ಸಾರಾಂಶ
ಮುಳಗುಂದ ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರಿಗಾಗಿ ನಿಲಗುಂದದ ಜೈ ಭೀಮ ಜನಪದ ಕಲಾ ತಂಡದವರಿಂದ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿ ಸುಧಾರಿಸುವ ಸಲುವಾಗಿ ಪಪಂ ವತಿಯಿಂದ ಬೀದಿ ನಾಟಕ ಜರುಗಿತು.
ಮುಳಗುಂದ: ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರಿಗಾಗಿ ನಿಲಗುಂದದ ಜೈ ಭೀಮ ಜನಪದ ಕಲಾ ತಂಡದವರಿಂದ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿ ಸುಧಾರಿಸುವ ಸಲುವಾಗಿ ಪಪಂ ವತಿಯಿಂದ ಬೀದಿ ನಾಟಕ ಜರುಗಿತು.
ಇದರಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳು ಅದರ ಬಳಕೆ ಬಗ್ಗೆ ಜಾಗೃತಿ ಮೂಡಿಸಲಾಯಿತು. ಸರಕಾರದಿಂದ ಸಿಗುವ ಸಾಲ ಸೌಲಭ್ಯಗಳ ಸದ್ಬಳಕೆಯ ಬಗ್ಗೆ ಮಾಹಿತಿ ನೀಡಲಾಯಿತು.ಈ ವೇಳೆ ಗಣ್ಯರಾದ ಬಿ.ಎಂ.ವಾಲಿ, ಅಶೋಕ ಸೋನಗೋಜಿ, ಪಪಂ ಮುಖ್ಯಾಧಿಕಾರಿ ಮಂಜುನಾಥ ಗುಳೇದ, ವಾಣಶ್ರೀ ನಿರಂಜನ ಬೀದಿ ಬದಿ ವ್ಯಾಪಾರಸ್ಥರು, ಪಪಂ ಸಿಬ್ಬಂದಿ ಇತರರು ಭಾಗವವಹಿಸಿದ್ದರು.