ಪೊಲೀಸ್ ಠಾಣೆ ಎಂದರೆ ಭಯಪಡುವುದು ನಿಲ್ಲಿಸಿ

| Published : Nov 10 2024, 01:46 AM IST / Updated: Nov 10 2024, 01:47 AM IST

ಸಾರಾಂಶ

ಹನೂರು ತಾಲೂಕಿನ ರಾಮಪುರ ಪೊಲೀಸ್ ಠಾಣೆಯಲ್ಲಿ ಜೆಎಸ್ಎಸ್ ಶಾಲಾ ವಿದ್ಯಾರ್ಥಿಗಳಿಗೆ ತೆರದ ಮನೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಪಿಎಸ್ಐ ಲೋಕೇಶ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹನೂರು

ವಿದ್ಯಾರ್ಥಿಗಳು ಪೊಲೀಸ್ ಠಾಣೆ ಎಂದರೆ ಭಯಪಡದೆ ಧೈರ್ಯವಾಗಿ ಯಾವುದೇ ಅಳುಕಿಲ್ಲದೆ ಧೈರ್ಯವಾಗಿ ಬರಬೇಕು ಎಂದು ಸಬ್ ಇನ್ಸ್‌ಪೆಕ್ಟರ್ ಲೋಕೇಶ್ ತಿಳಿಸಿದರು.

ತಾಲೂಕಿನ ರಾಮಪುರ ಪೊಲೀಸ್ ಠಾಣೆಯಲ್ಲಿ ಜೆಎಸ್ಎಸ್ ಪ್ರೌಢಶಾಲೆಯ ವಿದ್ಯಾರ್ಥಿಗಳನ್ನು ಠಾಣೆಗೆ ಕರೆಸಿ ತೆರೆದ ಮನೆ ಕಾರ್ಯಕ್ರಮ ಆಯೋಜಿಸುವ ಮೂಲಕ ಮಕ್ಕಳಿಗೆ ಅರಿವು ಕಾರ್ಯಕ್ರಮ ಬಗ್ಗೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪೊಲೀಸ್ ಇಲಾಖೆಯಲ್ಲಿ ವಿನೂತನವಾಗಿ ಕಾರ್ಯಕ್ರಮವನ್ನು ಮಕ್ಕಳಿಗೋಸ್ಕರವೇ ಮಾಡುತ್ತಿರುವ ತೆರೆದ ಮನೆ ಕಾರ್ಯಕ್ರಮ ಉತ್ತಮ ಕಾರ್ಯಕ್ರಮವಾಗಿದೆ. ವಿದ್ಯಾರ್ಥಿಗಳು ಪೊಲೀಸ್ ಠಾಣೆ ಎಂದರೆ ಯಾವುದೇ ಭಯ ಅಂಜಿಕೆ ಅಳುಕಿಲ್ಲದೆ ಧೈರ್ಯವಾಗಿ ಬಂದು ವಿಚಾರಗಳಿದ್ದರೆ ತಿಳಿಸಬೇಕು. ಜೊತೆಗೆ ಪೋಕ್ಸೊ ಕಾಯ್ದೆ ಅಡಿ ವಿದ್ಯಾರ್ಥಿಗಳು ವಿಚಾರವನ್ನು ತಿಳಿದುಕೊಂಡು ಬಾಲ್ಯ ವಿವಾಹ ಹಾಗೂ ನಿಮ್ಮ ನೆರೆಹೊರೆಯಲ್ಲಿ ನಡೆಯುವ ಅಕ್ರಮಗಳನ್ನು ತಡೆಗಟ್ಟಲು ಮಕ್ಕಳು ಶಾಲಾ ಹಂತದಿಂದಲೇ ಮೈಗೂಡಿಸಿಕೊಂಡು ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.

ಮಕ್ಕಳು ದ್ವಿಚಕ್ರ ವಾಹನಗಳನ್ನು ಚಾಲನೆ ಮಾಡಬೇಕಾದರೆ ಅದಕ್ಕೆ ಬೇಕಾಗುವ ದಾಖಲಾತಿಗಳನ್ನು ಇಟ್ಟುಕೊಂಡು ವಾಹನ ಚಲಾವಣೆ ಮಾಡಬೇಕು ಇಲ್ಲದಿದ್ದರೆ ಕಾನೂನು ಬಾಹಿರ ಪೋಷಕರಿಗೆ ಮಕ್ಕಳು ಮಾಡುವ ತಪ್ಪಿನಿಂದಾಗಿ ದಂಡತರಬೇಕಾಗುತ್ತದೆ. ಇಂತಹ ವಿಚಾರಗಳಿಗೆ ವಿದ್ಯಾರ್ಥಿಗಳು ಕಾನೂನಿನ ಬಗ್ಗೆ ತಿಳಿದುಕೊಂಡು ಪೊಲೀಸ್ ಇಲಾಖೆಗೆ ಸಂಪೂರ್ಣವಾಗಿ ಸಹಕಾರ ನೀಡಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಲಿಂಗರಾಜು ಹಾಗೂ ಪೊಲೀಸ್ ಸಿಬ್ಬಂದಿ ವರ್ಗ ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.