ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ
ನಿಯಮ ಉಲ್ಲಂಘಿಸಿ ರೈತರಿಗೆ ನೀಡುವ ಕಳೆಪೆ ಬಿತ್ತನೆ ಬೀಜ ನೀಡುವುದು, ರಸಗೊಬರಗಳ ಎಂ.ಆರ್.ಪಿ ಬೆಲೆಗಿಂತಹ ಹೆಚ್ಚಿನ ಬೆಲೆಗಳಿಗೆ ಮಾರಾಟ ಮಾಡಿ ಮೋಸ ಮಾಡುವ ರಸಗೊಬ್ಬರ ಅಂಗಡಿ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಕೃಷಿ ಇಲಾಖೆಯ ಜಾಗೃತಿ ದಳದ ಉಪನಿರ್ದೇಶಕ ಪ್ರಮೋದ್ ಎಚ್ಚರಿಕೆ ನೀಡಿದರು.ಜಿಲ್ಲಾ ಕೃಷಿ ಇಲಾಖೆ ಜಾಗೃತಿ ಧಳದ ಅಧಿಕಾರಿಗಳು ಹಾಗೂ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ನೇತೃತ್ವದಲ್ಲಿ ಪಟ್ಟಣದ ವಿವಿಧ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳ ಮಾರಾಟ ಅಂಗಡಿಗಳಿಗೆ ದಿಢೀರ್ ಬೇಟಿ ನೀಡಿ ಪರಿಶಿಲನೆ ನಡೆಸಿದರು.
ಕಳಪೆ ಬೀಜ ವಿತರಿಸಿದರೆ ಕ್ರಮಈ ಸಂದರ್ಭದಲ್ಲಿ ಮಾತನಾಡಿದ ಅವರು, ರೈತರಿಗೆ ಮಾರಾಟ ಮಾಡುವ ಬಿತ್ತನೆ ಬೀಜ, ಕೀಟನಾಶಕ,ರಸಗೊಬ್ಬರ ಸೇರಿದಂತೆ ಕೃಷಿಗೆ ಅಗತ್ಯವಿರುವ ನಾನಾ ಸಲಕರಣೆಗಳನ್ನು ಎಂ.ಆರ್.ಪಿ. ಬೆಲೆಗಳಿಗೆ ಮಾರಾಟ ಮಾರಾಟ ಮಾಡಬೇಕು ಮತ್ತು ರಸೀಧಿ ನೀಡಬೇಕು. ಎಂ.ಆರ್.ಪಿ ಬೆಲೆ ಬದಲಿಗೆ ಕಳೆಪೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಇತ್ಯಾಧಿಗಳನ್ನು ಹೆಚ್ಚಿನ ಬೆಲಗೆ ಮಾರಾಟ ಮಾಡುವುದು ಕಂಡುಬಂದಲ್ಲಿ ಅಂತಹ ಅಂಗಡಿ ಮಾಲೀಕರ ವಿರುದ್ಧ ಕಾನೂನು ರೀತ್ಯ ಕ್ರಮಕ್ಕೆ ಮುಂದಾಗಬೇಕಾಗುತ್ತೆ ಎಂದರು.
ರೈತರಿಗೆ ಆಧಾರ್ ಕಡ್ಡಾಯಪಟ್ಟಣದ ಹಲವು ರಸಗೊಬ್ಬರ ಅಂಗಡಿಗಳ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಪಾಯಿಂಟ್ ಆಫ್ ಸೇಲ್(ಪಿಒಎಸ್) ಯಂತ್ರದಲ್ಲಿ ನಮೂದಿತ ದಾಸ್ತಾನಿಗೂ ಭೌತಿಕ ಸಂಗ್ರಹದಲ್ಲಿ ವ್ಯತ್ಯಾಸ ಕಂಡುಬಂದಿದೆ. ರಸಗೊಬ್ಬರ ದಾಸ್ತಾನು ಮತ್ತು ದರಪಟ್ಟಿ ಪ್ರದರ್ಶನ ಮಾಡದೆ ಇರುವುದು ಸೇರಿದಂತೆ ನಾನಾ ನ್ಯೂನತೆಗಳು ಕಂಡುಬಂದಿರುವ ಹಿನ್ನಲೆಯಲ್ಲಿ ಅಂಗಡಿ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಇದೇ ವೇಳೆ ರೈತರಿಗೆ ರಸಗೊಬ್ಬರಗಳನ್ನು ನೀಡುವಾಗ ಕಡ್ಡಾಯವಾಗಿ ಆಧಾರ್ ಸಂಖ್ಯೆ ಮತ್ತು ಭೂಮಿಯ ವಿವರಗಳನ್ನ ಪಡೆಯುವಂತೆ ಅಂಗಡಿ ಮಾಲೀಕರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆ ಸಿಬ್ಬಂದಿ ಶಂಕರಯ್ಯ, ತಾಲೂಕು ಕೃಷಿ ಪರಿಕರಗಳ ಮಾರಾಟ ಸಂಘದ ಅಧ್ಯಕ್ಷ ಅಶ್ವಥನಾರಾಯಣರೆಡ್ಡಿ, ಕಾರ್ಯದರ್ಶಿ ಚಂದ್ರಾರೆಡ್ಡಿ, ಕೃಷಿ ಫರ್ಟಿಲೈಜರ್ ಮಾಲೀಕರ ನಾಗರಾಜ್, ಭಾರತಿ ಮತ್ತಿತರರು ಇದ್ದರು.0