ಕಾಂಗ್ರೆಸ್ ವಿರುದ್ಧದ ಸಂವಿಧಾನ ವಿರೋಧಿ ಚಟುವಟಿಕೆ ತಡೆಯಿರಿ

| Published : Oct 23 2024, 12:43 AM IST

ಕಾಂಗ್ರೆಸ್ ವಿರುದ್ಧದ ಸಂವಿಧಾನ ವಿರೋಧಿ ಚಟುವಟಿಕೆ ತಡೆಯಿರಿ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ನಾಗರಿಕರ ಸಮಸ್ಯೆಗಳನ್ನು ಮರೆತು ಕಾಂಗ್ರೆಸ್ ವಿರುದ್ಧ ನಡೆಸುತ್ತಿರುವ ಸಂವಿಧಾನ ವಿರೋಧಿ ಚಟುವಟಿಕೆ ತಡೆಯಲು ರಾಷ್ಟ್ರಪತಿಗಳು ಮಾರ್ಗಸೂಚನೆ ನೀಡುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ (ಸಂಯೋಜಕ) ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಶಿವಮೊಗ್ಗ: ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ನಾಗರಿಕರ ಸಮಸ್ಯೆಗಳನ್ನು ಮರೆತು ಕಾಂಗ್ರೆಸ್ ವಿರುದ್ಧ ನಡೆಸುತ್ತಿರುವ ಸಂವಿಧಾನ ವಿರೋಧಿ ಚಟುವಟಿಕೆ ತಡೆಯಲು ರಾಷ್ಟ್ರಪತಿಗಳು ಮಾರ್ಗಸೂಚನೆ ನೀಡುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ (ಸಂಯೋಜಕ) ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಚುನಾಯಿತ ಪ್ರತಿನಿಧಿಗಳು ಮತ್ತು ಆಡಳಿತಾರೂಢ ಸರ್ಕಾರಗಳು ಸಮುದಾಯಗಳ ಸಾರ್ವಭೌಮತ್ವವನ್ನು ಕಾಪಾಡಬೇಕೇ ಹೊರತು ಅಶಾಂತಿಯನ್ನಲ್ಲ. ಸಾಮಾಜಿಕ ನ್ಯಾಯ ಸಿಗದೇ, ಮಾನವ ಹಕ್ಕುಗಳು ದೊರೆಯದೇ ಇರುವ ಸಂದರ್ಭದಲ್ಲಿ ಹೋರಾಟ ಮಾಡುವುದು ಬಿಟ್ಟು ಸಲ್ಲದ ವಿಷಯಗಳಿಗೆ ಬಿಜೆಪಿ ಮತ್ತು ಜೆಡಿಎಸ್ ಪ್ರತಿಭಟನೆ ಮಾಡುತ್ತಿವೆ ಎಂದು ಪ್ರತಿಭಟನಾಕಾರರು ದೂರಿದರು.

ಕೋಮುವಾದಿಗಳ ಪ್ರಾಬಲ್ಯ ಹೆಚ್ಚಾಗುತ್ತಿದೆ. ಇದನ್ನು ಮಣಿಸಲು ಪ್ರಗತಿಪರ ಮತ್ತು ಅಹಿಂದ ದಲಿತ ಸಂಘಟನೆಗಳು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಇದನ್ನು ಸಹಿಸದ ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ಕಾಂಗ್ರೆಸ್ ಸರ್ಕಾರ ಅಸ್ಥಿರಗೊಳಿಸುವ ದೃಷ್ಟಿಯಿಂದ ಮುಡಾದಂತಹ ಹಗರಣ ಹುಟ್ಟು ಹಾಕಿವೆ ಎಂದು ದೂರಿದರು.ಕೂಡಲೇ ಬೀದಿ ರಂಪಾಟದಲ್ಲಿ ತೊಡಗಿರುವ, ದ್ವೇಷ ರಾಜಕೀಯ ಮಾಡುತ್ತಿರುವ, ನಾಡಿನ ಸಮಸ್ಯೆಗಳನ್ನು ಮರೆತಿರುವ ದುಷ್ಟ ರಾಜಕಾರಣಕ್ಕೆ ಕಡಿವಾಣ ಹಾಕಿ ಪ್ರಜಾಪ್ರಭುತ್ವ ರಕ್ಷಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ವಿ. ನಾಗರಾಜ್, ಎಲ್. ರಾಜು, ಅಣ್ಣಯ್ಯ, ಜಗದೀಶ್, ವಿರೂಪಾಕ್ಷಪ್ಪ ಮತ್ತಿತರರು ಇದ್ದರು.