ಸಾರಾಂಶ
ಕನ್ನಡಪ್ರಭವಾರ್ತೆ ಕಾರಟಗಿಪಟ್ಟಣದ ಹೊಸ ಬಸ್ ನಿಲ್ದಾಣ ಸಮೀಪ ಬೀದಿಬದಿ ವ್ಯಾಪಾರಿಗಳ ಅಂಗಡಿಗಳನ್ನು ಪುರಸಭೆ ಅಧಿಕಾರಿಗಳು ತೆರವುಗೊಳಿಸಿ ಎಚ್ಚರಿಕೆ ನೀಡಿದ್ದಾರೆ.ಬಸ್‌ಸ್ಟ್ಯಾಂಡ್ ಮುಂಭಾಗ, ಬುದಗುಂಪಾ, ನವಲಿ ರಸ್ತೆಯ ಅಕ್ಕಪಕ್ಕ ಬೀದಿಬದಿ ವ್ಯಾಪಾರಿಗಳಿಂದ ಸಾರ್ವಜನಿಕರು, ವಾಹನ ಸವಾರರಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಸುರೇಶ್ ಶೆಟ್ಟರ್, ಪಿಐ ಸಿದ್ದರಾಮಯ್ಯ ಜಂಟಿಯಾಗಿ ಕೆಲ ಅಂಗಡಿ ಮುಗ್ಗಟ್ಟುಗಳನ್ನು ತೆರವುಗೊಳಿಸಿದರು.ಪಟ್ಟಣ ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದೆ. ಜನ ದಟ್ಟಣೆ ಮತ್ತು ವಾಹನ ಸಂಚಾರ ಹೆಚ್ಚಿರುವುದರಿಂದ ರಸ್ತೆಯಲ್ಲಿ ನಿತ್ಯ ಟ್ರಾಫಿಕ್ ಸಮಸ್ಯೆಯಾಗುತ್ತಿದೆ. ಬಸ್ಟ್ಯಾಂಡ್ ಪಕ್ಕ ಹಾಗೂ ರಸ್ತೆಗೆ ಅಂಟಿಕೊಂಡು ಅಂಗಡಿ ಹಾಕಿ ವ್ಯಾಪಾರ ಮಾಡುವುದರಿಂದ ತೊಂದರೆಯಾಗುತ್ತದೆ. ಹಾಗಾಗಿ ಸಾರ್ವಜನಿಕರಿಗೆ, ವಾಹನಗಳಿಗೆ ತೊಂದರಯಾಗದಂತೆ ವ್ಯಾಪಾರಿ ಮಾಡಿ. ಇಲ್ಲಂದರೆ ಇಲ್ಲಿಂದ ಜಾಗ ಖಾಲಿ ಮಾಡಿ ಎಂದು ವ್ಯಾಪಾರಸ್ಥರಿಗೆ ಮುಖ್ಯಾಧಿಕಾರಿ ಖಡಕ್ ವಾರ್ನಿಂಗ್ ನೀಡಿದರು.ಬೀದಿಬದಿ ವ್ಯಾಪಾರಿಗಳು ಕಡ್ಡಾಯವಾಗಿ ಲೈಸೆನ್ಸ್ ಪಡೆಯಬೇಕು. ಹಾಗೆ ಯಾರು ತಮ್ಮ ಬಂಡಿಗಳನ್ನು ಒಂದೇ ಸ್ಥಳದಲ್ಲಿ ನಿಲ್ಲಿಸಿಕೊಂಡು ವ್ಯಾಪಾರ ಮಾಡುವಂತಿಲ್ಲ. ಬಸ್ಟ್ಯಾಂಡ್ ಪಕ್ಕದಲ್ಲಿ ಟೀ ಶಾಪ್‌ಗಳಿಗೆ ಅವಕಾಶವಿಲ್ಲ. ತಳ್ಳುವ ಬಂಡಿಗಳ ಮೂಲಕ ವ್ಯಾಪಾರ ಮಾಡಿ, ಅದನ್ನು ಒಂದೇ ಸ್ಥಳದಲ್ಲಿ ನಿಲ್ಲಿಸುವಂತಿಲ್ಲ ಎಂದರು.ಸ್ಥಳದಲ್ಲಿ ಕೆಲ ವ್ಯಾಪಾರಿಗಳು, ನಮಗೆ ವ್ಯಾಪಾರ ಮಾಡಲು ಸೂಕ್ತ ಜಾಗ ಕೊಡಿ. ಇಲ್ಲಂದರೆ ಇಲ್ಲೇ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಿ ಎಂದು ಪಟ್ಟುಹಿಡಿದರು.ಬೂದಗುಂಪಾ, ನವಲಿ ರಸ್ತೆಗೆ ಅಡ್ಡಲಾಗಿ ಹಾಕಿರುವ ಹೂವು, ಹಣ್ಣಿನ ಅಂಗಡಿಗಳು ಹಿಂದಕ್ಕೆ ಹಾಕುವಂತೆ ಸೂಚಿಸಿದರು. ಖಾಲಿ ಇರುವ ಕೆಲ ಅಂಗಡಿ ಮುಗ್ಗಟ್ಟುಗಳ ಪರಿಕರ, ಬಂಡಿಗಳನ್ನು ಪುರಸಭೆ ಸಿಬ್ಬಂದಿ ತೆರವುಗೊಳಿಸಿ ವಾಹನದಲ್ಲಿ ಹೇರಿಕೊಂಡು ಹೋದರು.