, ಸಮಗ್ರ ತನಿಖೆಯನ್ನು ಎನ್ಐಎ ಮೂಲಕ ನಡೆಸಬೇಕು ಹಾಗೂ ಬಂಧಿತ ಆರೋಪಿಗಳ ಮೇಲೆ ಯುಎಪಿಎ ಕಾಯ್ದೆಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಮೈಸೂರು ಚಲೋ ಹೋರಾಟವನ್ನು ಆಯೋಜಿಸಿತ್ತು.ಆದರೆ, ಇದಕ್ಕೆ ವಿರುದ್ಧವಾಗಿ ದಲಿತ ಮಹಾಸಭಾ ಮತ್ತು ಜಿಲ್ಲಾ ಯುವ ಕಾಂಗ್ರೆಸ್ ಸಹ ಗನ್ ಹೌಸ್ ವೃತ್ತದಿಂದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದವರೆಗೆ ಮೌನ ಮೆರವಣಿಗೆ, ಬೃಹತ್ ಸಮಾವೇಶ ನಡೆಸಲು ಮುಂದಾಗಿತ್ತು. ಹೀಗಾಗಿ, ಎರಡು ಹೋರಾಟಗಳಿಗೂ ಪೊಲೀಸರು ಅನುಮತಿ ನಿರಾಕರಿಸಿದರು. ಅಲ್ಲದೆ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅವರು ನಿಷೇಧಾಜ್ಞೆ ಸಹ ಜಾರಿಗೊಳಿಸಿದ್ದರು.ಇದನ್ನು ಪ್ರಶ್ನಿಸಿ ಸಲ್ಲಿಕೆ ಆಗಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಷರತ್ತುಬದ್ಧವಾಗಿ ಹೋರಾಟ ನಡೆಸಲು ಅನುಮತಿ ನೀಡಿತು. ಇದರ ಬೆನ್ನಲೆ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅವರು, ಮಹಾರಾಜ ಕಾಲೇಜು ಪಕ್ಕದ ಫುಟ್ ಬಾಲ್ ಮೈದಾನದಲ್ಲಿ ಮೈಸೂರು ಚಲೋ ಸಭೆ ನಡೆಸಲು ಷರತ್ತುಬದ್ಧವಾಗಿ ಅನುಮತಿ ನೀಡಿದರು.----ಬಾಕ್ಸ್... ಬಿಜೆಪಿ ನಾಯಕರು ವಾಪಸ್ಮೈಸೂರು ಚಲೋ ಹೋರಾಟದಲ್ಲಿ ಭಾಗವಹಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಪ್ರತಿ ಪಕ್ಷದ ನಾಯಕ ಆರ್. ಅಶೋಕ್ ಸೇರಿದಂತೆ ರಾಜ್ಯ ನಾಯಕರು ಸೋಮವಾರ ಬೆಳಗ್ಗೆ ಮೈಸೂರಿಗೆ ಆಗಮಿಸಿ, ಖಾಸಗಿ ಹೊಟೇಲ್ ನಲ್ಲಿ ಮೊಕ್ಕಾಂ ಹೂಡಿದ್ದರು. ಈ ವೇಳೆ ಸ್ಥಳೀಯರ ನಾಯಕರೊಂದಿಗೆ ಚರ್ಚಿಸುತ್ತಾ, ಹೈಕೋರ್ಟ್ ಆದೇಶಕ್ಕೆ ಕಾದು ಕುಳಿತ್ತಿದ್ದರು. ಆದರೆ, ಮಧ್ಯಾಹ್ನದವರೆಗೂ ಸಭೆ ನಡೆಸಲು ಸಾಧ್ಯವಾಗದ ಕಾರಣ ಬಿಜೆಪಿ ರಾಜ್ಯ ನಾಯಕರು ಬೆಂಗಳೂರಿಗೆ ವಾಪಾಸಾದರು. ಸ್ಥಳೀಯರು ನಾಯಕರು ಮಾತ್ರ ಸಭೆಯಲ್ಲಿ ಪಾಲ್ಗೊಂಡಿದ್ದರು.----ಕೋಟ್...ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ರಾಜ್ಯದ ಗಡಿ ಭಾಗದಲ್ಲಿ ಕನ್ನಡಿಗರ ಮೇಲೆಹಲ್ಲೆ ನಡೆದಿದೆ.ಇದನ್ನು ಕರ್ನಾಟಕ, ಮಹಾರಾಷ್ಟ್ರ ಹಾಗೂ ಕೇಂದ್ರ ಸರ್ಕಾರಗಳು ಗಂಭೀರವಾಗಿ ಪರಿಗಣಿಸಬೇಕು. ವೋಟ್ ಬ್ಯಾಂಕ್ ಗೋಸ್ಕರಓಲೈಕೆ ರಾಜಕಾರಣ ಮಾಡುವುದನ್ನು ಬಿಡಬೇಕು. ಗೃಹ ಇಲಾಖೆ ನಿಭಾಯಿಸುವಲ್ಲಿ ಸಚಿವ ಪರಮೇಶ್ವರ್ ವಿಫಲರಾಗಿದ್ದಾರೆ. ಅವರಿಗೆ ಗೃಹ ಇಲಾಖೆಯನ್ನು ನಿಭಾಯಿಸಲು ಸಾಧ್ಯವಿಲ್ಲದ್ದರೇ ರಾಜೀನಾಮೆ ನೀಡಲಿ.- ಎನ್. ಮಹೇಶ್, ಮಾಜಿ ಸಚಿವರು----ನ್ಯಾಯಾಲಯದ ನಿರ್ದೇಶನದ ಮೇರೆಗೆ ರಾಷ್ಟ್ರ ಸುರಕ್ಷಾ ಜನಾಂದೋಲನ ಸಮಿತಿಯ ವತಿಯಿಂದ ಮೈಸೂರು ಚಲೋ ಕಾರ್ಯಕ್ರಮ ನಡೆದಿದೆ. ಪೊಲೀಸ್ ಠಾಣೆಯ ಮೇಲೆ ನಡೆದ ದಾಳಿ ಖಂಡಿಸಿ ಈ ಕಾರ್ಯಕ್ರಮ ನಡೆಸಲಾಗಿದೆ. ಸಾರ್ವಜನಿಕರಿಗೆ ರಕ್ಷಣೆ ನೀಡಬೇಕಾದ ಪೊಲೀಸರಿಗೆ ಇದೀಗ ರಕ್ಷಣೆ ಇಲ್ಲದಂತಾಗಿದೆ. ಹಾಗಾಗಿ ಪೊಲೀಸರಿಗೆ ಆತ್ಮಸ್ಥೈರ್ಯ ತುಂಬುವ ಸಲುವಾಗಿ ಮೈಸೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರಾಜ್ಯ ಸರ್ಕಾರ ಓಲೈಕೆ ರಾಜಕಾರಣ ಮಾಡುತ್ತಿದೆ. ವೋಟ್ ಬ್ಯಾಂಕ್ ಗಾಗಿ ಒಂದು ಸಮುದಾಯವನ್ನು ಓಲೈಕೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ.- ಟಿ.ಎಸ್. ಶ್ರೀವತ್ಸ, ಶಾಸಕರು