ಎಸ್ಐಆರ್ ವಿರೋಧಿ ದೆಹಲಿ ಹೋರಾಟಕ್ಕೆ ಜನಪರ ಸಂಘಟನೆಗಳ ಒಕ್ಕೂಟವು ಸಂಪೂರ್ಣವಾಗಿ ಬೆಂಬಲಿಸುತ್ತದೆ ಹಾಗೂ ಎಸ್ಐಆರ್ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸಬೇಕು ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಶಹಾಬಾದ್ ಎಸ್ಐಆರ್ ವಿರೋಧಿ ದೆಹಲಿ ಹೋರಾಟಕ್ಕೆ ಜನಪರ ಸಂಘಟನೆಗಳ ಒಕ್ಕೂಟವು ಸಂಪೂರ್ಣವಾಗಿ ಬೆಂಬಲಿಸುತ್ತದೆ ಹಾಗೂ ಎಸ್ಐಆರ್ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸಬೇಕು ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಆಗ್ರಹಿಸಿದರು.ನಗರದ ಶನಿವಾರ ರೈಲ್ವೆ ಸ್ಟೇಷನ್ ಹತ್ತಿರ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಪ್ರತಿಬಾರಿ ಚುನಾವಣೆ ಸಂದರ್ಭದ ಮತದಾರರ ಪಟ್ಟಿಯಲ್ಲಿ ತಿದ್ದುಪಡಿ ಸೇರ್ಪಡೆ ಸಾಮಾನ್ಯವಾಗಿ ನಡೆಯುತ್ತಾ ಬಂದಿದೆ. ಆದರೆ ಈ ಬಾರಿ ಇಷ್ಟೊಂದು ಕುಲಂಕಶವಾಗಿ, ಆಳವಾಗಿ ಪರಿಶೀಲನೆ ಮಾಡುವ ಹಿನ್ನೆಲೆ ನೋಡಿದರೆ ಇದರಲ್ಲಿ ದೊಡ್ಡ ಕುತಂತ್ರ ಇದೆ ಎಂಬುದು ಸ್ಪಷ್ಟವಾಗಿದೆ. ಬಿಜೆಪಿ ಸರ್ಕಾರದಲ್ಲಿ ಪ್ರಶ್ನೆ ಕೇಳುವುದು ಮತ್ತು ಮಾತಾಡುವ ಹಕ್ಕನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಕೋಟ್ಯಂತರ ಮಂದಿಯ ಮತದಾನದ ಹಕ್ಕು ಕಸಿದುಕೊಂಡಿದ್ದಾರೆ. ಇದಕ್ಕೆ ಜನಸಾಮಾನ್ಯರು ಒಗ್ಗಟ್ಟಿನಿಂದ ಹೋರಾಡಿ ಎಸ್ಐಆರ್ ಸಂಪೂರ್ಣವಾಗಿ ನಿಲ್ಲಿಸಬೇಕು ಹಾಗೂ ಜ್ಞಾನೇಶ್ ಕುಮಾರ ಅವರನ್ನು ತಕ್ಷಣವೇ ವಜಾಗೊಳಿಸಬೇಕು. ದೆಹಲಿ ಹೋರಾಟದಲ್ಲಿ ಬಂಧಿಸಿದ ಹೋರಾಟಗಾರರನ್ನು ಬಿಡುಗಡೆ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಲ್ಲಿ ಉದ್ದೇಶಿಸಿ ಗಣಪತರಾವ ಕೆ, ರಾಘವೇಂದ್ರ ಎಂ ಜಿ, ಮಾನೆ, ನಾಗಪ್ಪ ರೈಚೂರಕರ್, ಗುಂಡಮ್ಮ ಮಡಿವಾಳ ಮಾತನಾಡಿದರು. ಕಾಡಾ ಅಧ್ಯಕ್ಷ ಡಾ.ಎಂ ಎಂ ರಶೀದ್, ಗಣಪತಿ ರಾವ್‌ ಕೆ, ರಾಘವೇಂದ್ರ ಎಂ.ಜಿ, ಮಾನೆ, ನಾಗಪ್ಪ ರೈಚೂರಕರ್, ಗುಂಡಮ್ಮ ಮಡಿವಾಳ, ಮಲ್ಲಿಕಾರ್ಜುನಗೌಡ ಹಳ್ಳಿ, ಹಾಸಮ್ ಖಾನ್, ಮರಿಯಪ್ಪ ಮೇತ್ರೆ, ಫಜಲ ಪಟೇಲ್, ನರಸಿಂಲು ರೈಚೂರಕರ, ಮಲ್ಲಿಕಾರ್ಜುನ ಹಳ್ಳಿ, ಮಹಮ್ಮದ್‌ ಮಸ್ತಾನ, ಪಿಐ ಪರಶುರಾಮ ವನಂಜಕರ, ಪಿಎಸ್ಐ ಚಂದ್ರಕಾಂತ ಮೇಕಾಲೆ ಬಂದೋಬಸ್ತ್ ಒದಗಿಸಿದ್ದರು.

.