ಡಂಬಳದಲ್ಲಿ ಹಗಲಲ್ಲೂ ಉರಿಯುವ ಬೀದಿ ದೀಪ

| Published : Jun 09 2024, 01:40 AM IST

ಸಾರಾಂಶ

ಬೀದಿ ದೀಪ ಬೆಳಗುವಂತೆ ನೋಡಿಕೊಳ್ಳುವುದು ನಿಯಮ, ಆದರೆ ಡಂಬಳ ಗ್ರಾಮ ಸೇರಿದಂತೆ ಹೋಬಳಿಗಳಲ್ಲಿ ಹಗಲಲ್ಲಿ ವಿದ್ಯುತ್‌ ದೀಪಗಳು ಬೆಳಗುತ್ತಿವೆ.

ಡಂಬಳ: ನಿರ್ವಹಣೆ ಕೊರತೆಯಿಂದ ಡಂಬಳ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಹಗಲು ಹೊತ್ತಿನಲ್ಲಿಯೇ ಬೀದಿ ದೀಪಗಳು ಉರಿಯುತ್ತಿವೆ.

ವಿದ್ಯುತ್‌ ಪೋಲು ತಡೆಗೆ ಸರ್ಕಾರ ಹಲವು ಕಾರ್ಯಕ್ರಮ ಜಾರಿಗೆ ತಂದರೂ ಡಂಬಳ ಗ್ರಾಮದಲ್ಲಿ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರಿಯಾದ ನಿರ್ವಹಣೆ ಇಲ್ಲದೇ ಹಗಲಿನಲ್ಲಿಯೇ ಬೀದಿ ದೀಪಗಳು ಉರಿಯುತ್ತಿವೆ.

ಸಂಜೆ ಆಗುತ್ತಲೇ ಬೀದಿ ದೀಪ ಬೆಳಗುವಂತೆ ನೋಡಿಕೊಳ್ಳುವುದು ನಿಯಮ, ಆದರೆ ಡಂಬಳ ಗ್ರಾಮ ಸೇರಿದಂತೆ ಹೋಬಳಿಗಳಲ್ಲಿ ಹಗಲಲ್ಲಿ ವಿದ್ಯುತ್‌ ದೀಪಗಳು ಬೆಳಗುತ್ತಿವೆ. ಈ ಕುರಿತು ಹೆಸ್ಕಾಂ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಿಸದಿರುವುದು ವಿಪರ್ಯಾಸದ ಸಂಗತಿಯಾಗಿದೆ.

ಡಂಬಳ ಗ್ರಾಮದ ಎಪಿಎಂಸಿಗೆ ತೆರಳುವ ರಸ್ತೆಯುದ್ದಕ್ಕೂ ವಿವಿಧ ಬಡಾವಣೆಯಲ್ಲಿ ಹಗಲು ರಾತ್ರಿ ಎನ್ನದೆ 24x7 ಮಾದರಿಯಲ್ಲಿ ಬೀದಿದೀಪಗಳು ಉರಿಯುತ್ತಿವೆ. ಗ್ರಾಮದ ಬಹಳಷ್ಟು ಕಡೆಗಳಲ್ಲಿ ಬೀದಿದೀಪಗಳನ್ನು ಬಂದ್‌ ಮಾಡಲು ಸ್ವೀಚ್‌ ಬೋರ್ಡ್‌ಗಳೇ ಇಲ್ಲ. ಇನ್ನೂ ಕೆಲವು ಕಡೆಗಳಲ್ಲಿ ಸ್ವೀಚ್‌ ಬೋರ್ಡ್‌ಗಳು ಮಳೆ ಗಾಳಿಗೆ ಹಾಳಾಗಿದ್ದು, ಕಿತ್ತು ಹೋಗಿರುವ ಸ್ವೀಚ್‌ ಬೋರ್ಡ್‌ಗಳಿಂದ ವಿದ್ಯುತ್‌ ತಂತಿಗಳು ನೇತಾಡಿ ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಹೆಸ್ಕಾಂ ಅಧಿಕಾರಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ನಿರ್ವಹಣೆ ಕೊರತೆಯಿಂದ ಡಂಬಳ ಗ್ರಾಮದ ಎಪಿಎಂಸಿಯತ್ತ ಹೋಗುವ ಪ್ರಮುಖ ರಸ್ತೆಯಲ್ಲಿ ಹಗಲು ಹೊತ್ತಿನಲ್ಲಿ ಬೀದಿ ದೀಪಗಳು ಉರಿಯುತ್ತಿವೆ.