ಸಾರಾಂಶ
ಕನ್ನಡಪ್ರಭ ವಾರ್ತೆ ಜಮಖಂಡಿ
ಇಂದಿನ ಜೀವನ ಶೈಲಿಯಲ್ಲಿ ಏನೋ ಸಾಧಿಸುವ ಬಯಕೆ. ಕಳೆದುಕೊಳ್ಳುವ ಭಯದಿಂದ ಪ್ರತಿಯೊಬ್ಬರೂ ಒಂದಲ್ಲ ಒಂದು ಒತ್ತಡಕ್ಕೆ ಸಿಲುಕಿ, ತೊಂದರೆ ಅನುಭವಿಸುತ್ತಿದ್ದಾರೆ. ಈಶ್ವರೀಯ ಜ್ಞಾನ, ಪ್ರಜಾಪಿತನ ಮೇಲಿನ ನಂಬಿಕೆಯಿಂದ ಪ್ರತಿಯೊಬ್ಬರು ಒತ್ತಡ ಮುಕ್ತರಾಗಿ ಸುಖಮಯ ಜೀವನ ನಡೆಸಲು ಸಾಧ್ಯವಿದೆ ಎಂದು ಮಧ್ಯಪ್ರದೇಶ ಇಂದೋರ್‌ನ ಒತ್ತಡ ಪರಿಹಾರ ತಜ್ಞರಾದ ಬ್ರಹ್ಮಕುಮಾರಿ ಪುನಂ ಅಕ್ಕ ಹೇಳಿದರು.ನಗರದ ವಿಜಯಪುರ ರಸ್ತೆಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ನಡೆದ 9 ದಿನಗಳ ಒತ್ತಡ ಮುಕ್ತ ಜೀವನ ಕುರಿತಾದ ವಿಶೇಷ ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದ ಅವರು, ನಾನು ಶಾಂತಿ ಸಾಗರ, ಪರಮಾತ್ಮನ ಶಾಂತ ಸ್ವರೂಪದ ಸಂತಾನ ಹಾಗೂ ಪ್ರತಿಯೊಂದು ಕರ್ಮವನ್ನು ಶಾಂತಿಯಿಂದ ಮಾಡುತ್ತೇನೆ ಎಂಬ ಮೂರು ಮಂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪರಮಾತ್ಮನ ಧ್ಯಾನ ಮಾಡಬೇಕು. ದೇವರಧ್ಯಾನ ಮಾಡಿದರೆ, ಪರಮಾತ್ಮನು ನಮ್ಮಬಗ್ಗೆ ಕಾಳಜಿ ವಹಿಸುತ್ತಾನೆ ಎಂದು ಹೇಳಿದರು. ಚಿಂತೆ ಮುಕ್ತ ಜೀವನ, ಸಂತೋಷದಿಂದ ಇರುವುದು, ತನ್ನ ಯಥಾರ್ಥ ಪರಿಚಯ (ಆತ್ಮಜ್ಞಾನ), ಈಶ್ವರೀಯ ಅನುಭೂತಿ, ಸುಖಮಯ ಜೀವನದ ರಹಸ್ಯ, ಧ್ಯಾನ, ಅಲೌಕಿಕ ಜನ್ಮ, ಸೃಷ್ಠಿಯ ಪರಿಚಯ, ಪರಮಾತ್ಮನ ಸಂದೇಶ ಕುರಿತಾಗಿ 9 ದಿನಗಳ ಕಾಲ ವಿಶೇಷವಾದ ಪ್ರವಚನ ಜತೆಗೆ ಅದನ್ನು ಪಾಲಿಸಿದವರಿಗಾದ ಅನುಭವಗಳನ್ನು ತಿಳಿಸಿಕೊಡಲಾಯಿತು. ಹಿರಿದಾದ ಸಂತೋಷ ಬರುತ್ತದೆ ಎಂದು ಕಾಯುವುದಕ್ಕಿಂತ ಸಣ್ಣ ಸಂತೋಷದ ಕ್ಷಣ ಬಿಡಬಾರದು. ದೇವರ ಸಂತಾನವಾಗಿರುವ ನಾವುಗಳು ಅವನಷ್ಟೇ ಶಕ್ತಿ ಶಾಲಿಗಳು ಅವನ ಕೃಪೆ ನನ್ನಮೇಲೆ ಯಾವಾಗಲೂ ಇರುತ್ತದೆ ಎಂಬ ಭಾವನೆ, ಆದದ್ದೆಲ್ಲ ಒಳ್ಳೆಯದಕ್ಕೆ, ಒಳ್ಳೆಯದೇ ಆಗುತ್ತದೆ ಎಂಬ ವಿಶ್ವಾಸವಿರಬೇಕು ಎಂದು ವಿವರಿಸಿದರು. ಜೀವನದಲ್ಲಿ ಬದಲಾವಣೆ ತಂದು ಕೊಳ್ಳಬೇಕು. ದೇವರಿಗಾಗಿ ಪ್ರತಿದಿನ ಒಂದು ಗಂಟೆ ಸಮಯ ನೀಡಬೇಕು. ಪರಮಾತ್ಮನ ಸಾಕ್ಷಾತ್ಕಾರಕ್ಕೆ ಧ್ಯಾನ ಮಾಡಬೇಕೆಂದರು. ಇದರಿಂದ ಒತ್ತಡಮುಕ್ತ ಜೀವನ ನಡೆಸಬಹುದು ಅನೇಕ ರೋಗಗಳಿಗೆ ಮೂಲ ಕಾರಣವಾಗಿರವ ಒತ್ತಡ ನಿವಾರಿಸಿಕೊಂಡು ಸುಖಮಯ ಜೀವನ ನಡೆಸ ಬಹುದು ಎಂದರು.
