ಬೀದಿ ನಾಟಕ: ಉಡುಪಿ ಯುಪಿಎಂಸಿ ತಂಡ ಆರೋಗ್ಯ ಶಿಕ್ಷಣ

| Published : Mar 15 2025, 01:05 AM IST

ಸಾರಾಂಶ

ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ನಾಟಕ ತಂಡದಿಂದ ತಾಯಿ ಮತ್ತು ಮಕ್ಕಳ ಆರೋಗ್ಯ, ಕ್ಷಯ ರೋಗ ಮತ್ತು ಮಾನಸಿಕ ಖಿನ್ನತೆ ಕುರಿತಾದ ಮಾಹಿತಿ ನೀಡುವ ಬೀದಿನಾಟ ಉಡುಪಿಯ ಹಳೆ ಸರ್ಕಾರಿ ಬಸ್ ನಿಲ್ದಾಣದ ಬಳಿ ಶುಕ್ರವಾರ ೨೨ನೇ ಬಾರಿ ಪ್ರದರ್ಶಿಸಲ್ಪಟ್ಟು ಸಮಾಪನಗೊಂಡಿತು.

ಕನ್ನಡಪ್ರಭ ವಾರ್ತೆ ಉಡುಪಿ

ನಗರದ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ನಾಟಕ ತಂಡದಿಂದ ತಾಯಿ ಮತ್ತು ಮಕ್ಕಳ ಆರೋಗ್ಯ, ಕ್ಷಯ ರೋಗ ಮತ್ತು ಮಾನಸಿಕ ಖಿನ್ನತೆ ಕುರಿತಾದ ಮಾಹಿತಿ ನೀಡುವ ಬೀದಿನಾಟ ಉಡುಪಿಯ ಹಳೆ ಸರ್ಕಾರಿ ಬಸ್ ನಿಲ್ದಾಣದ ಬಳಿ ಶುಕ್ರವಾರ ೨೨ನೇ ಬಾರಿ ಪ್ರದರ್ಶಿಸಲ್ಪಟ್ಟು ಸಮಾಪನಗೊಂಡಿತು.

ಸಂಸ್ಕೃತಿ ವಿಶ್ವ ಪ್ರತಿಷ್ಠಾನ, ಉಡುಪಿ, ಜಿಲ್ಲಾ ಪಂಚಾಯಿತಿ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ, ಉಡುಪಿ ಜಿಲ್ಲೆಯ ೨೧ ಕಡೆ ಈ ನಾಟಕ ಪ್ರದರ್ಶನ ಕಂಡಿದೆ.

ಈ ಸಂದರ್ಭ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ್ ಶೆಣೈ, ಅಧ್ಯಕ್ಷ ಪ್ರೊಫೆಸರ್ ಶಂಕರ್, ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್.ಪಿ., ಉಡುಪಿಯ ಶಿಕ್ಷಣಾಧಿಕಾರಿ ಚಂದ್ರಕಲಾ, ಐ.ಎಂ.ಎ. ಉಡುಪಿ - ಕರಾವಳಿಯ ಅಧ್ಯಕ್ಷ ಡಾ. ಸುರೇಶ್ ಶೆಣೈ, ಕಾರ್ಯದರ್ಶಿ ಡಾ. ಶರಶ್ಚಂದ್ರ, ನಿಕಟ ಪೂರ್ವ ಅಧ್ಯಕ್ಷೆ ಡಾ. ರಾಜಲಕ್ಷ್ಮಿ, ಮಹಿಳಾ ವಿಭಾಗದ ಅಧ್ಯಕ್ಷೆ ಡಾ. ಅರ್ಚನಾ ಭಕ್ತ, ಕಲಾವಿದರಾದ ಪದ್ಮಾಸಿನಿ ಉದ್ಯಾವರ, ವಿವೇಕಾನಂದ ಎನ್., ಖಜಾಂಚಿ ರಾಜೇಶ್ ಭಟ್ ಪಣಿಯಾಡಿ, ಆರೋಗ್ಯ ಶುಶ್ರೂಷಕಿ ಮಮತಾ, ಕಾಲೇಜಿನ ಪ್ರಾಚಾರ್ಯ ಆಶಾ ಕುಮಾರಿ, ಬೀದಿ ನಾಟಕದ ಸಂಯೋಜಕ ಕಾಲೇಜಿನ ವಾಣಿಜ್ಯ ಉಪನ್ಯಾಸಕ ರಾಘವೇಂದ್ರ ಜಿ.ಜಿ., ಉಪನ್ಯಾಸಕ ರಾಜೇಶ್ ಕುಮಾರ್, ಚಂದ್ರಶೇಖರ್, ನಿವೃತ್ತ ಉಪನ್ಯಾಸಕ ದಯಾನಂದ, ಬೀದಿನಾಟಕದ ವಿದ್ಯಾರ್ಥಿ ಸಂಚಾಲಕ ಗಿರೀಶ್ ಕಾಮತ್, ಸಹ ಸಂಚಾಲಕ ಜೀವನ್, ವಿದ್ಯಾರ್ಥಿ ಕಲಾವಿದರಾದ ಶ್ರೇಯಾ, ವಿನಾಯಕ್, ಕೃತಿಕಾ, ಪ್ರಧಾನ್, ನಂದೀಶ್, ಸನ್ನಿಧಿ ಶೆಟ್ಟಿ, ಶಿವಾಲಿಕ, ನೇಮಾಭಾರತಿ, ಅಚ್ಚುತ ಇದ್ದರು.