ಕೋಲ್ಡ್ ಸ್ಟೋರೆಜ್: ಹೆಚ್ಚಿನ ಹಣ ವಸೂಲಿ ಆರೋಪ

| Published : Mar 31 2024, 02:03 AM IST

ಸಾರಾಂಶ

ಚೀಲವೊಂದಕ್ಕೆ 300ರಿಂದ 350 ರು. ಗಳು ಪಡೆಯುತ್ತಿದ್ದಾರೆ ಎಂದು ಪ್ರಾಂತ ರೈತ ಸಂಘದವತಿಯಿಂದ ನಗರದ ರಾಕಂಗೇರಾ ಏರಿಯಾದ ಕೈಗಾರಿಕಾ ಪ್ರದೇಶದದಲ್ಲಿರುವ ಕೋಲ್ಡ್ ಸ್ಟೋರೇಜ್ ಮುಂದೆ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಶಹಾಪುರ: ರೈತರು ಎಕರೆಗೆ ಲಕ್ಷಾಂತರ ರೂಪಾಯಿಗಳ ಖರ್ಚು ಮಾಡಿ ಮೆಣಸಿನಕಾಯಿ ಬಿತ್ತನೆ ಮಾಡಿದ್ದರು. ಮಳೆ ಇಲ್ಲದೆ ಬಿತ್ತಿದ ಬೆಳೆ ಕೈಗೆ ಬಾರದೆ ಸಂಕಷ್ಟದಲ್ಲಿದ್ದ ರೈತರು ಹೋರಾಟ ಮಾಡಿ ಕೊಂಚ ನೀರು ಬಿಡಿಸಿಕೊಂಡು ಅಲ್ಪಸ್ವಲ್ಪ ಮೆಣಸಿನ ಕಾಯಿ ಬೆಳೆದಿದ್ದರು. ಮೆಣಸಿನಕಾಯಿ ಧಾರಣೆ ಪಾತಾಳಕ್ಕೆ ಕುಸಿದಿದ್ದು, ರೈತರ ಬದುಕಿನ ಮೇಲೆ ಬರಿ ಎಳೆದಂತಾಗಿದೆ.ಖಾಸಗಿ ಒಡೆತನದ ಕೋಲ್ಡ್‌ ಸ್ಟೋರೇಜ್‌ನವರು ಚೀಲವೊಂದಕ್ಕೆ ಮನಬಂದಂತೆ ದರ ಫಿಕ್ಸ್‌ ಮಾಡುತ್ತಿದ್ದಾರೆ. ಚೀಲವೊಂದಕ್ಕೆ 300ರಿಂದ 350 ರು. ಗಳು ಪಡೆಯುತ್ತಿದ್ದಾರೆ ಎಂದು ಪ್ರಾಂತ ರೈತ ಸಂಘದವತಿಯಿಂದ ನಗರದ ರಾಕಂಗೇರಾ ಏರಿಯಾದ ಕೈಗಾರಿಕಾ ಪ್ರದೇಶದದಲ್ಲಿರುವ ಕೋಲ್ಡ್ ಸ್ಟೋರೇಜ್ ಮುಂದೆ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಮೆಣಸಿನಕಾಯಿ ಧಾರಣೆ ಬರುವರೆಗೆ ಬ್ಯಾಡಗಿ, ರಾಯಚೂರು, ಮಾನ್ವಿ, ಸಿಂಧನೂರು, ದೇವದುರ್ಗ, ಕಲಬುರಗಿ ಸೇರಿದಂತೆ ಇತರೆ ನಗರಗಳಲ್ಲಿರುವ ಕೋಲ್ಡ್ ಸ್ಟೋರೆಜ್‌ಗಳು ಖಾಲಿ ಇಲ್ಲದ ಕಾರಣ ನಗರದ ಶಿವ ಸಜ್ಜನ್ ಕೋಲ್ಡ್ ಸ್ಟೋರೆಜ್‌ನಲ್ಲಿ ಮೆಣಸಿನಕಾಯಿ ಇಡಲು ಬಂದರೆ ಅದರ ಮಾಲೀಕರು ರೈತರನ್ನು ಸುಲಿಗೆ ಮಾಡಲು ನಿಂತಿದ್ದಾರೆ ಎಂದು ಆರೋಪಿಸಿದರು.

ಪ್ರತಿ ಚೀಲಕ್ಕೆ ಮನಬದಂತೆ ದರ ನಿಗದಿ ಮಾಡುತ್ತಿದ್ದಾರೆ. ನೇಮದ ಪ್ರಕಾರ ಒಂದು ಚೀಲಕ್ಕೆ 195 ರು. ಗಳು (10 ತಿಂಗಳಿಗೆ) 10 ರು. ಇನ್ಸೂರೆನ್ಸ್ ಹಾಗೂ 15 ರು. ಹಮಾಲಿ ತೆಗೆದುಕೊಳ್ಳಬೇಕು. ಆದರೆ, ಪ್ರತಿ ಚೀಲಕ್ಕೆ 325ರಿಂದ 350 ರು. ಗಳವರೆಗೆ ವಸೂಲಿ ಮಾಡುತ್ತಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸದೆ ರೈತರಿಗೆ ವಂಚನೆ ಮಾಡುತ್ತಿದ್ದಾರೆ. ಕಾನೂನು ಬಾಹಿರವಾಗಿ ಮನಬಂದಂತೆ ಧಾರಣೆ ಫಿಕ್ಸ್ ಮಾಡುತ್ತಿರುವ ಸ್ಟೋರೆಜ್‌ ಮಾಲೀಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು. ರೈತರಿಂದ ಹೆಚ್ಚಿಗೆ ಹಣ ವಸೂಲಿ ಮಾಡಿರುವ ದುಡ್ಡನ್ನು ವಾಪಸ್ ಕೊಡಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಚನ್ನಪ್ಪ ಆನೆಗುಂದಿ, ಮೆಣಸಿನಕಾಯಿ ಬೆಳೆಯಿಂದ ನಮ್ಮ ಬದುಕು ಸುಧಾರಿಸಬಹುದೆಂಬ ಭರವಸೆಯಿಂದ

ಈ ಸ್ಟೋರೆಜ್‌ನಲ್ಲಿ 80 ಸಾವಿರ ಚೀಲ ಸಂಗ್ರಹದ ಸಾಮರ್ಥ್ಯವಿದೆ. ಕೇವಲ 40 ಸಾವಿರ ಚೀಲ ಮಾತ್ರ ಸಂಗ್ರಹವಾಗಿದೆ. ಉಳಿದ ಚೀಲಕ್ಕೆ ಯಾವುದು ಶರತ್ ಇಲ್ಲದೆ ನಿಯಮಾನುಸಾರ ಸಂಗ್ರ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು. ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಎಸ್.ಎಂ.ಸಾಗರ್, ತಾಲೂಕು ಅಧ್ಯಕ್ಷ ಭೀಮರಾಯ ಟಪ್ಪೆದಾರ್, ತಾಲೂಕು ಕಾರ್ಯದರ್ಶಿ ಭೀಮರಾಯ ಬಂಗಾರಿ ಸೇರಿದಂತೆ ಅನೇಕ ರೈತರು ಇದ್ದರು.