ಹಿಂದೂಗಳ ಜಾತಿಯಲ್ಲಿ ಕ್ರಿಶ್ಚಿಯನ್ ಸೇರ್ಪಡೆ ಕೂಡಲೇ ಕೈಬಿಡಿ

| Published : Sep 19 2025, 01:00 AM IST

ಹಿಂದೂಗಳ ಜಾತಿಯಲ್ಲಿ ಕ್ರಿಶ್ಚಿಯನ್ ಸೇರ್ಪಡೆ ಕೂಡಲೇ ಕೈಬಿಡಿ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರದ ಉದ್ದೇಶಿತ ಜಾತಿಗಳ ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆಯಲ್ಲಿ ಹಿಂದೂ ಜಾತಿಗಳ ಕಾಲಂನಲ್ಲಿ ಕ್ರಿಶ್ಚಿಯನ್ ಎಂಬ ಪದ ಸೇರಿಸಿದ್ದನ್ನು ಖಂಡಿಸಿ ಎಲ್ಲ ಸಮುದಾಯಗಳ ಮಠಾಧೀಶರು, ಮುಖಂಡರ ನೇತೃತ್ವದಲ್ಲಿ ಗುರುವಾರ ನಗರದಲ್ಲಿ ಪಾದಯಾತ್ರೆ ನಡೆಸುವ ಮೂಲಕ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಗದಗ:ಸರ್ಕಾರದ ಉದ್ದೇಶಿತ ಜಾತಿಗಳ ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆಯಲ್ಲಿ ಹಿಂದೂ ಜಾತಿಗಳ ಕಾಲಂನಲ್ಲಿ ಕ್ರಿಶ್ಚಿಯನ್ ಎಂಬ ಪದ ಸೇರಿಸಿದ್ದನ್ನು ಖಂಡಿಸಿ ಎಲ್ಲ ಸಮುದಾಯಗಳ ಮಠಾಧೀಶರು, ಮುಖಂಡರ ನೇತೃತ್ವದಲ್ಲಿ ಗುರುವಾರ ನಗರದಲ್ಲಿ ಪಾದಯಾತ್ರೆ ನಡೆಸುವ ಮೂಲಕ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಕಿತ್ತೂರ ರಾಣಿ ಚೆನ್ನಮ್ಮ ಸರ್ಕಲ್‌ನಿಂದ ಪ್ರಾರಂಭವಾದ ಪಾದಯಾತ್ರೆ ನಗರದ ಮುಳಗುಂದ ನಾಕಾದಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಘೋಷಣೆಯನ್ನು ಕೂಗಿ, ಕೆಲಕಾಲ ವಾಹನ ಸಂಚಾರವನ್ನು ಬಂದ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ನಂತರ ಟಿಪ್ಪು ಸರ್ಕಲ್ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಶ್ರೀ ಗುರು ಕೊಟ್ಟೂರೇಶ್ವರ ಮಠ ಸುಕ್ಷೇತ್ರ ಹರ್ಲಾಪೂರ ಹಾಗೂ ಹಳ್ಳಿಗುಡಿಯ ಶ್ರೀ ಡಾ. ಅಭಿನವ ಕೋಟ್ಟೂರೇಶ್ವರ ಸ್ವಾಮಿಗಳು ಮಾತನಾಡಿ, ರಾಜ್ಯ ಸರ್ಕಾರ ಅಂದಾಜು 420 ಕೋಟಿ ವೆಚ್ಚದಲ್ಲಿ ಮತ್ತೋಮ್ಮೆ ಸಮೀಕ್ಷೆ ನಡೆಸಲು ತೀರ್ಮಾನಿಸಿದೆ. ಆದರೆ, ತರಾತುರಿಯಲ್ಲಿ ಜನಗಣತಿ ಮಾಡುವ ದುಸ್ಸಾಹಸಕ್ಕೆ ಸರ್ಕಾರ ಕೈ ಹಾಕಿದೆ. ಭಾರತ ತನ್ನದೇ ಆದ ಧರ್ಮ, ಭಾಷೆಯೊಂದಿಗೆ ಸಾಗುತ್ತಿದೆ. ರಾಜಕಾರಣಿಗಳು ಅವರ ಅಸ್ತಿತ್ವಕ್ಕಾಗಿ ಧರ್ಮ, ಜಾತಿ ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.