ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಶ್ರಮಜೀವಿ ಬೀದಿಬದಿ ವ್ಯಾಪಾರಿಗಳು ಸಂಘಟಿತರಾಗಿತಮ್ಮದೇ ಹಣಕಾಸು ಸಂಸ್ಥೆ ಸ್ಥಾಪನೆ ಮಾಡಿಕೊಂಡು ಸಾಲಸೌಲಭ್ಯ ಪಡೆದು ವ್ಯಾಪಾರ ವಹಿವಾಟು ನಡೆಸಿಕೊಂಡು ಆರ್ಥಿಕ ಸ್ವಾವಲಂಬಿಗಳಾಗುವಂತೆ ಬಿಜೆಪಿ ಮುಖಂಡ, ಎಸ್.ಪಿ.ಚಿದಾನಂದ್ ಸಲಹೆ ಮಾಡಿದರು.ನಗರದ ಕೆ.ಆರ್.ಬಡಾವಣೆಯಲ್ಲಿ ಭಾನುವಾರ ಶ್ರಮಜೀವಿ ಬೀದಿಬದಿ ವ್ಯಾಪಾರಿಗಳ ರಾಜ್ಯ ಸಂಘದಿಂದ ಹಮ್ಮಿಕೊಂಡಿದ್ದ ಶ್ರೀರಾಮ ನವಮಿ ಕಾರ್ಯುಕ್ರಮದಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದಅವರು, ಬಡತನದಲ್ಲಿರುವ ಬೀದಿಬದಿ ವ್ಯಾಪಾರಿಗಳು ತಮ್ಮ ನಿತ್ಯದ ವ್ಯಾಪಾರದ ಬಂಡವಾಳಕ್ಕಾಗಿ ಮೀಟರ್ ಬಡ್ಡಿಯವರ ಮೊರೆಹೋಗುತ್ತಿರುವುದು ಗೊತ್ತಿದೆ. ದೈನಂದಿನ ದುಡಿಮೆಯ ಬಹುಪಾಲನ್ನು ಬಡ್ಡಿಕಟ್ಟಿ ಸಂಕಷ್ಟ ಅನುಭವಿಸುವ ಬದಲುತಮ್ಮದೇ ಹಣಕಾಸು ಸಂಸ್ಥೆ ಸ್ಥಾಪಿಸಿಕೊಂಡು ಅನುಕೂಲ ಪಡೆಯಬೇಕುಎಂದು ಹೇಳಿದರು.ತಮ್ಮದೇನೆಲೆ ಇಲ್ಲದೆ ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಾ ಬದುಕು ಕಟ್ಟಿಕೊಳ್ಳುತ್ತಿರುವ ವ್ಯಾಪಾರಿಗಳ ದುಡಿದು ಬದುಕಬೇಕೆಂಬ ಸ್ವಾವಲಂಬಿ ಬದುಕು ಮೆಚ್ಚುವಂತಾದ್ದು, ರಸ್ತೆ ಪಕ್ಷದಲ್ಲಿ ವ್ಯಾಪಾರ ಮಾಡುವವರು ದಿನನಿತ್ಯ ತರಾವರಿ ಸಮಸ್ಯೆಗಳನ್ನು ಎದುರಿಸುತ್ತಾರೆ.ಇವರ ಸಮಸ್ಯೆಗಳ ನಿವಾರಣೆಗೆ ಶಕ್ತಿಯಾಗಿ ಸಂಘ ನೆರವಿಗೆ ಬಂದು ವ್ಯಾಪಾರಿಗಳಲ್ಲಿ ಆತ್ಮಶಕ್ತಿ ತುಂಬಬೇಕು.ಸದ್ಯ ಶ್ರಮಜೀವಿ ಬೀದಿಬದಿ ವ್ಯಾಪಾರಿಗಳ ಸಂಘ ಅಂತಹ ಕೆಲಸ ಮಾಡುತ್ತಿದೆಎಂದು ಹೇಳಿದರು.ಒಂದು ಸಂಘ ಸ್ಥಾಪನೆ ಮಾಡುವುದು ಸುಲಭದ ಕೆಲಸವಲ್ಲ, ಭಿನ್ನಅಭಿಪ್ರಾಯದವರನ್ನು ಒಗ್ಗೂಡಿಸಿ, ಅವರ ಅಭಿಪ್ರಾಯಗಳಿಗೆ ಮಾನ್ಯತೆ ನೀಡಿ ಸಂಘಟಿಸಲು ಸಹನೆ, ತ್ಯಾಗ ಮನೋಭಾವಇರಬೇಕು.ಇಂತಹಗುಣ ಹೊಂದಿರುವ ಸಂಘದರಾಜ್ಯಾಧ್ಯಕ್ಷ ಎಂ.ಗೋಪಿಯವರು ಸಂಘವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ ಎಂದುಹೇಳಿದರು.ಶ್ರಮಜೀವಿ ಬೀದಿಬದಿ ವ್ಯಾಪಾರಿಗಳ ಸಂಘದ ರಾಜ್ಯಾಧ್ಯಕ್ಷ ಎಂ.ಗೋಪಿ ಮಾತನಾಡಿ, ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವವರು ನಿತ್ಯಅನುಭವಿಸುತ್ತಿದ್ದಯಾತನೆಯನ್ನು ಮನಗಂಡು, ಇವರನ್ನು ಸಂಘಟಿಸಿ ಶಕ್ತಿ ತುಂಬಿ ನೆರವಾಗಬೇಕು ಎನ್ನುವ ಕಾರಣಕ್ಕೆ ಈ ಸಂಘ ಸ್ಥಾಪನೆ ಮಾಡಿದ್ದು, ಸಂಘ ಈಗ ರಾಜ್ಯ ವ್ಯಾಪಿ ವಿಸ್ತರಣೆಗೊಂಡಿದೆ. ಹಲವಾರು ಜಿಲ್ಲೆಗಳಲ್ಲಿ ಸಂಘದ ಶಾಖೆಗಳ ಪದಾಧಿಕಾರಿಗಳು ಸಕ್ರಿಯವಾಗಿ ಕಾರ್ಯಡನಿರ್ವಹಿಸುತ್ತಿದ್ದಾರೆ ಎಂದರು.