ಜೀವನದಲ್ಲಿ ಅನುಭವದಿಂದ ಪರಿವರ್ತನೆಯಾಗುತ್ತದೆ. ಪರಮಾತ್ಮ ನೀಡಿರುವ ಜ್ಞಾನ ತಿಳಿದುಕೊಳ್ಳಬೇಕು ಎಂದು ಜಮಖಂಡಿ ಮೀರಾ ಅಕ್ಕ ತಿಳಿಸಿದರು. ಜನಸಾಮಾನ್ಯರ ಬದುಕು ಸುಧಾರಿಸಲು ಇಂಥಹ ಕಾರ್ಯಕ್ರಮವನ್ನು ಈಶ್ವರೀಯ ವಿವಿ ಹಮ್ಮಿಕೊಂಡಿದ್ದು ಇದರ ಸದುಪಯೋಗ ಪಡೆದು ಕೊಂಡು ಒತ್ತಡ ಮುಕ್ತರಾಗಿ ಜೀವನ ನಡೆಸಬೇಕೆಂದರು. ಆಧ್ಯಾತ್ಮ ಜ್ಞಾನವನ್ನು ಮೆಲಕು ಹಾಕುತ್ತಿರಬೇಕು ಎಂದರು. ಬೆಳಗಾವಿ ನಾಗೇಶ ಮಾತನಾಡಿ, ಅನೇಕ ಜನ್ಮಗಳ ಕೆಟ್ಟ ಸಂಸ್ಕಾರಗಳನ್ನು ತೆಗೆದು ಹಾಕಲು ಸಮಯಬೇಕಾಗುತ್ತದೆ. ದೇವರಿಗಾಗಿ ಸಮಯ ನೀಡಿ ಉತ್ತಮ ಜೀವನ ನಡೆಸಬಹುದು. ಚಿತ್ರನಟಿಯೊಬ್ಬರು ಕ್ಯಾನ್ಸರ್ ನಂತಹ ಭಯಾನಕ ರೋಗದಿಂದ ಮುಕ್ತಿ ಪಡೆದಿದ್ದಾರೆ ಆಧ್ಯಾತ್ಮ ಭಗವಂತನ ನಿಜವಾದ ಜ್ಞಾನದಿಂದ ಸುಖಮಯ ಜೀವನ ಸಾಧ್ಯವಿದೆ ಎಂದರು.ಪ್ರಕಾಶ ಹಳೆಮನಿ, ಭಾರತಿ ನ್ಯಾಮಗೌಡ, ಮುಧೋಳದ ಪ್ರಶಾಂತ ಕೋಳಿ, ನಿರ್ಮಲಾ ಕರಡಿ, ಕವಿತಾವಾರದ, ರಾಜು ಅಕ್ಕಿ, ಬಸವರಾಜ ನಾಗಮೊಡಿ ಮುಂತಾದವರು ತಮಗಾದ ಅನುಭವಗಳನ್ನು ಹಂಚಿಕೊಂಡರು. ಅಶೋಕ ಪನಾಳಕರ ಪರಿವಾರ, ದೇವರವರ, ರಾಜುವಾರದ, ಪ್ರದೀಪ ಮೆಟಗುಡ್ಡ, ತುಪ್ಪದ, ಉಮೇಶ ಸಿದ್ಧರೆಡ್ಡಿ, ನ್ಯಾಯವಾದಿ ಸಂಗಮೇಶ ಮಾಗಿ, ಸುರೇಶಣ್ಣ, ಬಿಇಓ ಎ.ಕೆ. ಬಸಣ್ಣವರ, ಶಾರದಾ ಅಕ್ಕ,ಜ್ಯೋತಿಅಕ್ಕ, ಜಿ.ಕೆ.ಮಠದ, ಮುಂತಾದವರಿದ್ದರು. ವಿಠ್ಠಲ ತುಳಸೀಗೇರಿ ನ್ಯಾಯವಾದಿಗಳು ಪ್ರಸಾದದ ವ್ಯವಸ್ಥೆ ಮಾಡಿದ್ದರು,