ಹಿಂದೂ ಧರ್ಮದಲ್ಲಿ ಲಿಂಗಾಯತ, ಕುರುಬ, ಬ್ರಾಹ್ಮಣ, ಭೋವಿ ಸೇರಿದಂತೆ 46ಕ್ಕೂ ಅಧಿಕ ಜಾತಿಗಳಲ್ಲಿ ಕ್ರಿಶ್ಚಿಯನ್ ಅಂತ ನಮೂದು ಮಾಡಿ ಜನರಿಗೆ ಮೋಸ ಮಾಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಕ್ರಿಶ್ಚಿಯನ್ ಅಂತ ಇರುವ ಕಾಲಂ ಅನ್ನು ತೆಗೆಯುವವರೆಗೂ ಈ ಜನಗಣತಿಯನ್ನು ಮಾಡಬಾರದು. ಈ ಮೂಲಕ ಹಿಂದೂಗಳಲ್ಲಿ ಒಡಕು ಹುಟ್ಟಿಸುವ ಕೆಲಸ ಸದ್ದಿಲ್ಲದೇ ನಡೆಯುತ್ತಿದೆ. ಹೊಸ ಜಾತಿ ಸ್ಥಾಪಿಸಲು ಸರ್ಕಾರಕ್ಕೆ ಅನುಮತಿ ಕೊಟ್ಟಿದ್ದು ಯಾರು ಎಂದು ಸರ್ಕಾರ ಸ್ಪಷ್ಟಪಡಿಸಬೇಕು ಮತ್ತು ಇಲ್ಲದ ಜಾತಿಗಳನ್ನು ಸೇರಿಸಿ ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುವ ಹುನ್ನಾರವನ್ನು ರಾಜ್ಯ ಸರ್ಕಾರ ಕೂಡಲೇ ಕೈ ಬಿಡಬೇಕೆಂದು ಆಗ್ರಹಿಸಿದರು.ಗಜೇಂದ್ರಗಡ ತಳ್ಳಿಹಾಳ ಸಂಸ್ಥಾನ ಕೊಡಿಮಠದ ಶ್ರೀ ಡಾ. ಶರಣಬಸವ ಸ್ವಾಮಿಗಳು ಮಾತನಾಡಿ, ಸೆ. 22ರಿಂದ 15 ದಿನಗಳ ಕಾಲ ದಸರಾ ನವರಾತ್ರಿಯ ಸಂದರ್ಭದಲ್ಲಿ ಹಿಂದೂಳಿದ ವರ್ಗಗಳ ಆಯೋಗದಿಂದ ಸಾಮಾಜಿಕ, ಶೈಕ್ಷಣಿಕ ಜಾತಿ ಜಾತಿ ಸಮೀಕ್ಷೆ ನೆಡೆಯಲಿದೆ. ಹಿಂದುಳಿದ ಆಯೋಗ ಸಮೀಕ್ಷೆಗೆ ಒಳಪಡಲಿರುವ 1400 ಕ್ಕೂ ಮಿಕ್ಕ ಜಾತಿ, ಉಪಜಾತಿಗಳ ಪಟ್ಟಿಯನ್ನು ಸಾರ್ವಜನಿಕರ ಅವಗಾಹನೆಗೆ ಬಿಡುಗಡೆ ಮಾಡಿದೆ. ಹಿಂದೂ ಜಾತಿ ಸಮುದಾಯಗಳನ್ನು ಒಡೆಯುವ ಷಡ್ಯಂತ್ರ ಇದರ ಹಿಂದೆ ಅಡಗಿದೆ. ಹಿಂದೂ ಜಾತಿಗಳೊಳಗೆ ಮತಾಂತರಕ್ಕೆ ಕುಮ್ಮಕ್ಕು ಕೊಟ್ಟು, ದುರ್ಬಲಗೊಳಿಸುವ ವ್ಯವಸ್ಥಿತ ಸಂಚು ಅಡಗಿದೆ. ಕ್ರೈಸ್ತ ಹೆಸರಿನಲ್ಲಿ ಮತಾಂತರಿಗಳು ಹಿಂದೂ ಜಾತಿಗಳೊಳಗೆ ನುಸುಳಿ ಹಿಂದೂ ಪಾಲಿನ ಮೀಸಲಾತಿಯನ್ನು ಕಬಳಿಸುವ ಹುನ್ನಾರವಿದೆ. ಸರ್ಕಾರದ ಈ ಜಾತಿಗಳ ಪಟ್ಟಿಯಲ್ಲಿ ಅನಧಿಕೃತವಾಗಿ ಹಿಂದೂ ಜಾತಿಗಳನ್ನು ಕ್ರೈಸ್ತ ಜಾತಿಗಳೆಂದು ಗುರುತಿಸಿರುವುದು ಸರ್ಕಾರ ಜಾತಿ ಒಡೆಯುವ ಕೆಲಸಕ್ಕೆ ಕೈ ಹಾಕಿರುವುದು