ಸಾರಾಂಶ
ಜೀವಸಂಕುಲ ಉಳಿವು ಪರಿಸರ ಸಮತೋಲನಕ್ಕಾಗಿ ಪ್ರತಿಯೊಬ್ಬ ನಾಗರೀಕರು ಪ್ಲಾಸ್ಟಿಕ್ ಕವರ್‌ಗಳನ್ನು ಬಳಕೆ ಮಾಡುವುದು ತ್ಯಜಿಸಬೇಕು ಅಲ್ಲದೆ ಅಂಗಡಿ ಮುಂಗಟುಗಳು ಹೋಟೆಲ್‌ಗಳು ಬಾರ್‌ಗಳಲ್ಲಿ ಪ್ಲಾಸ್ಟಿಕ್ ಕವರ್‌ಗಳನ್ನು ಬಳಕೆ ಮಾಡಬೇಡಿ
ಕನ್ನಡಪ್ರಭ ವಾರ್ತೆ ಮಾಲೂರು
ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಕೆಯನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದ್ದು ಪರಿಸರದಲ್ಲಿ ಜೀವಸಂಕುಲಗಳ ಹಿತದೃಷ್ಟಿಯಿಂದ ಪ್ಲಾಸ್ಟಿಕ್ ಬಳಕೆ ತ್ಯಜಿಸಿ ಪ್ರತಿಯೊಬ್ಬ ನಾಗರಿಕರು ಬಟ್ಟೆ ಚೀಲಗಳನ್ನು ಬಳಸಿ ಪರಿಸರವನ್ನು ಸಂರಕ್ಷಿಸುವಂತೆ ಪುರಸಭಾ ಮುಖ್ಯ ಅಧಿಕಾರಿ ಎಂ.ಬಿ.ಪ್ರದೀಪ್ ಹೇಳಿದರು.ಪಟ್ಟಣದಲ್ಲಿ ಪುರಸಭೆ ಆರೋಗ್ಯ ಶಾಖೆ ವತಿಯಿಂದ ಪುರಸಭಾ ವ್ಯಾಪ್ತಿಯ ಅಂಗಡಿ ಮುಂಗಟುಗಳು ಹೋಟೆಲ್‌ಗಳು ಬಾರ್‌ಗಳ ಮೇಲೆ ದಾಳಿ ನಡೆಸಿ ಸುಮಾರು ೪೦ ಕೆಜಿಗೂ ಹೆಚ್ಚು ಪ್ಲಾಸ್ಟಿಕ್ ಕವರ್ ಗಳನ್ನು ವಶಪಡಿಸಿಕೊಂಡು ೨೦೦೦ಕ್ಕೂ ಹೆಚ್ಚು ದಂಡ ವಿಧಿಸಿದರು.
ಬಳಿಕ ಮಾತನಾಡಿದ ಅವರು, ಪರಿಸರದಲ್ಲಿ ಜೀವಸಂಕುಲ ಉಳಿವು ಪರಿಸರ ಸಮತೋಲನಕ್ಕಾಗಿ ಪ್ರತಿಯೊಬ್ಬ ನಾಗರೀಕರು ಪ್ಲಾಸ್ಟಿಕ್ ಕವರ್‌ಗಳನ್ನು ಬಳಕೆ ಮಾಡುವುದು ತ್ಯಜಿಸಬೇಕು ಅಲ್ಲದೆ ಅಂಗಡಿ ಮುಂಗಟುಗಳು ಹೋಟೆಲ್‌ಗಳು ಬಾರ್‌ಗಳಲ್ಲಿ ಪ್ಲಾಸ್ಟಿಕ್ ಕವರ್‌ಗಳನ್ನು ಬಳಕೆ ಮಾಡಬಾರದು ಪುರಸಭೆಯು ಈಗಾಗಲೇ ಹಲವು ಬಾರಿ ದಾಳಿ ನಡೆಸಿ ಪ್ಲಾಸ್ಟಿಕ್ ಕವರ್‌ಗಳನ್ನು ವಶಪಡಿಸಿಕೊಂಡು ದಂಡ ವಿಧಿಸಿ ಎಚ್ಚರಿಕೆಯನ್ನು ನೀಡಲಾಗಿದೆ.ಪಟ್ಟಣದ ಸ್ವಚ್ಛತೆ ಹಾಗೂ ಪರಿಸರವನ್ನು ಕಾಪಾಡಲು ನಾಗರಿಕರು ಮನೆಯಿಂದ ಹೊರ ಬಂದಾಗ ಬಟ್ಟೆ ಚೀಲ ತಂದು ತರಕಾರಿ ಹಣ್ಣು ಇನ್ನಿತರೆ ವಸ್ತುಗಳನ್ನು ತೆಗೆದುಕೊಂಡು ಹೋಗಬೇಕು ಪಟ್ಟಣದಲ್ಲಿ ದಿನೇದಿನೇ ಪ್ಲಾಸ್ಟಿಕ್ ಬಳಕೆ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಪಟ್ಟಣದ ಸ್ವಚ್ಛತೆಯ ಹಿತದೃಷ್ಟಿಯಿಂದ ಘನ ತ್ಯಾಜ್ಯ ವಸ್ತುಗಳು ಹಾಗೂ ಪ್ಲಾಸ್ಟಿಕ್ ಕವರ್‌ಗಳನ್ನು ಎಲ್ಲೆಂದರಲ್ಲಿ ಹಾಕದೆ ಪುರಸಭೆಯ ಆಟೋ ಟಿಪ್ಪರ್‌ಗಳಿಗೆ ಹಾಕಬೇಕು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಆರೋಗ್ಯ ಶಾಖೆಯ ಪರಿಸರ ಅಭಿಯಂತರ ಶಾಲನಿ, ಅಭಿಯಂತರ ನಾಗರಾಜ್, ಆರೋಗ್ಯ ನಿರೀಕ್ಷಕ ರಾಜಣ್ಣ, ಇನ್ನಿತರ ಪುರಸಭೆಯ ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು.