ನೇಹಾ ಹತ್ಯೆ ಕೃತ್ಯ ಎಸಗಿದವರ ವಿರುದ್ದ ಕಠೀಣ ಕ್ರಮಕ್ಕೆ ಒತ್ತಾಯ

| Published : Apr 24 2024, 02:22 AM IST

ನೇಹಾ ಹತ್ಯೆ ಕೃತ್ಯ ಎಸಗಿದವರ ವಿರುದ್ದ ಕಠೀಣ ಕ್ರಮಕ್ಕೆ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಹಾಡುಹಗಲೇ ರಾಜಾರೊಷವಾಗಿ ಇಂತಹ ಕೃತ್ಯ ಎಸಗಿರುವದು ನೋಡಿದರೆ ಇದರ ಹಿಂದೆ ಲವ್ ಜಿಹಾದ್ ಶಂಕೆ ಕಂಡುಬರುತ್ತಿದೆ. ಇದರ ಕುರಿತು ಸಂಪೂರ್ಣ ತನಿಖೆಯನ್ನು ಕೈಗೊಳ್ಳಬೇಕು.

ಕನ್ನಡಪ್ರಭ ವಾರ್ತೆ ಚಿತ್ತಾಪುರ

ಹುಬ್ಬಳಿ ನಗರದ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೆಮಠ ಅವರನ್ನು ಹಾಡು ಹಗಲೇ ಹತ್ಯೆ ಮಾಡಿರುವದನ್ನು ಇಡೀ ನಾಗರಿಕ ಸಮಾಜ ಖಂಡಿಸುತ್ತದೆ. ಕೃತ್ಯ ಎಸಗಿರುವ ಆರೊಪಿಯನ್ನು ಬಂದಿಸಿ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಚಿತ್ತಾಪುರ ನಾಗರಿಕ ಹಿತರಕ್ಷಣಾ ವೇದಿಕೆ ಮುಖಂಡ ಶ್ರೀನಿವಾಸ ಹಳ್ಳಿ ಒತ್ತಾಯಿಸಿದರು.

ಪಟ್ಟಣದ ಲಾಡ್ಜಿಂಗ್ ಕ್ರಾಸ್ ಬಳಿ ಮಾನವ ಸರಪಳಿ ಮೂಲಕ ಬೃಹತ್ ಪ್ರತಿಭಟನೆಯನ್ನು ನಡೆಸಿದ ನಂತರ ಮಾತನಾಡಿದ ಅವರು ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಹಾಡುಹಗಲೇ ರಾಜಾರೊಷವಾಗಿ ಇಂತಹ ಕೃತ್ಯ ಎಸಗಿರುವದು ನೋಡಿದರೆ ಇದರ ಹಿಂದೆ ಲವ್ ಜಿಹಾದ್ ಶಂಕೆ ಕಂಡುಬರುತ್ತಿದೆ. ಇದರ ಕುರಿತು ಸಂಪೂರ್ಣ ತನಿಖೆಯನ್ನು ಕೈಗೊಳ್ಳಬೇಕು. ಆದರೆ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಸತ್ಯಸತ್ಯಾತೆಯನ್ನು ತಿಳಿಯಲಾರದೇ ಪೂರ್ವಗೃಹ ಪೀಡಿತರಾಗಿ ಕೊಡುತ್ತಿರುವ ಹೇಳಿಕೆಗಳನ್ನು ನೊಡಿದರೆ ಕೊಲೆಯ ತನಿಖೆಯ ದಾರಿ ತಪ್ಪಿಸುವ ಸಂಶಯ ವ್ಯಕ್ತವಾಗುತ್ತಿದೆ.

ನಾಗರಿಕ ಸಮಾಜದ ಪರವಾಗಿ ತಾವು ಯಾವುದೇ ರೀತಿಯ ತನಿಖೆ ದಾರಿ ತಪ್ಪದೇ ಸೂಕ್ತ ತನಿಖೆಯಾಗಬೇಕು. ರಾಜ್ಯಪಾಲರು ಈ ವಿಷಯಕ್ಕೆ ಸಂಬಂಧಪಟ್ಟವರಿಗೆ ತಕ್ಷಣವೇ ಸೂಚನೆ ನೀಡಬೇಕೆಂದು ಒತ್ತಾಯಿಸಿವ ಮನವಿ ಪತ್ರವನ್ನು ತಹಸೀಲ್ದಾರ ರವರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ಕಂಬಳೇಶ್ವರ ಸಂಸ್ಥಾನ ಶ್ರೀ ಸೊಮಶೇಖರ ಶಿವಾಚಾರ್ಯರು, ಹಿತರಕ್ಷಣಾ ವೇದಿಕೆಯ ಅಂಬರೀಶ ಸುಲೇಗಾಂವ, ಆನಂದ ಪಾಟೀಲ್ ನರಬೋಳ, ಸಂತೊಷ ಹಾವೇರಿ, ಮಹಾದೇವ ಅಂಗಡಿ, ವಿಠಲ್ ನಾಯಕ, ಮಲ್ಲಿಕಾರ್ಜುನ ಪೂಜಾರಿ, ಶಿವರಾಮ ಚವ್ವಾಣ, ರಮೇಶ ಬೊಮ್ಮನಳ್ಳಿ, ಪ್ರಭು ಗಂಗಾಣಿ, ಮಹ್ಮದ ಯೂನೂಸ್, ಮಣಿಕಂಠ ಕಡಬೂರ, ಅಜಯಕುಮಾರ ಬಿದರಿ, ಸಂಗಮೇಶ್ವರ ಕಡಬೂರ, ಸಾಬಣ್ಣ ಪೂಜಾರಿ, ರಾಜು ನೇಕಾರ, ಪ್ರಸಾದ ಅವಂಟಿ, ನಿವೇದಿತಾ ಹಾವೇರಿ, ಸುವರ್ಣ ಶಿಲ್ಪಿ, ಶೃತಿ ತಾವರೆ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.