ಸಾರಾಂಶ
ರಾಹುಲ್ ಗಾಂಧಿ ಅವರು ಗುಜರಾತ್ ರಾಜ್ಯದಲ್ಲಿ ಕಾಂಗ್ರೆಸ್ ಬಲವರ್ಧನೆಗೆ ಅನುಸರಿಸುತ್ತಿರುವ ಮಾದರಿಗಳನ್ನು ರಾಜ್ಯದಲ್ಲೂ ಜಾರಿ ಮಾಡಬೇಕಿದೆ ಎಂದು ಕಾಂಗ್ರೆಸ್ ಹರಿಹರ ವಿಧಾನಸಭಾ ಕ್ಷೇತ್ರ ಉಸ್ತುವಾರಿ ಕಾರ್ಯದರ್ಶಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ವಿಜಯ್‍ಕುಮಾರ್ ಹೇಳಿದ್ದಾರೆ.
- ಹರಿಹರದಲ್ಲಿ ಕಾರ್ಯಕರ್ತರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ವಿಜಯ್‍ಕುಮಾರ್ ಸಲಹೆ
- - -ಕನ್ನಡಪ್ರಭ ವಾರ್ತೆ ಹರಿಹರ
ರಾಹುಲ್ ಗಾಂಧಿ ಅವರು ಗುಜರಾತ್ ರಾಜ್ಯದಲ್ಲಿ ಕಾಂಗ್ರೆಸ್ ಬಲವರ್ಧನೆಗೆ ಅನುಸರಿಸುತ್ತಿರುವ ಮಾದರಿಗಳನ್ನು ರಾಜ್ಯದಲ್ಲೂ ಜಾರಿ ಮಾಡಬೇಕಿದೆ ಎಂದು ಕಾಂಗ್ರೆಸ್ ಹರಿಹರ ವಿಧಾನಸಭಾ ಕ್ಷೇತ್ರ ಉಸ್ತುವಾರಿ ಕಾರ್ಯದರ್ಶಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ವಿಜಯ್‍ಕುಮಾರ್ ಹೇಳಿದರು.ನಗರದಲ್ಲಿ ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಅವರ ಜನಸಂಪರ್ಕ ಕಚೇರಿಯಲ್ಲಿ ಭಾನುವಾರ ನಡೆದ ಪಕ್ಷದ ಹರಿಹರ ಮತ್ತು ಮಲೇಬೆನ್ನೂರು ಬ್ಲಾಕ್‍ನ ಅಂಗ ಘಟಕಗಳ ಅಧ್ಯಕ್ಷರ ಸಭೆಯಲ್ಲಿ ಅವರು ಮಾತನಾಡಿದರು.
ಗಾಂಧಿ ನಾಡು ಎನಿಸಿದ ಗುಜರಾತ್ ರಾಜ್ಯವು ಹಿಂದಿನಿಂದಲೂ ಪ್ರಜಾತಾಂತ್ರಿಕ, ಜಾತ್ಯತೀತ ಮನೋಭಾವದ ತವರೂರು ಆಗಿದೆ. ಬಿಜೆಪಿಯು ಅಲ್ಲಿ ಕೋಮುವಾದಿತನ ಬಿತ್ತನೆ ಮಾಡಿ ಅಧಿಕಾರ ಪಡೆಯಿತು. ಮತ್ತೆ ಕಾಂಗ್ರೆಸ್ ಈಗ ಪ್ರಜಾತಂತ್ರ ಹಾಗೂ ಜಾತ್ಯತೀತ ಮನೋಭಾವ ಬಿತ್ತಿ, ಪಕ್ಷದತ್ತ ಜನರ ಚಿತ್ತ ಹರಿಸಲು ರಾಹುಲ್ ಗಾಂಧಿ ಕಾರ್ಯತಂತ್ರ ರೂಪಿಸಿದ್ದಾರೆ. ಪಕ್ಷದ ಸಿದ್ಧಾಂತ, ತತ್ವಗಳನ್ನು ಮನೆ ಮನೆಗೆ ತಲುಪಿಸುವ ಕೆಲಸವನ್ನು ಮುಖಂಡರು ಹಾಗೂ ಕಾರ್ಯಕರ್ತರು ಮಾಡಬೇಕಿದೆ. ಕೋಮುವಾದಿತನದಿಂದ ರಾಜ್ಯ ಹಾಗೂ ದೇಶವನ್ನು ರಕ್ಷಿಸಬೇಕಿದೆ ಎಂದು ಹೇಳಿದರು.ಹರಿಹರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ. ಹನುಮಂತಪ್ಪ, ಮಲೇಬೆನ್ನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ಆಬಿದ್ ಅಲಿ ಹಾಗೂ ಪಕ್ಷದ ಅಂಗ ಘಟಕಗಳ ಅಧ್ಯಕ್ಷರು ಭಾಗವಹಿಸಿದ್ದರು.
- - --12ಎಚ್‍ಆರ್‍ಆರ್02:
ಹರಿಹರದಲ್ಲಿ ಭಾನುವಾರ ನಡೆದ ಪಕ್ಷದ ಹರಿಹರ ಮತ್ತು ಮಲೇಬೆನ್ನೂರು ಬ್ಲಾಕ್‍ನ ಅಂಗ ಘಟಕಗಳ ಅಧ್ಯಕ್ಷರ ಸಭೆಯಲ್ಲಿ ಪಕ್ಷದ ಹರಿಹರ ವಿಧಾನಸಭಾ ಕ್ಷೇತ್ರ ಉಸ್ತುವಾರಿ ಕಾರ್ಯದರ್ಶಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ವಿಜಯ್‍ಕುಮಾರ್ ಭಾಗವಹಿಸಿದ್ದರು.