ಉದ್ಯಮಿ ವಿರುದ್ಧ ಕಠಿಣ ಕ್ರಮವಾಗಬೇಕು: ಸುನೀಲ್ ಕುಮಾರ್ ಆಗ್ರಹ

| Published : Mar 17 2025, 12:34 AM IST

ಉದ್ಯಮಿ ವಿರುದ್ಧ ಕಠಿಣ ಕ್ರಮವಾಗಬೇಕು: ಸುನೀಲ್ ಕುಮಾರ್ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಉದ್ಯಮಿ ನಿರ್ಲಕ್ಷ್ಯದಿಂದ ಒಬ್ಬ ಅಮಾಯಕ ವಿದ್ಯಾರ್ಥಿಯ ಜೀವ ಬಲಿಯಾಗಿದೆ. ಶುಕ್ರವಾರ ಬೆಳಗ್ಗೆ 9 ಗಂಟೆಗೆ ಹೋಟೆಲ್ ನಿಂದ ತೆಗೆದುಕೊಂಡು ಹೋದ ಉದ್ಯಮಿ ತಲಕಾಡು ಹೋಗಿ ಅಲ್ಲಿ ಹೋಳಿ ಆಚರಿಸಿದ್ದಾರೆ. ಹೋಳಿ ವೇಳೆ ಕೆಮಿಕಲ್ ಮಿಶ್ರಿತ ಬಣ್ಣ ಊಟಕ್ಕೆ ಸೇರಿದೆ ಎನ್ನಲಾಗಿದೆ. ಉಳಿದ ಊಟವನ್ನು ಸಂಜೆ ನಂತರ ಟಿ.ಕಾಗೇಪುರ ಶಾಲೆಗೆ ನೀಡಿದ್ದಾರೆ

ಕನ್ನಡಪ್ರಭ ವಾರ್ತೆ ಮಳವಳ್ಳಿ

ಗೋಕುಲ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡು, ಓರ್ವ ವಿದ್ಯಾರ್ಥಿ ಮೃತಪಟ್ಟ ಪ್ರಕರಣ ಸಂಬಂಧ ಮಕ್ಕಳಿಗೆ ಊಟ ನೀಡಿದ್ದ ಉದ್ಯಮಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೇಟೆಬೀದಿಯ ಮುಖಂಡ ಎಂ.ಸಿ.ಸುನೀಲ್ ಕುಮಾರ್ ಒತ್ತಾಯಿಸಿದ್ದಾರೆ.

ಉದ್ಯಮಿ ನಿರ್ಲಕ್ಷ್ಯದಿಂದ ಒಬ್ಬ ಅಮಾಯಕ ವಿದ್ಯಾರ್ಥಿಯ ಜೀವ ಬಲಿಯಾಗಿದೆ. ಶುಕ್ರವಾರ ಬೆಳಗ್ಗೆ 9 ಗಂಟೆಗೆ ಹೋಟೆಲ್ ನಿಂದ ತೆಗೆದುಕೊಂಡು ಹೋದ ಉದ್ಯಮಿ ತಲಕಾಡು ಹೋಗಿ ಅಲ್ಲಿ ಹೋಳಿ ಆಚರಿಸಿದ್ದಾರೆ. ಹೋಳಿ ವೇಳೆ ಕೆಮಿಕಲ್ ಮಿಶ್ರಿತ ಬಣ್ಣ ಊಟಕ್ಕೆ ಸೇರಿದೆ ಎನ್ನಲಾಗಿದೆ. ಉಳಿದ ಊಟವನ್ನು ಸಂಜೆ ನಂತರ ಟಿ.ಕಾಗೇಪುರ ಶಾಲೆಗೆ ನೀಡಿದ್ದಾರೆ.

ಘಟನೆಯಲ್ಲಿ ಉದ್ಯಮಿ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಒಬ್ಬ ಅಮಾಯಕ ವಿದ್ಯಾರ್ಥಿ ಬಲಿಯಾಗಿ 25ಕ್ಕೂ ಅಧಿಕ ವಿದ್ಯಾರ್ಥಿಗಳ ಅಸ್ವಸ್ಥಗೊಂಡಿದ್ದಾರೆ. ಹೀಗಾಗಿ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ25 ಲಕ್ಷ ರು. ಪರಿಹಾರ ನೀಡಿ: ಸಿಪಿಐಎಂ ಒತ್ತಾಯ

ಮಳವಳ್ಳಿ:

ವಿಷಪೂರಿತ ಆಹಾರ ಸೇವಿಸಿ ಮೃತಪಟ್ಟ ವಿದ್ಯಾರ್ಥಿ ಕುಟುಂಬಕ್ಕೆ 25 ಲಕ್ಷ ರು. ಪರಿಹಾರ ನೀಡಬೇಕು ಎಂದು ಸಿಪಿಐಎಂನ ತಾಲೂಕು ಸಮಿತಿ ಒತ್ತಾಯಿಸಿದೆ.

ಟಿ.ಕಾಗೇಪುರ ಬಳಿಯ ಗೋಕುಲ ವಿದ್ಯಾ ಸಂಸ್ಥೆ ವಸತಿ ಶಾಲೆ ನಡೆಸಲು ಯಾವುದೇ ಇಲಾಖೆಯಿಂದ ಅಧಿಕೃತ ಅನುಮತಿ ಪಡೆದಿಲ್ಲ. ಅಲ್ಲಿ ನಡೆದಿರುವ ಘಟನೆ ಅಕ್ಷಮ್ಯ. ಶಾಲೆ ಮುಖ್ಯಸ್ಥರು ಹಾಗೂ ಊಟ ನೀಡಿರುವ ವ್ಯಕ್ತಿಗಳನ್ನು ತಕ್ಷಣ ಬಂಧಿಸಿ ಕೊಲೆ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿದರು.

ಶಾಲೆಯವರು ಮದುವೆ, ಬೀಗರ ಔತಣ, ಉತ್ತರ ಕ್ರಿಯಾದಿ ಕಾರ್ಯಕ್ರಮಗಳಲ್ಲಿ ಉಳಿದಂತಹ ಆಹಾರವನ್ನು ಸಂಗ್ರಹಿಸಿ ಆ ಮಕ್ಕಳಿಗೆ ನೀಡುವ ಪ್ರವೃತ್ತಿ ಇತ್ತು. ಇಂತಹ ನಿರ್ಲಕ್ಷ್ಯ ವಿರುದ್ಧ ಕಠಿಣ ಕ್ರಮ ಆಗಬೇಕು. ಮೃತ ವಿದ್ಯಾರ್ಥಿಯ ಪೋಷಕರಿಗೆ 25 ಲಕ್ಷ ರು. ಪರಿಹಾರ ನೀಡಬೇಕು ಎಂದು ಸಿಪಿಐಎಂನ ಕಾರ್ಯದರ್ಶಿ ಸುಶೀಲಾ ಒತ್ತಾಯಿಸಿದ್ದಾರೆ.

ಈ ವೇಳೆ ತಿಮ್ಮೇಗೌಡ, ಆನಂದ್, ಬಸವರಾಜು, ಸುನೀತಾ ಇದ್ದರು.