ಕೂಡ್ಲಿಗಿ: ಗ್ರಾಮದಲ್ಲಿ ಎಲ್ಲರೊಂದಿಗೆ ಸಹಬಾಳ್ವೆಯಿಂದ ಜೀವನ ನಡೆಸಿ ಸರ್ಕಾರದ ವಿವಿಧ ಸೌಲಭ್ಯ ಸದುಪಯೋಗಪಡಿಸಿಕೊಂಡು ನಿಮ್ಮ ಮಕ್ಕಳನ್ನು ಉತ್ತಮ ಶಿಕ್ಷಣವಂತರನ್ನಾಗಿ ಮಾಡಬೇಕು. ಗ್ರಾಮದಲ್ಲಿ ಎಲ್ಲರೂ ಅಣ್ಣತಮ್ಮಂದಿರಂತೆ ಒಗ್ಗಟ್ಟಿನಿಂದ ಜೀವನ ನಡೆಸಿ ಗ್ರಾಮದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ವಿಜಯನಗರ ಜಿಲ್ಲಾ ದಲಿತ ಸಂಘರ್ಷ ಸಮಿತಿ (ಡಿಎಸ್ಎಸ್) ಜಿಲ್ಲಾ ಸಂಚಾಲಕ ಎಸ್. ದುರುಗೇಶ್ ಕರೆ ನೀಡಿದರು.
ಅವರು ತಾಲೂಕಿನ ಸಿಡೇಗಲ್ ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ.ಕೃಷ್ಣಪ್ಪ ಬಣ) ವತಿಯಿಂದ ಹಮ್ಮಿಕೊಂಡಿದ್ದ ಗ್ರಾಮ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಸಮಾನತೆ, ಸಹೋದರತ್ವ ಮತ್ತು ಸಾಮರಸ್ಯದ ಭಾವನೆ ಬೆಳೆಸಿಕೊಳ್ಳಬೇಕು. ಶಿಕ್ಷಣವೇ ಸಮಾಜದ ಪ್ರಗತಿಗೆ ಪ್ರಮುಖ ಅಸ್ತ್ರವಾಗಿದ್ದು, ಪ್ರತಿಯೊಬ್ಬರೂ ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸರ್ಕಾರದಿಂದ ದೊರೆಯುವ ಸೌಲಭ್ಯ ಹಾಗೂ ಯೋಜನೆಗಳ ಬಗ್ಗೆ ಅರಿವು ಹೊಂದಿ ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.ದಲಿತ ಸಂಘರ್ಷ ಸಮಿತಿಯು ಸಮಾಜದಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ಶೋಷಿತ ಮತ್ತು ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ಶ್ರಮಿಸುವ ಸಂಘಟನೆಯಾಗಿದೆ. ಗ್ರಾಮ ಮಟ್ಟದಲ್ಲಿ ಸಂಘಟನೆಯು ಬಲಿಷ್ಠವಾಗಿ ಬೆಳೆದು ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೂಡ್ಲಿಗಿ ತಾಲೂಕು ಸಂಚಾಲಕ ಬಡೇಲಡಕು ದುರುಗೇಶ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಘಟನಾ ಸಂಚಾಲಕ ಬಿ.ಟಿ.ಗುದ್ದಿ ದುರುಗೇಶ್, ಕಂದಗಲ್ ಕೆ.ಪರಶುರಾಮ, ಗುಡೇಕೋಟೆ ಗ್ರಾಪಂ ಬಿಲ್ ಕಲೆಕ್ಟರ್ ಎರಿಸ್ವಾಮಿ ಆಚಾರಿ, ಗ್ರಾಪಂ ಮಾಜಿ ಸದಸ್ಯ ಕಾಮತ್ ನಿಂಗಯ್ಯ, ಕಾಮ್ರೇಡ್ ರಮೇಶ್ ಗೌಡ್ರು, ಕೃಷ್ಣಪ್ಪ, ಎಚ್ ಓಬಯ್ಯ, ಜಿ. ಬಸವರಾಜ, ಬೊಮ್ಮಣ್ಣ, ಅನಿತಮ್ಮ ಬೊಮ್ಮಣ್ಣ, ಸಿದ್ದಣ್ಣ, ಅಂಗಡಿ ಕೃಷ್ಣಪ್ಪ, ನಿಂಗಣ್ಣ, ಕಾಟೇನಳ್ಳಿ ಈರಣ್ಣ, ಮರ್ಲಹಳ್ಳಿ ಪಾಪಣ್ಣ, ಬಾಬಣ್ಣ, ಗುಡೇಕೋಟೆ ಪೋಲೀಸ್ ಠಾಣೆಯ ಎಎಸ್ಐ ಮೋಹನ್, ಚೆನ್ನಪ್ಪ, ಹೊಸಳ್ಳಿ ನಾಗಣ್ಣ,ಕಾನಾಮಡುಗು ದುರುಗಪ್ಪ, ಕುಂಬಾರ ಶೀನಪ್ಪ, ಮರ್ಲಹಳ್ಳಿ ನಾಗರಾಜ, ಚಿನ್ನೋಬನಹಳ್ಳಿ ಬಾಬಣ್ಣ, ಕುರಿಹಟ್ಟಿ ಮಹಾಂತೇಶ್, ಸೈಕಲ್ ಬಸವರಾಜ, ಬಣವಿಕಲ್ಲು ಚೌಡೇಶ್, ಜುಮ್ಮೋಬನಹಳ್ಳಿ ಹೊನ್ನೂರಪ್ಪ, ಕಾನಾಮಡುಗು ಫಕೀರಪ್ಪ, ಮಾಳೆಹಳ್ಳಿ ಮಂಜು, ಕುಮತಿ ಯಲ್ಲಪ್ಪ, ಲೋಕಿಕೆರೆ ಶಿವಣ್ಣ, ಕುರಿಹಟ್ಟಿ ರಾಜು, ಮಾಜಿ ಸದಸ್ಯೆ ಕಲ್ಪನಾ, ನಾಗಣ್ಣ, ಕೂಡ್ಲಿಗಿ ಮಹೇಶ್, ನಾಗರಾಜ, ಫಕೀರಪ್ಪ, ಕೃಷ್ಣಮೂರ್ತಿ, ದೇವರಾಜ್, ಭೀಮಪ್ಪ, ಮಾರೇಶ್, ಶಿವರಾಜ, ರಮೇಶ್, ನಾಗರಾಜ, ಪವನ್, ಆನಂದ, ಈಶ್ವರ, ಮೂರ್ತಿ, ರುದ್ರೇಶ್, ನಾಗರಾಜ, ಹನುಮಂತಪ್ಪ, ದುರುಗಪ್ಪ, ಮಾರೇಶ್, ಹುಡೇಂ ಮಂಜು ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಮುಖಂಡರು ಉಪಸ್ಥಿತರಿದ್ದರು.ಮುಖಂಡರು, ಗ್ರಾಮ ಘಟಕದ ಪದಾಧಿಕಾರಿಗಳು, ಗ್ರಾಮಸ್ಥರು ಹಾಗೂ ಸಮುದಾಯದ ಸದಸ್ಯರು ಹಾಜರಿದ್ದರು.