ಸಾರಾಂಶ
ಹಿರಿಯೂರು: ಎಲ್ಲ ಶಿಕ್ಷಕರು ಕಡ್ಡಾಯವಾಗಿ ಮಾದರಿ ಪ್ರಶ್ನೆ ಪತ್ರಿಕೆ ತಯಾರಿಸಿ ಅದರಂತೆ ತರಗತಿ ಕೋಣೆಗಳಲ್ಲಿ ಅನುಷ್ಠಾನಗೊಳಿಸಬೇಕು. ಆ ಮೂಲಕ ಉತ್ತಮ ಫಲಿತಾಂಶಕ್ಕೆ ಶಿಕ್ಷಕರು ಶ್ರಮಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ. ತಿಪ್ಪೇಸ್ವಾಮಿ ಹೇಳಿದರು.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢ ಶಾಲಾ ವಿಭಾಗ ವತಿಯಿಂದ ಹಮ್ಮಿಕೊಂಡಿದ್ದ ಆಂಗ್ಲಭಾಷಾ ವಿಷಯದ ಪ್ರಶ್ನೆ ಪತ್ರಿಕೆ ತಯಾರಿಕಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಬದಲಾದ ನಿಯಮಗಳಿಗೆ ಹೊಂದಿಕೊಳ್ಳುವುದು ಹಾಗೂ ಎಲ್ಲ ಶಿಕ್ಷಕರು ಈ ವರ್ಷ ಎಸ್ಎಸ್ಎಲ್‌ಸಿ ಫಲಿತಾಂಶ ಉತ್ತಮಗೊಳ್ಳಲು ಶ್ರಮಿಸಬೇಕು ಎಂದರು.ಉಪನಿರ್ದೇಶಕರ ಕಚೇರಿ ವಿಷಯ ಪರಿವೀಕ್ಷಕ ಎಚ್.ಟಿ.ಚಂದ್ರಣ್ಣ, ಉಪ ಪ್ರಾಂಶುಪಾಲ ರಾಮಚಂದ್ರಪ್ಪ, ಬಿ.ಜೆ.ರಾಘವೇಂದ್ರಾಚಾರಿ, ತಾಲೂಕು ಸಹಶಿಕ್ಷಕರ ಸಂಘ ಉಪಾಧ್ಯಕ್ಷೆ ವಸಂತಮ್ಮ, ಸರ್ಕಾರಿ ನೌಕರರ ಸಂಘ ಅಧ್ಯಕ್ಷ ಶಿವಕುಮಾರ್, ಸಂಪನ್ಮೂಲ ವ್ಯಕ್ತಿಗಳಾದ ಎಚ್.ಮಾರುತಿ, ಅಂಬಿಕಾ ಹಾಗೂ ತಾಲೂಕಿನ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ 75 ಆಂಗ್ಲ ಭಾಷಾ ಶಿಕ್ಷಕರು ಪಾಲ್ಗೊಂಡಿದ್ದರು.