ಸಾರಾಂಶ
: ಬಿರುಗಾಳಿ ಸಹಿತ ಸುರಿದ ಮಳೆಗೆ ತಾಲೂಕಿನ ಸೀಗಲಹಳ್ಳಿ ಗ್ರಾಮದ ರೈತ ರಾಜಶೇಖರ್ ಎಂಬುವರಿಗೆ ಸೇರಿದ ತೋಟದಲ್ಲಿನ 40 ಮಾವಿನ ಮರಗಳಲ್ಲಿದ್ದ, ಮಾವಿನ ಹಣ್ಣುಗಳು ಧರೆಗುರುಳಿವೆ.
ಶಿರಾ: ಬಿರುಗಾಳಿ ಸಹಿತ ಸುರಿದ ಮಳೆಗೆ ತಾಲೂಕಿನ ಸೀಗಲಹಳ್ಳಿ ಗ್ರಾಮದ ರೈತ ರಾಜಶೇಖರ್ ಎಂಬುವರಿಗೆ ಸೇರಿದ ತೋಟದಲ್ಲಿನ 40 ಮಾವಿನ ಮರಗಳಲ್ಲಿದ್ದ, ಮಾವಿನ ಹಣ್ಣುಗಳು ಧರೆಗುರುಳಿವೆ. ಶನಿವಾರ ಸಂಜೆ ಬೀಸಿದ ಬಿರುಗಾಳಿಗೆ ಮಾವಿನ ಫಸಲು ನಾಶವಾಗಿದೆ. ವರ್ಷದಿಂದ ಮಾವನ್ನು ಪೋಷಣೆ ಮಾಡಿದ್ದ ರೈತ ರಾಜಶೇಖರ್ ಬೆಳೆಯಿಂದ ಬರುವ ಹಣ ಜೀವನೋಪಾಯಕ್ಕೆ ಆಗುತ್ತದೆ ಎಂದು ನಂಬಿಕೊಂಡಿದ್ದರು. ಆದರೆ ಬಿರುಗಾಳಿಗೆ ಮಾವುಗಳೇ ನಾಶವಾಗಿ ಸಾವಿರಾರು ರೂಪಾಯಿ ನಷ್ಟ ಸಂಭವಿಸಿರುವುದು ರೈತನಿಗೆ ಬರದ ಛಾಯೆಯ ಮೇಲೆ ಮತ್ತೊಂದು ಬರೆ ಎಳೆದಂತಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದ್ದು ಸರ್ಕಾರ ಸೂಕ್ತ ಪರಿಹಾರ ನೀಡಲಿ ಎಂದು ಒತ್ತಾಯಿಸಿದ್ದಾರೆ.