ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಕ್ಷೇತ್ರದ ಶಾಸಕ ಎ. ಆರ್. ಕೃಷ್ಣಮೂರ್ತಿ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆ, ಅವರು ಬೇರೆ ರಾಜಕೀಯ ನಾಯಕರಂತೆ ಭರವಸೆ ನೀಡಲ್ಲ, ಆಗುವ ಕೆಲಸ ಆಗುತ್ತೆ, ಇಲ್ಲದಿದ್ದರೆ ಖಂಡಿತ ಆಗಲ್ಲ ಎಂದು ಹೇಳುವ ನೇರವಾದಿಗಳು, ನುಡಿದಂತೆ ನಡೆವ ಸಜ್ಜನರು ಎಂದು ಚಾಮುಲ್ ನಿರ್ದೇಶಕ ಕಮರವಾಡಿ ರೇವಣ್ಣ ಹೇಳಿದರು. ಅವರು ಕ್ಷೇತ್ರ ವ್ಯಾಪ್ತಿಯ ಸಂತೇಮರಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಹುಟ್ಟುಹಬ್ಬ ಹಿನ್ನೆಲೆ ಹೊರರೋಗಿಗಳಿಗೆ ಹಣ್ಣು ಹಂಪಲು ಹಾಗೂ ಅಭಿಮಾನಿಗಳಿಗೆ ಸಿಹಿ ವಿತರಿಸಿ ಮಾತನಾಡಿ, ಶಾಸಕರು ಹಲವು ಅಭಿವೃದ್ಧಿ ಕಾರ್ಯಗಳನ್ನು ಸಾಕಾರಗೊಳಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ. ಸಾಕಷ್ಟು ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ, ಇನ್ನಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಹೈಕಮಾಂಡ್ ಅವರ ಕೈಬಲಪಡಿಸಲು ಸಂಪುಟ ವಿಸ್ತರಣೆ ವೇಳೆ ಶಾಸಕರಿಗೆ ಸಚಿವ ಸ್ಥಾನ ನೀಡಲು ಹೈಕಮಾಂಡ್ ಮುಂದಾಗಬೇಕು, ಶಾಸಕರು ಹಿರಿಯರಾಗಿದ್ದು ಸಂತೇಮರಳ್ಳಿಯಲ್ಲಿ 2 ಬಾರಿ, ಈಗ ಕೊಳ್ಳೇಗಾಲದಲ್ಲೂ ಶಾಸಕರಾಗಿ ಆಯ್ಕೆಯಾಗಿದ್ದು ಅವರ ಹಿರಿತನ ಹಾಗೂ ಅನುಭವದ ಆಧಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಅವರಿಗೆ ಸಚಿವಸ್ಥಾನ ನೀಡುವ ಮೂಲಕ ಜಿಲ್ಲಾಭಿವೃದ್ಧಿಗೆ ಹಾಗೂ ಕೊಳ್ಳೇಗಾಲ ಕ್ಷೇತ್ರದ ಸಮಗ್ರ ಅಭಿವೖದ್ದಿಗೆ ಮನ್ನಣೆ ನೀಡಬೇಕು ಎಂದರು.ನೇರವಾದಿ ರಾಜಕಾರಣಿ ಶಾಸಕ ಕೃಷ್ಣಮೂತಿ೯ ಅವರಿಗೆ ಸಚಿವ ಸ್ಥಾನ ಸಿಗುವಂತಾಗಬೇಕು: ಕಮರವಾಡಿ ರೇವಣ್ಣ
ಕ್ಷೇತ್ರದ ಶಾಸಕ ಎ. ಆರ್. ಕೃಷ್ಣಮೂರ್ತಿ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆ, ಅವರು ಬೇರೆ ರಾಜಕೀಯ ನಾಯಕರಂತೆ ಭರವಸೆ ನೀಡಲ್ಲ, ಆಗುವ ಕೆಲಸ ಆಗುತ್ತೆ, ಇಲ್ಲದಿದ್ದರೆ ಖಂಡಿತ ಆಗಲ್ಲ ಎಂದು ಹೇಳುವ ನೇರವಾದಿಗಳು, ನುಡಿದಂತೆ ನಡೆವ ಸಜ್ಜನರು .
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.