ಸಾರಾಂಶ
ತರೀಕೆರೆ: ಮಂಗಳವಾರದಿಂದ ಪ್ರಾರಂಭವಾದ ಕೆಎಸ್.ಆರ್.ಟಿಸಿ ನೌಕರರ ಮುಷ್ಕರದಿಂದ ಸರಿಯಾಗಿ ಬಸ್ಸುಗಳು ಬಾರದೆ ಪ್ರಮುಖ ನಿಲ್ದಾಣವಾದ ತರೀಕೆರೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡುವಂತಾಯಿತು.
ತರೀಕೆರೆ: ಮಂಗಳವಾರದಿಂದ ಪ್ರಾರಂಭವಾದ ಕೆಎಸ್.ಆರ್.ಟಿಸಿ ನೌಕರರ ಮುಷ್ಕರದಿಂದ ಸರಿಯಾಗಿ ಬಸ್ಸುಗಳು ಬಾರದೆ ಪ್ರಮುಖ ನಿಲ್ದಾಣವಾದ ತರೀಕೆರೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡುವಂತಾಯಿತು.ದಿನವಿಡೀ ಪ್ರಯಾಣಿಕರಿಂದ ತುಂಬಿರುತ್ತಿದ್ದ ಪಟ್ಟಣದ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣದಲ್ಲಿ ಇಂದು ಪ್ರಯಾಣಿಕರ ಸಂಖ್ಯೆ ತುಂಬಾ ವಿರಳವಾಗಿತ್ತು. ಬೆಳಗಿನ ಕೆಲ ಸಮಯ ಕೆಲವೇ ಬಸ್ ಗಳು ನಿಲ್ದಾಣಕ್ಕೆ ಬಂದರೂ ಬಸ್ಸುಗಳಲ್ಲಿ ಪ್ರಯಾಣಿಕರಿಲ್ಲದೆ ಖಾಲಿಯಾಗಿತ್ತು, ಇನ್ನು ಮುಷ್ಕರದ ಮಾಹಿತಿಯೇ ಇಲ್ಲದೆ ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ಬಂದು ನಿರಾಶರಾಗಿ ವಾಪಸ್ಸು ತೆರಳುತ್ತಿದ್ದ ದೃಶ್ಯ ಕಂಡುಬಂತು.
ದೈನಂದಿನ ಕೆಲಸ ಕಾರ್ಯಗಳಿಗೆ ದೂರದ ಊರಿನ ಆಸ್ಪತ್ರೆಗಳಿಗೆ, ಹತ್ತಿರದ ಹಲವಾರು ಊರುಗಳಿಗೆ ಹೋಗಿಬರುತ್ತಿದ್ದ ಪ್ರಯಾಣಿಕರಿಗೆ ಸಾರಿಗೆ ಮುಷ್ಕರದಿಂದ ಬೇರೆ ಬೇರೆ ಊರುಗಳಿಗೆ ಸಂಚರಿಸಲು ತೊಂದರೆಯಾಯಿತು. ಕೆ.ಎಸ್. ಆರ್.ಟಿ.ಸಿ .ಬಸ್ ನಿಲ್ದಾಣದಲ್ಲಿ ಬೆಳಗಿನಿಂದಲೇ ಪೊಲೀಸ್ ಬಂದೋಬಸ್ತು ಬಿಗಿಯಾಗಿತ್ತು.-
5ಕೆಟಿಆರ್.ಕೆ.2ಃಕೆ.ಎಸ್.ಆರ್.ಟಿ.ಸಿ.ನೌಕರರ ಮುಷ್ಕರದಿಂದಾಗಿ ತರೀಕೆರೆ ಕೆ.ಎಸ್.ಆರ್.ಟಿ,.ಸಿ.ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ತುಂಬಾ ವಿರಳವಾಗಿತ್ತು.