ಖಂಡನೀಯ. ಈ ಕೂಡಲೇ ಹಿಂದೂಗಳ ಜಾತಿಯಲ್ಲಿ ಕ್ರಿಶ್ಚಿಯನ್ ಪದ ಸೇರ್ಪಡೆಯನ್ನು ಕೈ ಬೀಡಬೇಕು ಅಲ್ಲಿಯವರೆಗೆ ಜಾತಿ ಸಮೀಕ್ಷೇಯನ್ನು ಮಾಡಬಾರದೆಂದು ಸರ್ಕಾರಕ್ಕೆ ಆಗ್ರಹಿಸಿದರಲ್ಲದೆ ಉಗ್ರಹೋರಾಟದ ಎಚ್ಚರಿಕೆಯನ್ನು ನೀಡಿದರು. ಈ ವೇಳೆ ನರಸಾಪೂರ ಅನ್ನದಾನೇಶ್ವರ ಶಾಖಾಮಠದ ಡಾ. ವೀರೇಶ್ವರ ಸ್ವಾಮಿಗಳು, ಸೊರಟೂರಿನ ಫಕೀರೇಶ್ವರ ಸ್ವಾಮೀಜಿ, ಸು.ಕೃಷ್ಣಮೂರ್ತಿ, ನಾಗಲಾಪುರ, ಹನುಮಂತ ಕಾಳೆ, ರವಿಕಾಂತ ಅಂಗಡಿ, ಸುರೇಶ್ ಮಳಪ್ಪನವರ್, ರಾಘವೇಂದ್ರ, ಶಶಿಧರ್ ದಿಂಡೂರ, ಬಸುರಾಜ ನಾಗಲಾಪುರ, ವೆಂಕಟೇಶ್ ಕುಲಕರ್ಣಿ, ರವಿ ದಂಡಿನ, ರುದ್ರಣ್ಣ ಗುಳಗುಳಿ, ವಿಜಯಕುಮಾರ ಗಡ್ಡಿ, ಸವಡಿ ಶೆಟ್ಟರ್, ಉಡಚಪ್ಪ ಹಳ್ಳಿಕೇರಿ, ಅಶೋಕ ದಿಮನಿ, ಅಶೋಕ ಕುಡ್ತೀನಿ, ರಘು ಪರಪುರ, ಗಣೇಶ ಹುಬ್ಬಳ್ಳಿ, ರಾಘವೇಂದ್ರ ಯಳವತ್ತಿ, ವಿಜಯಲಕ್ಷ್ಮಿ ಮಾನ್ವಿ, ಶಶಿಧರ್ ದಿಂಡೂರ, ಪ್ರಶಾಂತ್ ನಾಯಕರ, ಜಗದೀಶ ಪೂಜಾರ, ಶ್ರೀನಿವಾಸ್, ವಿ.ಎನ್.ತೇಜಿಗೌಡರ, ವಿ.ಎಸ್.ಉಪ್ಪಿನ, ಜಿ.ಎಂ.ಹಕಾರಿ, ಪೊಲೀಸ್‌ಪಾಟೀಲ, ಎಸ್.ಎನ್.ಹೊಟ್ಟಿನ, ಕುಮ್ಮಣ್ಣ ಬೇಲಿರಿ, ರಾಜು ಕುರಡಗಿ, ರವಿ ವಗ್ಗನವರ, ಪರಮೇಶ ಲಮಾಣಿ, ಐ.ಎಸ್.ಪುಜಾರ, ಟಿ.ಡಿ. ಲಮಾಣಿ, ಸೋಮನಾಥ ಲಮಾಣಿ ಸೇರಿದಂತೆ ವಿವಿಧ ಸಮಾಜದ ಮುಖಂಡರು, ಮಠಾಧೀಶರು ಇದ್ದರು.46 ಜಾತಿಗಳ ಕಾಲಂನಲ್ಲಿ ಕ್ರಿಶ್ಚಿಯನ್ ಅಂತ ಸೇರಿಸಲಾಗಿದೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಮತಾಂತರಗೊಂಡವರು ಮತಾಂತರಗೊಂಡ ಧರ್ಮವನ್ನೆ ಸೇರಿಸಬೇಕು. ಯಾವುದೇ ಕಾರಣಕ್ಕೂ ಮೂಲ ಧರ್ಮ ಸೇರಿಸಬಾರದು ಎಂದು ಜಿಲ್ಲಾ ಬಂಜಾರ ಸಮಾಜ ಅಧ್ಯಕ್ಷ ರವಿಕಾಂತ ಅಂಗಡಿ ಹೇಳಿದರು.ಹಿಂದೂ ಜಾತಿಗಳೊಳಗೆ ಮತಾಂತರಕ್ಕೆ ಕುಮ್ಮಕ್ಕು ಕೊಟ್ಟು, ದುರ್ಬಲಗೊಳಿಸುವ ವ್ಯವಸ್ಥಿತ ಸಂಚು ಅಡಗಿದೆ, ಹೀಗಾಗಿ ಸರ್ಕಾರ ಈ ಕೂಡಲೇ ಇಂತಹ ನೀತಿಯನ್ನು ಕೈ ಬೀಡಬೇಕು ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಉಗ್ರಹೋರಾಟ ಮಾಡಲಾಗುವುದು ಎಂದು ಸಾಮರಸ್ಯ ವೇದಿಕೆಯ ಸು.ಕೃಷ್ಣಮೂರ್ತಿ ಹೇಳಿದರು.