ಸಾರಾಂಶ
ತಿಪಟೂರು : ತುಮಕೂರು ಲೋಕಸಭಾ ಚುನಾವಣೆಯು ಯಶಸ್ವಿಯಾಗಿ ಮತ್ತು ಶಾಂತಿಯುತವಾಗಿ ನಡೆಯಬೇಕೆಂಬ ಉದ್ದೇಶದಿಂದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಉಪವಿಭಾಗಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳಾದ ಬಿ.ಕೆ.ಸಪ್ತಶ್ರೀ ತಿಳಿಸಿದರು. ನಗರದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಶುಕ್ರವಾರ ಲೋಕಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆ ತಿಪಟೂರು ವಿಧಾನಸಭೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮನೆಯಿಂದ ಮತದಾನ ಮಾಡುವ ಕುರಿತು ಕರೆದಿದ್ದ ಸಭೆಯಲ್ಲಿ ಮಾತನಾಡಿದ ಅವರು, ಏ.13ರಿಂದ 18ರವರೆಗೆ ಮನೆಯಿಂದ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ತಾಲೂಕಿನಲ್ಲಿ 85 ವರ್ಷ ಮೇಲ್ಪಟ್ಟವರು 2356 ಹಿರಿಯ ನಾಗರಿಕರಿದ್ದು ಇವರಲ್ಲಿ 219 ಜನರು ಮಾತ್ರ ಮನೆಯಿಂದ ಮತ ಹಾಕಲಿದ್ದಾರೆ. 2315 ವಿಶೇಷ ಚೇತನರಿದ್ದು ಅದರಲ್ಲಿ 81 ಜನರು ಮನೆಯಿಂದ ಮತ ಚಲಾಯಿಸಲಿದ್ದಾರೆ. ಒಟ್ಟು 300 ಜನರು ಮನೆಯಿಂದ ಚಲಾಯಿಸಲು ಆಪ್ಟ್ ಮಾಡಿದ್ದಾರೆ. ಈ ಸಂಬಂದ 4 ತಂಡಗಳು ಕರ್ತವ್ಯ ನಿರ್ವಹಿಸಿದ್ದಾರೆ. ಅಲ್ಲದೆ ಸರ್ಕಾರಿ ನೌಕರರುಗಳು ಮತ ಚಲಾಯಿಸಲು ಏ.19ರಿಂದ 21ರವರೆಗೆ ಅವಕಾಶ ಕೊಟ್ಟಿದ್ದು ಇದರಲ್ಲಿ ಪೊಲೀಸ್, ವೈದ್ಯರು ಮತ್ತಿತರರು ಸೇರಿರುತ್ತಾರೆ. ಹದಿನೆಂಟು ವರ್ಷ ತುಂಬಿದ ಪ್ರತಿಯೊಬ್ಬರಿಗೂ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕೆಂದು ತಿಳಿಸಿದರು.ಸಭೆಯಲ್ಲಿ ತಹಸೀಲ್ದಾರ್ ಪವನ್‌ಕುಮಾರ್, ಎಡಿಎಲ್‌ಆರ್ ನಂದೀಶ್ ಮತ್ತಿತರರಿದ್ದರು.