ಸಾರಾಂಶ
ಚನ್ನಪಟ್ಟಣ: ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಕೀಳರಿಮೆ ಬಿಡಬೇಕು. ಛಲದಿಂದ ವ್ಯಾಸಂಗ ಮಾಡಿ, ಹೆಚ್ಚಿನ ಅಂಕ ಗಳಿಸಿ, ನಾವು ಯಾರಿಗೇನು ಕಡಿಮೆ ಇಲ್ಲ ಎಂಬುದನ್ನು ಆತ್ಮವಿಶ್ವಾಸದಿಂದ ಸಾಬೀತುಪಡಿಸಬೇಕು ಎಂದು ಭಾರತ ವಿಕಾಸ ಪರಿಷತ್ ಕಣ್ವ ಶಾಖೆ ಅಧ್ಯಕ್ಷ ಪುಟ್ಟಸ್ವಾಮಿಗೌಡ (ಡಿಪಿಎಸ್) ತಿಳಿಸಿದರು.
ತಮ್ಮ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಅವರ ಹುಟ್ಟೂರು ಮಳೂರುಪಟ್ಟಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್, ಲೇಖನಿ, ಪೆನ್ಸಿಲ್ ಸೇರಿದಂತೆ ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.ಸೌಭಾಗ್ಯ ಪುಟ್ಟಸ್ವಾಮಿಗೌಡ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗಲೆಂದು ನಮ್ಮ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಶಾಲಾ ಬ್ಯಾಗ್, ನೋಟ್ ಪುಸ್ತಕ, ಪೆನ್ನು, ಪೆನ್ಸಿಲ್ ವಿತರಿಸಿದ್ದು ಮಕ್ಕಳು ಇದರ ಸದುಪಯೋಗದೊಂದಿಗೆ ಉತ್ತಮ ಶಿಕ್ಷಣವನ್ನು ಪಡೆಯಬೇಕು ಎಂದರು.
ಕಾರ್ಯದರ್ಶಿ ಯೋಗೇಶ್ ಚಕ್ಕೆರೆ ಮಾತನಾಡಿ, ಉಳ್ಳವರು ಸರ್ಕಾರಿ ಶಾಲೆಗಳ ಮಕ್ಕಳ ಕಲಿಕೆಗೆ ಸಹಾಯ ಹಸ್ತ ಚಾಚುದರ ಜೊತೆಗೆ ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡುವತ್ತಾ ಮನಸ್ಸು ಮಾಡಬೇಕೆಂದರು.ಭಾ.ವಿ.ಪ ಸಂಘಟನಾ ಕಾರ್ಯದರ್ಶಿ ವಸಂತಕುಮಾರ್ ಮಾತನಾಡಿದರು. ಈ ಸಂದರ್ಭದಲ್ಲಿ ಭಾ.ವಿ.ಪ ಪ್ರಾಂತ್ಯ ಉಪಾಧ್ಯಕ್ಷ ಗುರುಮಾದಯ್ಯ, ಪ್ರಾಂತ್ಯ ಪದಾಧಿಕಾರಿ ಬೆಸ್ಕಾಂ ಶಿವಲಿಂಗಯ್ಯ, ಭಾ.ವಿ.ಪ ಕಣ್ವ ಶಾಖೆಯ ಉಪಾಧ್ಯಕ್ಷ ಕರಿಯಪ್ಪ , ಖಜಾಂಚಿ ವಿ.ಟಿ.ರಮೇಶ್, ಗೌರವಾಧ್ಯಕ್ಷ ಬಿ. ಎನ್. ಕಾಡಯ್ಯ, ಪರಿಸರ ಸಂಚಾಲಕ ಕೂರಣಗೆರೆ ಕೃಷ್ಣಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಕುಮಾರ್, ಶಿವಕುಮಾರ್, ಮುಖ್ಯಶಿಕ್ಷಕಿ ಸವಿತಾ, ಶಿಕ್ಷಕರಾದ ಶಿಲ್ಪ, ಸುಶ್ಮಿತಾ ಇತರರು ಇದ್ದರು.
ಪೊಟೋ೯ಸಿಪಿಟಿ೧:ಮಳೂರುಪಟ್ಟಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ನೋಟ್ ಬುಕ್, ಲೇಖನಿ, ಪೆನ್ಸಿಲ್ ಸೇರಿದಂತೆ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.