ಪರಿಣಾಮಕಾರಿ ಬೋಧನೆಯಿಂದ ಉತ್ತಮ ಫಲಿತಾಂಶ: ಜಿ.ಎಂ.ವೃಷಭೇಂದ್ರಯ್ಯ

| Published : Jan 17 2024, 01:47 AM IST

ಪರಿಣಾಮಕಾರಿ ಬೋಧನೆಯಿಂದ ಉತ್ತಮ ಫಲಿತಾಂಶ: ಜಿ.ಎಂ.ವೃಷಭೇಂದ್ರಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಬಾಲಕಿಯರ ಪ್ರೌಢಶಾಲೆಗೆ ಯಾದಗಿರಿ ಡಯಟ್ ಅಧಿಕಾರಿ ವೃಷಭೇಂದ್ರಯ್ಯ ಜಿ.ಎಂ. ಭೇಟಿ ನೀಡಿ ಮಕ್ಕಳ ಕಲಿಕೆ, ಉಪಹಾರ, ಶಿಕ್ಷಕರ ದಾಖಲಾತಿ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಹುಣಸಗಿ

ಪರಿಣಾಮಕಾರಿ ಬೋಧನೆ ಮೂಲಕ ಶಿಕ್ಷಣದ ಗುಣಮಟ್ಟ ಹಾಗೂ ಫಲಿತಾಂಶ ಹೆಚ್ಚಳಕ್ಕೆ ಶಿಕ್ಷಕರು ಶ್ರಮಿಸಬೇಕು ಎಂದು ಯಾದಗಿರಿ ಡಯಟ್ ಪ್ರಾಂಶುಪಾಲ ವೃಷಭೇಂದ್ರಯ್ಯ ಜಿ.ಎಂ. ಹೇಳಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಗೆ ಭೇಟಿ ನೀಡಿ, ಮಕ್ಕಳ ಕಲಿಕೆ, ಉಪಹಾರ, ಶಿಕ್ಷಕರ ದಾಖಲಾತಿ ಪರಿಶೀಲನೆ ನಡೆಸಿ ಮಾತನಾಡಿದರು. ಡಾ.ಬಿ.ಆರ್.ಅಂಬೇಡ್ಕರ್ ಶಿಕ್ಷಣ ಪಡೆದು ದೇಶಕ್ಕೆ ಮಾದರಿ ಸಂವಿಧಾನ ರೂಪಿಸಿದ್ದಾರೆ. ಶಿಕ್ಷಣ ಇದ್ದರೆ ದೇಶ ಅಭಿವೃದ್ಧಿ ಹೊಂದುತ್ತದೆ. ಪ್ರತಿ ದಿನವು ಕೂಡಾ ಶಿಕ್ಷಣದಲ್ಲಿ ಹೊಸ ರೀತಿ ಕಲಿಕೆ ಇರಬೇಕು ಎಂದು ಶಿಕ್ಷಕರಿಗೆ ಕಿವಿ ಮಾತು ಹೇಳಿದರು.

ತದನಂತರ ತರಗತಿ ಕೋಣೆಗಳಿಗೆ ತೆರಳಿ ಎಸ್ಎಸ್ಎಲ್‌ಸಿ ಮಕ್ಕಳ ಕಲಿಕೆ ಬಗ್ಗೆ ಹಾಗೂ ಬೆಳಗ್ಗೆ, ಸಾಯಂಕಾಲ ಅವಧಿಯ ತರಗತಿಗಳು ನಡೆಯುತ್ತಿವೆಯೇ ಅಥವಾ ಇಲ್ಲವೇ ಎಂಬುವುದರ ಮಾಹಿತಿ ಪಡೆದುಕೊಂಡರು.

ಶಿಕ್ಷಕರಿಗೆ 10ನೇ ತರಗತಿ ಫಲಿತಾಂಶ ಹೆಚ್ಚಳ ಕುರಿತು ಮಾಹಿತಿ ನೀಡಿದರು. ಎಲ್ಲಾ ವಿಷಯ ಶಿಕ್ಷಕರ ದಾಖಲೆ ಪರಿಶೀಲಿಸಿದರು. ಮಕ್ಕಳಿಗೆ ವೈದ್ಯಕೀಯ ತಪಾಸಣೆ ಮಾಡಿಸಿದ್ದು ಹಾಗೂ ಅವರ ಆರೋಗ್ಯದ ಕಡೆ ಗಮನಕೊಡಿ, ಕಾಳಜಿ ವಹಿಸಿ ಎಂದು ತಿಳಿಸಿದರು.

ಮುಖ್ಯ ಗುರುಗಳಾದ ಯಲ್ಲಪ್ಪ ಚಂದನಕೇರಿ, ವಿಜಯಲಕ್ಷ್ಮಿ ಕುಂಬಾರ್, ಬಸವರಾಜ್ ಕೊಳಕೂರ್, ವೆಂಕನಗೌಡ ಅರಿಕೇರಿ, ನಾಗನಗೌಡ ಪಾಟೀಲ್, ಮಶಾಕ್ ಯಾಳಗಿ, ಗುರುರಾಜ್ ಜೋಶಿ, ಅರ್ಪಿತ ಪಾಟೀಲ್, ಸೋಮನಗೌಡ ಬಳವಾಟ, ಲಲಿತ ಮಠ ಸೇರಿ ಇನ್ನಿತರ ಶಿಕ್ಷಕರು ಹಾಜರಿದ್ದರು.